Source : The New Indian Express
ಬೆಳಗಾವಿ: ಡಿಸಂಬರ್ 10 ರಂದು ನಡೆಯುವ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿ ಭಾಗದ ಶಾಸಕರು ಮತ್ತು ಸಂಸದರ ಜೊತೆ ಪ್ರತ್ಯೇಕ ಸಭೆ ನಡೆಸಿದರು ಎಂದು ಬಿಜೆಪಿ ಮುಖಂಡ ಲಕ್ಷ್ಮಣ ಸವದಿ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸವದಿ, ಉತ್ತರ ಕರ್ನಾಟಕ ಭಾಗದ ಎಲ್ಲಾ ಶಾಸಕರು , 10 ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಭಾಗವಹಿಸಬೇಕೆಂಬುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಶಯವಾಗಿದೆ, ಅಧಿವೇಶನದ ಲ್ಲಿ ನೀರಾವರಿ ಯೋಜನೆಗಳು ಮತ್ತು ಬೆಳೆ ಹಾನಿಯ ಬಗ್ಗೆ ಚರ್ತಿಸಲಾಗುವುದು.
ಬಿಜೆಪಿಯಲ್ಲಿ ಒಂದೇ ಮನೆ ಒಂದೇ ಬಾಗಿಲು, ಆದರೆ ಕಾಂಗ್ರೆಸ್ ನಲ್ಲಿ ಒಂದು ಮನೆ ಮತ್ತು ಮೂರು ಬಾಗಿಲುಗಳು, ಹಿರಿಯ ನಾಯಕ ಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೂರು ಬಾಗಿಲುಗಳು ಎಂದು ಸವದಿ ಲೇವಡಿ ಮಾಡಿದ್ದಾರೆ.
ಸ್ವತಂತ್ರ್ಯ ಅಭ್ಯರ್ಥಿ ಲಖನ್ ಜಾರಕಿಹೊಳಿ ಬಿಜೆಪಿಯ ಬಂಡಾಯ ಅಭ್ಯರ್ಥಿಯಲ್ಲ ಎಂದು ಸವದಿ ಸ್ಪಷ್ಟ ಪಡಿಸಿದ್ದಾರೆ. ಲಖನ್ ಅವರು ಕಾಂಗ್ರೆಸ್ ಟಿಕೆಟ್‌ನಲ್ಲಿ ಗೋಕಾಕ್ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಲಖನ್ ಎಂದಿಗೂ ಬಿಜೆಪಿ ಸದಸ್ಯನಾಗಿರಲಿಲ್ಲ, ಅವರು ಪಕ್ಷದ ಸದಸ್ಯನಾಗಿದ್ದರೆ ಮಾತ್ರ ಬಿಜೆಪಿಯ ಬಂಡಾಯಗಾರರಾಗುತ್ತಿದ್ದರು ಎಂದು ಹೇಳಿದ್ದಾರೆ.