Karnataka news paper

ಜಿತೇಶ್ ಶರ್ಮಾ- ಮಾಯಾಂಕ್ ಅಗರ್ವಾಲ್ ಸಾಹಸಕ್ಕೆ ಬೆಚ್ಚಿದ LSG: ಭರ್ಜರಿ ಗೆಲುವಿನೊಂದಿಗೆ ಸೇಫಾದ RCB!


RCB Vs LSG Match Report – ಇದು ನಿಜಕ್ಕೂ ಅದ್ಭುತ ಗೆಲುವು. ರಿಷಬ್ ಪಂತ್ ಅವರ ಶತಕ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ 227 ರನ್ ಗಳ ಬೃಹತ್ ಮೊತ್ತ ಗಳಿಸಿದಾಗ ರಾಯಲ್ ಚಾಲೆಂಜರ್ಸ ಗೆಲುವು ಕಷ್ಟಕರ ಎಂದೇ ಭಾವಿಸಲಾಗಿತ್ತು. ಆದರೆ ನಾಯಕ ಜಿತೇಶ್ ಶರ್ಮಾ ಅವರ ಹೊಡೆಬಡಿಯ ಆಟಗ ನೆರವಿನಿಂದ ಆರ್ ಸಿಬಿ ರನ್ ಪರ್ವತವನ್ನೇ ಮೀರಿ ನಿಂತಿದೆ. ಇದು ಐಪಿಎಲ್ ಇತಿಹಾಸದಲ್ಲೇ ತಂಡವೊಂದು ಬೆಂಬತ್ತಿ ಗೆಲುವು ಸಾಧಿಸಿದ ಅತಿ ದೊಡ್ಡ ಮೊತ್ತವಾಗಿದೆ. ಈ ಮೂಲಕ ಆರ್ ಸಿಬಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಿಯಾಗಿ ಕ್ವಾಲಿಫೈಯರ್ ಪಂದ್ಯವನ್ನಾಡಲು ಅರ್ಹತೆ ಪಡೆದುಕೊಂಡಿದೆ.

ಹೈಲೈಟ್ಸ್‌:

  • ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು
  • ಅಂಕಪಟ್ಟಿಯಲ್ಲಿ 2ನೇ ಸ್ಥಾನಿಯಾಗಿರುವುದರಿಂದ ಕ್ವಾಲಿಫೈಯರ್ ಪಂದ್ಯವನ್ನಾಡುವ ಅರ್ಹತೆ
  • LSG ಗೆಲುವನ್ನು ಕಸಿದುಕೊಂಡ ಮಾಯಾಂಕ್ ಅಗರ್ವಾಲ್- ಜಿತೇಶ್ ಶರ್ಮಾ ಅವರ 107 ರನ್ ಜೊತೆಯಾಟ



Source link