ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಬಿಸಿಸಿಐ (BCCI) ನಡೆಯನ್ನು ಟೀಕಿಸಿದ್ದು, ‘ಐಪಿಎಲ್‌ನಲ್ಲಿ ಆಟಗಾರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಲ್ಲಿ ಸ್ಥಿರತೆʼ ಇಲ್ಲ ಎಂದು ಆರೋಪಿಸಿದ್ದಾರೆ. ಲಖನೌ ಸೂಪರ್ ಜೈಂಟ್ಸ್ ಸ್ಪಿನ್ನರ್ ದಿಗ್ವೇಶ್ ರಾಠಿ ಅವರನ್ನು ಅಮಾನತು ಮಾಡಿರುವುದನ್ನು ಉದಾಹರಣೆಯಾಗಿ ನೀಡಿರುವ ಸೆಹ್ವಾಗ್, ಈ ಹಿಂದೆ ಎಂ.ಎಸ್.ಧೋನಿ ಮತ್ತು ವಿರಾಟ್ ಕೊಹ್ಲಿ ಅವರಂತಹ ಆಟಗಾರರಿಗೆ ಕಡಿಮೆ ಶಿಕ್ಷೆ ನೀಡಲಾಗಿತ್ತು. ಆದರೆ, ದಿಗ್ವೇಶ್ ರಾಠಿಗೆ ಕಠಿಣ ಶಿಕ್ಷೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಹೈಲೈಟ್ಸ್:
- ಬಿಸಿಸಿಐ ನಡೆಯನ್ನು ಟೀಕಿಸಿದ ವೀರೇಂದ್ರ ಸೆಹ್ವಾಗ್
- ಸ್ಪಿನ್ನರ್ ದಿಗ್ವೇಶ್ ರಾಠಿಗೆ ವೀರೇಂದ್ರ ಸೆಹ್ವಾಗ್ ಬೆಂಬಲ
- ದಿಗ್ವೇಶ್ ವಿರುದ್ಧ ಕಠಿಣ ಕ್ರಮದ ಅಗತ್ಯವಿಲ್ಲ ಎಂದ ಸೆಹ್ವಾಗ್