Karnataka news paper

83: ಲೆಜೆಂಡ್ ಕಪಿಲ್ ದೇವ್‌ರನ್ನೇ ಟ್ರೋಲ್ ಮಾಡಿದ ನೆಟ್ಟಿಗರು..!


ಹೈಲೈಟ್ಸ್‌:

  • ಬಿಡುಗಡೆಯಾಗಲಿದೆ ‘83’ ಸಿನಿಮಾ
  • ‘83’ ಸಿನಿಮಾದ ಪ್ರಚಾರ ಕಾರ್ಯಕ್ರಮಗಳಲ್ಲಿ ಕಪಿಲ್ ದೇವ್ ಭಾಗಿ
  • ಕಪಿಲ್ ದೇವ್‌ರನ್ನೇ ಟ್ರೋಲ್ ಮಾಡಿದ ನೆಟ್ಟಿಗರು

1983 ರಲ್ಲಿ ಕ್ರಿಕೆಟ್ ವರ್ಲ್ಡ್ ಕಪ್ ಟೂರ್ನಮೆಂಟ್‌ನಲ್ಲಿ ವೆಸ್ಟ್‌ ಇಂಡೀಸ್ ವಿರುದ್ಧ 43 ರನ್‌ಗಳ ಜಯ ಸಾಧಿಸಿದ ಭಾರತ ವಿಶ್ವಕಪ್ ಟ್ರೋಫಿಯನ್ನ ಎತ್ತಿಹಿಡಿಯಿತು. ಅಂದಿನ ಭಾರತದ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿದ್ದವರು ಕಪಿಲ್ ದೇವ್ (Kapil Dev). ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆಗಳನ್ನೇ ಸೃಷ್ಟಿಸಿದ ಕಪಿಲ್ ದೇವ್ ಮತ್ತು ಅಂದಿನ ಟೀಂ ಇಂಡಿಯಾದ ಕುರಿತಾದ ರೋಚಕ ಕಹಾನಿ ಇದೀಗ ‘83’ ಸಿನಿಮಾ ಆಗಿದೆ.

1983 ರಲ್ಲಿ ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಏನೇನಾಯ್ತು ಎಂಬುದನ್ನ ‘83’ ಸಿನಿಮಾದಲ್ಲಿ ಎಳೆಎಳೆಯಾಗಿ ತೋರಿಸಲಾಗಿದೆ. ‘83’ ಸಿನಿಮಾ ಡಿಸೆಂಬರ್ 24 ರಂದು ತೆರೆಗೆ ಬರಲಿದೆ. ‘83’ ಚಿತ್ರದಲ್ಲಿ ಕಪಿಲ್ ದೇವ್ ಪಾತ್ರದಲ್ಲಿ ರಣ್‌ವೀರ್ ಸಿಂಗ್ (Ranveer Singh) ಅಭಿನಯಿಸಿದ್ದಾರೆ. ಸದ್ಯ ‘83’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಸಿನಿಮಾ ತಂಡ ಬಿಜಿಯಾಗಿದೆ. ‘83’ ಸಿನಿಮಾದ ಪ್ರಮೋಷನ್ಸ್‌ನಲ್ಲಿ ಕಪಿಲ್ ದೇವ್ ಮತ್ತು ಅಂದಿನ ಟೀಂ ಇಂಡಿಯಾದ ಆಟಗಾರರು ಕೂಡ ಪಾಲ್ಗೊಂಡಿದ್ದಾರೆ.

