Karnataka news paper

ಮಂಗಳೂರಿನಲ್ಲಿ ಡಿ.24ಕ್ಕೆ ಸರ್ವಧರ್ಮ ಸೌಹಾರ್ದ ಕ್ರಿಸ್‌ಮಸ್‌ ಆಚರಣೆ


ಮಂಗಳೂರು: ವಿಧಾನ ಪರಿಷತ್‌ ಮಾಜಿ ಸದಸ್ಯ ಐವನ್‌ ಡಿಸೋಜ ನೇತೃತ್ವದಲ್ಲಿ ಸರ್ವಧರ್ಮ ಸೌಹಾರ್ದ ಕ್ರಿಸ್ಮಸ್‌ ಕೂಟ ಡಿ.24ರಂದು ಬೆಳಗ್ಗೆ 11.30ಕ್ಕೆ ಬಲ್ಮಠ ಶಾಂತಿ ನಿಲಯ ಬಿಷಪ್‌ ಜತ್ತನ್ನ ಮೆಮೋರಿಯಲ್‌ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ವಿಶ್ರಾಂತ ಧರ್ಮಾಧ್ಯಕ್ಷ ಡಾ.ಅಲೋಶಿಯಸ್‌ ಪೌಲ್‌ ಡಿಸೋಜ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಐವನ್‌ ಡಿಸೋಜ ಅಭಿಮಾನಿ ಬಳಗದ ಪ್ರಮುಖರಾದ ನಾಗೇಂದ್ರ ಕುಮಾರ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮಂಗಳೂರು ಆಕಾಶವಾಣಿ ನಿವೃತ್ತ ಉದ್ಘೋಷಕ ಡಾ.ಮುದ್ದು ಮೂಡುಬೆಳ್ಳೆ, ಕೆಟಿಸಿ ಪ್ರಿನ್ಸಿಪಾಲ್‌ ಪ್ರೊ.ಎಚ್‌.ಎಂ.ವಾಟ್ಸನ್‌, ಮುಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್‌ ಭಾಗವಹಿಸಲಿದ್ದು, ವಿಶೇಷ ಆಹ್ವಾನಿತರಾಗಿ ನಟ ಅರವಿಂದ ಬೋಳಾರ್‌ ಉಪಸ್ಥಿತರಿರಲಿದ್ದಾರೆ.
ಸಾಂಟಾ ಕ್ಲಾಸ್ ಕಡೆಯಿಂದ ಮೇಘನಾ ರಾಜ್ ಬಯಸುತ್ತಿರುವುದು ‘ಇದೊಂದೇ’ ಗಿಫ್ಟ್!
ಜಯವಂತಿ ಟೀಚರ್‌ ನೇತೃತ್ವದಲ್ಲಿ ಕ್ರಿಸ್‌ಮಸ್‌ ಕ್ಯಾರಲ್‌ ಸಂಗೀತ ಕಾರ್ಯಕ್ರಮ ನೆರವೇರಲಿದೆ. ಐವನ್‌ ಡಿಸೋಜ ನೇತೃತ್ವದಲ್ಲಿ ಪ್ರತಿವರ್ಷ ರಮ್ಜಾನ್‌, ದೀಪಾವಳಿ, ಕ್ರಿಸ್ಮಸ್‌ ಹಬ್ಬವನ್ನು ಸರ್ವಧರ್ಮೀಯರ ಸಹಮಿಲನದೊಂದಿಗೆ ಸೌಹಾರ್ದ ಕಾಪಾಡಲು ಆಚರಿಸಲಾಗುತ್ತಿದೆ ಎಂದರು. ಮನುರಾಜ್‌, ಜೇಮ್ಸ್‌ ಪ್ರವೀಣ್‌, ಬೊಂಡಾಲ ಚಿತ್ತರಂಜನ್‌ ಶೆಟ್ಟಿ, ಅಲಿಸ್ಟರ್‌ ಡಿಕುನ್ಹ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮನೆಯಲ್ಲಿ ಕ್ರಿಸ್ಮಸ್‌ ಆಚರಣೆಗೆ ಹೈಕೋರ್ಟ್‌ ಷರತ್ತಿನ ಅನುಮತಿ
ಬೆಂಗಳೂರು: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಣಪತಿಕಟ್ಟೆ ರಸ್ತೆಯ ಎಸ್ತೆಲ್ಲಾಲೂಯಿಸ್‌ ಅವರಿಗೆ ಮನೆಯಲ್ಲಿ ಕ್ರಿಸ್ಮಸ್‌ ಪ್ರಾರ್ಥನೆಗೆ ಹೈಕೋರ್ಟ್‌ ಬುಧವಾರ ಷರತ್ತಿನ ಅನುಮತಿ ನೀಡಿದೆ.

