Karnataka news paper

ಮೂರು ದಾಖಲೆ ಮುಡಿಗೇರಿಸಿಕೊಂಡ ‘ಬಾಳೇ ಬಂಗಾರ’


ಹಿರಿಯ ನಟಿ, ನಟ ದಿವಂಗತ ವಿಷ್ಣುವರ್ಧನ್‌ ಅವರ ಪತ್ನಿ ಭಾರತಿ ವಿಷ್ಣುವರ್ಧನ್‌ ಬದುಕಿನ ಕುರಿತ ಸಾಕ್ಷ್ಯಚಿತ್ರ ‘ಬಾಳೇ ಬಂಗಾರ’ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಕಲಾಂ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿವೆ ಎಂದು ಚಿತ್ರದ ನಿರ್ಮಾಪಕ ಅನಿರುದ್ಧ ಜಟ್ಕರ್‌ ತಿಳಿಸಿದ್ದಾರೆ. 

ದಾಖಲೆ ಶೀರ್ಷಿಕೆ ಮತ್ತು ವರ್ಣನೆ ಬದುಕಿರುವ ಮೇರು ನಟಿಯೊಬ್ಬರ ಕುರಿತಾದ ಅತ್ಯಂತ ದೀರ್ಘ ಕಾಲಾವಧಿಯ ಸಾಕ್ಷ್ಯಚಿತ್ರವಿದು. ಅನಿರುದ್ಧ ಅವರೇ ಈ ಸಾಕ್ಷ್ಯಚಿತ್ರದ ಪರಿಕಲ್ಪನೆ, ಸಂಶೋಧನೆ, ಲೇಖನ, ನಿರೂಪಣೆ ಹಾಗೂ ನಿರ್ದೇಶನ ಮಾಡಿದ್ದಾರೆ. ಕೀರ್ತಿ ಇನ್ನೋವೇಷನ್ಸ್ ಲಾಂಛನದ ಅಡಿ ಈ ಸಾಕ್ಷ್ಯಚಿತ್ರ ನಿರ್ಮಾಣವಾಗಿದೆ.

 ಶೀಘ್ರದಲ್ಲೇ ಆನ್‌ಲೈನ್‌ ವೇದಿಕೆಗಳಲ್ಲಿ ವೀಕ್ಷಣೆಗೆ ಬಿಡುಗಡೆ ಮಾಡಲಾಗುವುದು ಎಂದು ಅನಿರುದ್ಧ ತಿಳಿಸಿದ್ದಾರೆ.



Read More…Source link