ರಣ್‌ವೀರ್ ಸಿಂಗ್ ಅಭಿನಯದ ‘83’ ಸಿನಿಮಾ ದೆಹಲಿಯಲ್ಲಿ ತೆರಿಗೆ ಮುಕ್ತ!
ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವೇಳೆ ಕಪಿಲ್ ದೇವ್ ಕ್ಯಾಮರಾ ಕಣ್ಣುಗಳಿಗೆ ಸೆರೆ ಸಿಕ್ಕಿದ್ದಾರೆ. ಕ್ಯಾಮರಾಗೆ ಪೋಸ್ ಕೊಡಿ ಅಂತ ಕ್ಯಾಮರಾಮ್ಯಾನ್‌ಗಳು ಕೂಗುತ್ತಿದ್ದಾಗ, ‘’ಈಗ ಆಗಲ್ಲ. ಆಮೇಲೆ ಬರ್ತೀನಿ’’ ಅಂತ ಕಪಿಲ್ ದೇವ್ ಹೇಳುತ್ತಿರುವುದು ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದೆ. ಈ ವೇಳೆ ಕಪಿಲ್ ದೇವ್ ಅವರ ಹಾವಭಾವ ಗಮನಿಸಿದ ನೆಟ್ಟಿಗರು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಕಪಿಲ್ ದೇವ್ ಅವರನ್ನು ರಣ್‌ವೀರ್ ಸಿಂಗ್‌ಗೆ ಹೋಲಿಸಿ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಕಪಿಲ್‌ ದೇವ್ ಜೊತೆ ಫೋಟೋ ತೆಗೆಸಿಕೊಳ್ಳಲು ಸಾಧ್ಯವಾಗದೇ ಕಣ್ಣೀರು ಹಾಕಿದ್ದ ‘ಕಿಚ್ಚ’ ಸುದೀಪ್
‘’ಕಪಿಲ್ ದೇವ್ ರಣ್‌ವೀರ್ ಸಿಂಗ್ ತರಹ ಆಡ್ತಿದ್ದಾರೆ’’, ‘’ರಣ್‌ವೀರ್ ಸಿಂಗ್ ಅವರ ಬಯೋಪಿಕ್‌ಗೆ ಕಪಿಲ್ ದೇವ್ ರೆಡಿಯಾಗುತ್ತಿರಬೇಕು’’, ‘’ರಣ್‌ವೀರ್ ಸಿಂಗ್ ತರಹ ಕಪಿಲ್ ದೇವ್ ಪೋನಿ ಹಾಕಿಕೊಂಡಿದ್ದಾರೆ. ಇನ್ನೊಂದು ಬಯೋಪಿಕ್ ಬರುತ್ತಿದೆ ಅನ್ನೋದಕ್ಕೆ ಇದು ಸೂಚನೆಯೇ?’’, ‘’ರಣ್‌ವೀರ್ ತರಹವೇ ಕಪಿಲ್ ದೇವ್ ಕಾಣ್ತಿದ್ದಾರೆ’’ ಅಂತೆಲ್ಲಾ ಕಾಮೆಂಟ್ ಮಾಡಿ ನೆಟ್ಟಿಗರು ಕಪಿಲ್ ದೇವ್ ಅವರ ಕಾಲೆಳೆದಿದ್ದಾರೆ.

83 Movie: ರಣ್‌ವೀರ್ & ದೀಪಿಕಾ ಪಡುಕೋಣೆ ಸಿನಿಮಾಕ್ಕೆ ಸಾಥ್ ನೀಡಿದ ‘ಕಿಚ್ಚ’ ಸುದೀಪ್!
ಇನ್ನೂ ಅಭಿಮಾನಿಗಳು ಮಾತ್ರ ಕಪಿಲ್ ದೇವ್ ಪರವಾಗಿಯೇ ಬ್ಯಾಟ್ ಬೀಸಿದ್ದಾರೆ. ಕಪಿಲ್ ದೇವ್ ಅವರ ಎನರ್ಜಿ ಕಂಡು ಅನೇಕರು ಭೇಷ್ ಎಂದಿದ್ದಾರೆ. ಕಪಿಲ್ ದೇವ್ ಅವರ ಲುಕ್ ಮತ್ತು ಜೋಷ್ ಹಲವರಿಗೆ ಇಷ್ಟವಾಗಿದೆ.

‘83’ ಸಿನಿಮಾದಲ್ಲಿ ಯಾರೆಲ್ಲಾ ಇದ್ದಾರೆ?
‘83’ ಸಿನಿಮಾದಲ್ಲಿ ಕಪಿಲ್ ದೇವ್ ಆಗಿ ರಣ್‌ವೀರ್ ಸಿಂಗ್ ಕಾಣಿಸಿಕೊಂಡಿದ್ದರೆ, ಕಪಿಲ್ ದೇವ್ ಪತ್ನಿ ರೋಮಿ ಭಾಟಿಯಾ ಆಗಿ ದೀಪಿಕಾ ಪಡುಕೋಣೆ (Deepika Padukone), ಮ್ಯಾನೇಜರ್ ಪಿಆರ್ ಮಾನ್ ಸಿಂಗ್ ಆಗಿ ಪಂಕಜ್ ತ್ರಿಪಾಠಿ, ಸುನೀಲ್ ಗವಾಸ್ಕರ್ ಆಗಿ ತಾಹಿರ್ ರಾಜ್ ಬಸಿನ್, ಮೊಹಿಂದರ್ ಅಮರ್‌ನಾಥ್ ಆಗಿ ಸಾಕಿಬ್ ಸಲೀಂ, ಕಪಿಲ್ ದೇವ್ ತಾಯಿಯಾಗಿ ನೀನಾ ಗುಪ್ತಾ ಮುಂತಾದವರ ದೊಡ್ಡ ತಾರಾಬಳಗವಿದೆ.



Read more