ಕ್ರಿಸ್ಮಸ್‌ ಪ್ರಾರ್ಥನೆ ಹೆಸರಿನಲ್ಲಿ ಮತಾಂತರ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಆಕ್ಷೇಪಿಸಿ ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದರು. ಅದನ್ನು ಪ್ರಶ್ನಿಸಿ ಎಸ್ತೆಲಾ ಲೂಯಿಸ್‌ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ಏಕ ಸದಸ್ಯ ಪೀಠವು ಪ್ರಾರ್ಥನೆಗೆ ಅನುಮತಿ ನೀಡಿತು. ‘ಅರ್ಜಿದಾರರು ತಮ್ಮ ಮನೆಯಲ್ಲಿ ಕ್ರಿಸ್ಮಸ್‌ ಪ್ರಾರ್ಥನೆ ಮಾಡಬಹುದು. ಈ ಸಂದರ್ಭದಲ್ಲಿ ಶಬ್ದ ಮಾಲಿನ್ಯ ಹಾಗೂ ಸಾರ್ವಜನಿಕ ತೊಂದರೆ ಉಂಟು ಮಾಡಬಾರದು. ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆಸಬಾರದು’ ಎಂದು ನ್ಯಾಯಪೀಠ ಅರ್ಜಿದಾರರಿಗೆ ಷರತ್ತು ವಿಧಿಸಿದೆ.
2021ರ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಟೆಕ್ ಬ್ರ್ಯಾಂಡ್ ಕಂಪೆನಿಗಳಿಂದ ಭರ್ಜರಿ ಆಫರ್ಸ್!
ಜೊತೆಗೆ ಪ್ರಾರ್ಥನೆ ಸಂದರ್ಭದಲ್ಲಿ ಪೊಲೀಸರು ನಿಗಾವಹಿಸಬಹುದು ಎಂದು ಸ್ಪಷ್ಟಪಡಿಸಿದೆ. ಅರ್ಜಿಗೆ ಆಕ್ಷೇಪಿಸಿದ್ದ ಸರಕಾರಿ ವಕೀಲ ವಿನೋದ್‌, ‘ಅರ್ಜಿದಾರರು ಕ್ರಿಸ್ಮಸ್‌ ಪ್ರಾರ್ಥನೆ ಹೆಸರಿನಲ್ಲಿ ಅನ್ಯಧರ್ಮದವರನ್ನು ಕ್ರೈಸ್ತ ಮತಕ್ಕೆ ಮತಾಂತರ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದರಿಂದಲೇ ಪೊಲೀಸರು ನೋಟಿಸ್‌ ನೀಡಿದ್ದಾರೆ’ ಎಂದು ವಾದಿಸಿದ್ದರು. ಅರ್ಜಿದಾರ ಪರ ವಕೀಲರು, ‘ಮತಾಂತರ ಚಟುವಟಿಕೆ ನಡೆಸುತ್ತಿಲ್ಲ. ಕೇವಲ ಕ್ರಿಸ್ಮಸ್‌ ಹಬ್ಬದ ಪ್ರಯುಕ್ತ ಪ್ರಾರ್ಥನೆ ಮಾಡಲಾಗುತ್ತಿದೆ. ಅನಗತ್ಯವಾಗಿ ಪೊಲೀಸರು ನೋಟಿಸ್‌ ನೀಡಿದ್ದಾರೆ. ಅರ್ಜಿದಾರರು ಮತಾಂತರ ಚಟುವಟಿಕೆಗೆ ಮುಂದಾಗುವುದೂ ಇಲ್ಲ’ ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು.



Read more