Karnataka news paper

IPL 2025: LSG ವಿರುದ್ಧ ಐತಿಹಾಸಿಕ ಗೆಲುವು; ಹೊಸ ಇತಿಹಾಸ ಬರೆದ RCB, 18 ವರ್ಷಗಳಲ್ಲಿ ಇದೇ ಮೊದಲು!


RCB make IPL history: ವಿರಾಟ್‌ ಕೊಹ್ಲಿ(54) ಅರ್ಧ ಶತಕದ ಜತೆ ಜಿತೇಶ್‌ ಶರ್ಮ(85*) ಮತ್ತು ಮಯಂಕ್‌ ಅಗರ್ವಾಲ್‌ (41) ಅವರ 107 ರನ್‌ಗಳ ಸಮಯೋಚಿತ ಜತೆಯಾಟದ ಬಲದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಲಖನೌ ಸೂಪರ್‌ಜೈಂಟ್ಸ್‌ ತಂಡವನ್ನು ಮಣಿಸಿತು. ಇದರೊಂದಿಗೆ ಒಟ್ಟು 19 ಅಂಕಗಳನ್ನು ಕಲೆಹಾಕಿದ ಆರ್‌ಸಿಬಿ, ಅಂಕಪಟ್ಟಿಯಲ್ಲಿ 2ನೇ ತಂಡವಾಗಿ ಲೀಗ್‌ ಹಂತವನ್ನು ಪೂರ್ಣಗೊಳಿಸಿತು. 2016ರ ನಂತರ ಮೊದಲ ಸಲ ಅಗ್ರ ಎರಡರಲ್ಲಿ ಸ್ಥಾನ ಪಡೆದ ಆರ್‌ಸಿಬಿ ಮೇ 29ರಂದು ಮುಲ್ಲನ್‌ಪುರದಲ್ಲಿ ನಡೆಯಲಿರುವ ಕ್ವಾಲಿಫೈಯರ್ಸ್‌ 1ರಲ್ಲಿ ಫೈನಲ್‌ ಪ್ರವೇಶಕ್ಕಾಗಿ ಪಂಜಾಬ್‌ ಕಿಂಗ್ಸ್‌ ತಂಡದ ಸವಾಲು ಎದುರಿಸಲಿದೆ.

ಹೈಲೈಟ್ಸ್‌:

  • ಲಖನೌ ವಿರುದ್ಧ ಐತಿಹಾಸಿಕ ಗೆಲುವು
  • ಕ್ವಾಲಿಫೈಯರ್ಸ್‌ 1ಕ್ಕೆ ಆರ್‌ಸಿಬಿ ಲಗ್ಗೆ
  • 2016ರ ನಂತರ ಮೊದಲ ಸಲ ಅಗ್ರ ಎರಡರಲ್ಲಿ ಸ್ಥಾನ



Source link