Ravichandran Ashwin On Digvesh Rathi – ಇಡೀ ಕ್ರಿಕೆಟ್ ವಿಶ್ವವೇ LSG ಬೌಲರ್ ದಿಗ್ವೇಶ್ ರಾಠಿ ಅವರ ವಿವಾದಿತ ರನೌಟ್ ಪ್ರಯತ್ನವನ್ನು ಟೀಕಿಸಿದೆ. ಆದರೆ ಮಂಕಂಡಿಂಗ್ ಗೆ ಖ್ಯಾತರಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಮಾತ್ರ ಬೆಂಬಲಿಸಿದ್ದು ನಾಯಕ ರಿಷಬ್ ಪಂತ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಾಯಕನಾಗಿ ರಿಷಬ್ ಪಂತ್ ಅವರು ದಿಗ್ವೇಶ್ ರಾಠಿ ಅವರನ್ನು ಬೆಂಬಲಿಸಬೇಕಿತ್ತು. ಆದರೆ ಅಪೀಲನ್ನು ಹಿಂಪಡೆದು ಜಿತೇಶ್ ಶರ್ಮಾ ಅವರನ್ನು ತಬ್ಬಿಕೊಳ್ಳುವ ಮೂಲಕ ರಿಷಬ್ ಪಂತ್ ಅವರು ತಮ್ಮನ್ನು ತಾವು ಸಣ್ಣವನನ್ನಾಗಿ ಮಾಡಿಕೊಂಡರು ಎಂದು ಟೀಕಿಸಿದ್ದಾರೆ.
ಹೈಲೈಟ್ಸ್:
- ದಿಗ್ವೇಶ್ ರಾಠಿ ಅವರು ಜಿತೇಶ್ ಶರ್ಮಾ ಅವರನ್ನು ಮಂಕಡಿಂಗ್ ಶೈಲಿಯಲ್ಲಿ ರನೌಟ್ ಮಾಡಿದ್ದಕ್ಕೆ ಆರ್ ಅಶ್ವಿನ್ ಬೆಂಬಲ
- ಇದೇವೇಳೆ ಮನವಿ ಹಿಂಪಡೆದದ್ದಕ್ಕೆ LSG ನಾಯಕ ರಿಷಬ್ ಪಂತ್ ಅವರ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಆಕ್ರೋಶ
- ಅಪೀಲು ಹಿಂಪಡೆದು ಜಿತೇಶ್ ಶರ್ಮಾನನ್ನು ತಬ್ಬಿಕೊಳ್ಳುವ ಮೂಲಕ ತಮ್ಮನ್ನು ತಾವು ಸಣ್ಣವರನ್ನಾಗಿ ಮಾಡಿಕೊಂಡರು ಎಂದ ಅಶ್ವಿನ್