Source : Online Desk
ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 372 ರನ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ 2 ಪಂದ್ಯಗಳ ಸರಣಿಯನ್ನು ಕೈ ವಶ ಮಾಡಿಕೊಂಡಿದೆ.
The 372-run victory is #TeamIndia‘s biggest victory by runs in Test cricket! #INDvNZ pic.twitter.com/Kfrpb1zv3i
— BCCI (@BCCI) December 6, 2021
ಭಾರತ ನೀಡಿದ 450ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಕಿವೀಸ್ ಪಡೆ ಕೇವಲ 167ರನ್ ಗಳಿಗೆ ಆಲೌಟ್ ಆಗುವ ಮೂಲಕ ಭಾರತದ ವಿರುದ್ಧ 372 ರನ್ ಗಳ ಹೀನಾಯ ಸೋಲು ಕಂಡಿತು. ಆ ಮೂಲಕ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನಾಲ್ಕನೇ ದಿನದಲ್ಲಿಯೇ ಪಂದ್ಯ ಮುಕ್ತಾಯವಾಗಿದ್ದು ಟೀಮ್ ಇಂಡಿಯಾ ರನ್‌ಗಳ ಭಾರೀ ಅಂತರದಿಂದ ವಿಜಯ ಸಾಧಿಸಿದೆ.
ಮೂರನೇ ದಿನದಾಟದ ಅಂತ್ಯಕ್ಕೆ ಐದು ವಿಕೆಟ್ ಕಳೆದುಕೊಂಡು ಉಳಿದ ಐದು ವಿಕೆಟ್‌ಗಳಲ್ಲಿ 400 ರನ್‌ಗಳಿಸುವ ಅಸಾಧ್ಯ ಸವಾಲನ್ನು ಮುಂದಿಟ್ಟುಕೊಂಡು ನ್ಯೂಜಿಲೆಂಡ್ ನಾಲ್ಕನೇ ದಿನದಾಟವನ್ನು ಆರಂಭಿಸಿತ್ತು. ಆದರೆ ನಾಲ್ಕನೇ ದಿನ ಜಯಂತ್ ಯಾದವ್ ಸ್ಪಿನ್ ಸುಳಿಗೆ ಸಿಲುಕಿದ ನ್ಯೂಜಿಲೆಂಡ್ ಪಡೆ ಭಾರತಕ್ಕೆ ಸುಲಭ ತುತ್ತಾಯಿತು. 28 ರನ್‌ಗಳ ಅಂತರದಲ್ಲಿ ಕೊನೆಯ 5 ವಿಕೆಟ್ ಕಳೆದುಕೊಳ್ಳುವ ಮೂಲಕ ನ್ಯೂಜಿಲೆಂಡ್ ಭಾರತದ ವಿರುದ್ಧ ಭಾರೀ ಅಂತರದಿಂದ ಸೋಲು ಅನುಭವಿಸಿದೆ. ಈ ಮೂಲಕ ಭಾರತ ತವರಿನಲ್ಲಿ ನಡೆದ ಟಿ20 ಹಾಗೂ ಟೆಸ್ಟ್ ಸರಣಿಯಲ್ಲಿ ಒಂದೂ ಸೋಲು ಕಾಣದೆ ಗೆದ್ದು ಬೀಗಿದೆ.