ಎರಡು ಬಾರಿ ಲಭಿಸಿದ ಜೀವದಾನವನ್ನು ಸಮರ್ಥವಾಗಿ ಬಳಸಿಕೊಂಡ ರೋಹಿತ್ ಶರ್ಮ ಮಿಂಚಿನ 81 ರನ್ ಗಳಿಸಿದರು. ಬಳಿಕ ಆರಂಭದಲ್ಲಿ ಬೌಲರ್‌ಗಳು ದುಬಾರಿಯಾದರೂ ಡೆತ್ ಓವರ್‌ಗಳಲ್ಲಿ ಕರಾರುವಾಕ್ ಬೌಲಿಂಗ್ ನಡೆಸಿದರು. ಪರಿಣಾಮ ಗುಜರಾತ್ ಟೈಟನ್ಸ್ ತಂಡವನ್ನು 20 ರನ್‌ಗಳಿಂದ ಮಣಿಸಿದ ಮುಂಬಯಿ ಇಂಡಿಯನ್ಸ್, 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಗಳಿಸಿತು. ಅತ್ತ ಲೀಗ್ ಹಂತದಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ತೋರಿದ್ದ ಶುಭಮನ್ ಗಿಲ್ ಬಳಗ 4ನೇ ತಂಡವಾಗಿ ಅಭಿಯಾನ ಮುಗಿಸಿತು. ಮುಂಬಯಿ ವಿರುದ್ಧದ ಸೋಲಿನಿಂದ ಗುಜರಾತ್ ಟೈಟನ್ಸ್ ತಂಡದ ಆಟಗಾರರ ಕುಟುಂಬಸ್ಥರು ದುಃಖಿತರಾದರು.
ಹೈಲೈಟ್ಸ್:
- ಮುಂಬಯಿ ಇಂಡಿಯನ್ಸ್ ವಿರುದ್ಧ ಸೋಲೊಪ್ಪಿಕೊಂಡ ಗುಜರಾತ್
- ಕಪ್ ಗೆಲ್ಲುವ ಗುಜರಾತ್ ಟೈಟನ್ಸ್ ತಂಡದ ಕನಸು ನುಚ್ಚುನೂರು
- ಸೋಲಿನಿಂದ ದುಃಖಿತರಾದ ಗುಜರಾತ್ ಆಟಗಾರರ ಕುಟುಂಬಸ್ಥರು