IPL Playoffs 2025 – ಐಪಿಎಲ್ ನ ಲೀಗ್ ಪಂದ್ಯಗಳೆಲ್ಲಾ ಮುಗಿದು ಇದೀಗ ಪ್ಲೇ ಆಫ್ ಪಂದ್ಯಗಳಿಗೆ ಕಣ ಸಿದ್ಧವಾಗಿದೆ. ಗುರುವಾರ ನಡೆಯುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರಸ್ಪರ ಮುಖಾಮುಖಿಯಾಗಲಿವೆ. ವಿಶೇಷವೆಂದರೆ ಈ ಎರಡೂ ತಂಡಗಳೂ ಈವರೆಗೆ ಐಪಿಎಲ್ ಟ್ರೋಫಿ ಗೆದ್ದಿಲ್ಲ. ಹವಾಮಾನ ವರದಿಯ ಪ್ರಕಾರ ಮೇ 29 ರಂದು ಚಂಡೀಗಢದಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆ. ಆದರೂ ಮಳೆಯಿಂದಾಗಿ ಪಂದ್ಯ ರದ್ದಾದರೆ ಆಗ ಪಂಜಾಬ್ ಕಿಂಗ್ಸ್ ಗೆ ಲಾಭವಾಗಲಿದೆ. ಅದು ಹೇಗೆ? ಇಲ್ಲಿದೆ ವಿವರ.
ಹೈಲೈಟ್ಸ್:
- ಮೇ 29ರಂದು ಚಂಡೀಗಢದಲ್ಲಿ ನಡೆಯುವ ಪ್ರಥಮ ಕ್ವಾಲಿಫೈಯರ್ ನಲ್ಲಿ PBKS Vs RCB ಮುಖಾಮುಖಿ
- ಮಳೆ ಬಂದರೆ ಪಂಜಾಬ್ ಕಿಂಗ್ಸ್ (PBKS) ತಂಡವು ರನ್ ರೇಟ್ ಆಧಾರದಲ್ಲಿ ಫೈನಲ್ ಪ್ರವೇಶ
- ಜರಾತ್ ಟೈಟಾನ್ಸ್ (GT) ಮತ್ತು ಮುಂಬೈ ಇಂಡಿಯನ್ಸ್ (MI) ತಂಡ ಮೇ 30 ರಂದು ಎಲಿಮಿನೇಟರ್ ಪಂದ್ಯ