600 ಕಿ.ಮಿ ಉದ್ದದ, 36000 ಕೋಟಿಯ ಗಂಗಾ ಎಕ್ಸ್‌ಪ್ರೆಸ್‌ವೇಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ
”ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವನ್ನು ಅನುಷ್ಠಾನಗೊಳಿಸಿದರೆ ಪೂರ್ಣ ಪ್ರಮಾಣದಲ್ಲಿ ನಮ್ಮ ಆಡಳಿತ ಭಾಷೆಯನ್ನು ಬಳಸಬಹುದಾಗಿದೆ. ಈ ಕುರಿತು ಆಗಬೇಕಾದ ಬದಲಾವಣೆಯ ಕುರಿತು ಸಮಗ್ರವಾಗಿ ಚರ್ಚಿಸಲಾಗಿದೆ. ಶಾಸ್ತ್ರೀಯ ಭಾಷೆಗೆ ಸಂಬಂಧಿಸಿದ ವಿಷಯಗಳನ್ನು ಮಾನವ ಸಂಪನ್ಮೂಲ ಇಲಾಖೆಗೆ ತಿಳಿಸಲಾಗಿದೆ” ಎಂದು ನಾಗಾಭರಣ ಮಾಹಿತಿ ನೀಡಿದರು.
ಬ್ಯಾಂಕ್‌ನಲ್ಲಿ ಕನ್ನಡ ಸಿಬ್ಬಂದಿ
”ಬ್ಯಾಂಕಿನಲ್ಲಿ ಕನ್ನಡ ಬಾರದ ಅಧಿಕಾರಿಗಳಿಂದ ಕರ್ನಾಟಕದ ಗ್ರಾಹಕರು ಬಹುದೊಡ್ಡ ಮಟ್ಟದಲ್ಲಿ ಸಮಸ್ಯೆಗಳನ್ನು ಎದುರಿಸಿದ್ದಾರೆ. ಗ್ರಾಹಕನಿಗೆ ಅವನದ್ದೇ ಭಾಷೆಯಲ್ಲಿ ಸೇವೆ ಒದಗಿಸುವುದು ಮುಖ್ಯವೆಂದು ಅರಿತುಕೊಂಡ ಕೇಂದ್ರ ಸರಕಾರವು ಗ್ರೂಪ್ ಸಿ ಮತ್ತು ಡಿ ಮತ್ತು ಗ್ರಾಮೀಣ ಬ್ಯಾಂಕ್‌ಗಳಿಗೆ ಕನ್ನಡದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ಗ್ರೂಪ್ ಎ ಮತ್ತು ಬಿ ಹುದ್ದೆಗಳಿಗೂ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂಬುದು ಪ್ರಾಧಿಕಾರದ ಈಗಿನ ಹಕ್ಕೊತ್ತಾಯ” ಎಂದು ನಾಗಾಭರಣ ತಿಳಿಸಿದರು.
ಎರಡು ಬಾರಿ ಸ್ಪೀಕರ್ ಆಗಿದ್ದವರ ಅಸಭ್ಯ ಹೇಳಿಕೆ ವಿಕೃತಿಯ ಪರಮಾವಧಿ: ರಮೇಶ್ ಕುಮಾರ್‌ಗೆ ಎಚ್‌ಡಿಕೆ ಚಾಟಿ
ಪತ್ರಿಕಾಗೋಷ್ಠಿಯಲ್ಲಿ ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ್, ಎಚ್.ಜಿ. ಶೋಭಾ, ಅಶ್ವಿನಿ ಶಂಕರ್, ಡಾ. ಸಿ.ಎ. ಕಿಶೋರ್, ಸುರೇಶ್ ಬಡಿಗೇರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ಲ ಮತ್ತಿತರರು ಉಪಸ್ಥಿತರಿದ್ದರು.