Karnataka news paper

ಬೆಂಗಳೂರಿನಲ್ಲಿ ನಡೆಯಲಿದೆ ಐಪಿಎಲ್‌ 2022 ಮೆಗಾ ಆಕ್ಷನ್‌!


ಹೈಲೈಟ್ಸ್‌:

  • ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿ.
  • ಲಖನೌ ಮತ್ತು ಅಹ್ಮದಾಬಾದ್‌ ಫ್ರಾಂಚೈಸಿಗಳು ಹೊಸ ತಂಡಗಳಾಗಿ ಸೇರ್ಪಡೆ.
  • 2022ರ ಫೆಬ್ರವರಿಯಲ್ಲಿ ನಡೆಯಲಿದೆ ಐಪಿಎಲ್‌ ಆಟಗಾರರ ಹರಾಜು ಪ್ರಕ್ರಿಯೆ.

ಬೆಂಗಳೂರು: ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿ ಸಲುವಾಗಿ ನಡೆಯಬೇಕಿರುವ ದೊಡ್ಡ ಮಟ್ಟದ ಐಪಿಎಲ್‌ ಆಟಗಾರರ ಹರಾಜು ಪ್ರಕ್ರಿಯೆ ಫೆಬ್ರವರಿಯಲ್ಲಿ ಬೆಂಗಳೂರು ನಗರದಲ್ಲಿ ಜರುಗಲಿದೆ ಎಂದು ವರದಿಯಾಗಿದೆ.

ಈ ನಡುವೆ ನವೆಂಬರ್‌ 30ರಂದು ಹಾಲಿ 8 ಫ್ರಾಂಚೈಸಿ ತಂಡಗಳು ತಮ್ಮಲ್ಲಿ ಉಳಿಸಿಕೊಂಡ ಆಟಗಾರರ ಅಂತಿಮ ಪಟ್ಟಿ ಪ್ರಕಟ ಮಾಡಿಯಾಗಿದೆ. ಈ ಮೂಲಕ ಹಲವು ಸ್ಟಾರ್‌ ಆಟಗಾರರು ಹರಾಜು ಪಟ್ಟಿ ಸೇರಿದ್ದಾರೆ. ಈ ನಡುವೆ ಎರಡು ಹೊಸ ತಂಡಗಳಾದ ಅಹ್ಮದಾಬಾದ್ ಮತ್ತು ಲಖನೌ ಫ್ರಾಂಚೈಸಿಗಳಿಗೆ ಮೆಗಾ ಆಕ್ಷನ್‌ಗೂ ಮುನ್ನ ಹರಾಜಿಗೆ ಬಿಡುಗಡೆ ಆಗಿರುವ ಆಟಗಾರರ ಪೈಕಿ ಗರಿಷ್ಠ 3 ಆಟಗಾರರ ಜೊತೆಗೆ ಒಪ್ಪಂದ ಮಾಡಿಕೊಳ್ಳುವಂತೆ ಬಿಸಿಸಿಐ ಡಿ.26ರವರೆಗೆ ಗಡುವು ನೀಡಿದೆ.

ಹೊಸ ತಂಡಗಳು ಆಯ್ಕೆ ಮಾಡಿಕೊಳ್ಳುವ ಮೂರು ಆಟಗಾರರಿಗೆ ಕ್ರಮವಾಗಿ 5, 11 ಮತ್ತು 7 ಕೋಟಿ ರೂ.ಗಳನ್ನು ನೀಡಬೆಕಾಗುತ್ತದೆ. ಇತ್ತೀಚಿನ ಮಾಹಿತಿ ಪ್ರಕಾರ ಐಪಿಎಲ್‌ ಮೆಗಾ ಆಕ್ಷನ್‌ ಬೆಂಗಳೂರಿನಲ್ಲಿ ಫೆಬ್ರವರಿ 7 ಮತ್ತು 8ರಂದು ನಡೆಯಲಿದೆ ಎಂದು ತಿಳಿದು ಬಂದಿದೆ. ಇದಕ್ಕೂ ಮೊದಲು ಜನವರಿಯ ಎರಡನೇ ವಾರದೊಳಗೆ ಮೆಗಾ ಆಕ್ಷನ್‌ ನಡೆಯಲಿದೆ ಎಂದು ವರದಿಗಳಾಗಿದ್ದವು.

IPL ಪ್ಲೇಯರ್ಸ್‌ ರಿಟೆನ್ಷನ್: ಎಲ್ಲ 8 ತಂಡಗಳ ಸಂಪೂರ್ಣ ವಿವರ ಇಲ್ಲಿದೆ!

“ಕೋವಿಡ್‌-19 ಪರಿಸ್ಥಿತಿ ಅಪಾಯ ಮಟ್ಟಕ್ಕೆ ಮುಟ್ಟದೇ ಇದ್ದರೆ, ಭಾರತದಲ್ಲೇ ಐಪಿಎಲ್‌ ಆಟಗಾರರ ಹರಾಜು ಪ್ರಕ್ರಿಯೆ ಜರುಗಲಿದೆ. ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮವನ್ನು ಫೆಬ್ರವರಿ 7-8ರಂದು ಬೆಂಗಳೂರಿನಲ್ಲಿ ಆಯೋಜಿಸಲು ಮುಂದಾಗಿದ್ದೇವೆ. ಈ ಬಗ್ಗೆ ತಯಾರಿ ನಡೆಯುತ್ತಿದೆ,” ಎಂದು ಬಿಸಿಸಿಐನ ಹಿರಿಯ ಅಧಿಕಾರಿ ಒಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ಎಲ್ಲಾ 8 ತಂಡಗಳು ಈಗಾಗಲೇ ಬಿಡುಗಡೆ ಮಾಡಿರುವ ಆಟಗಾರರ ಪಟ್ಟಿಯಲ್ಲಿ ಕೆಎಲ್‌ ರಾಹುಲ್‌, ಡೇವಿಡ್‌ ವಾರ್ನರ್‌, ರಶೀದ್‌ ಖಾನ್‌, ಶಿಖರ್‌ ಧವನ್‌, ಶ್ರೇಯಸ್‌ ಅಯ್ಯರ್‌, ಜಾನಿ ಬೈರ್‌ಸ್ಟೋವ್‌, ಫಾಫ್‌ ಡು’ಪಲ್ಎಸಿಸ್‌ ಮತ್ತು ಹಾರ್ದಿಕ್‌ ಪಾಂಡ್ಯ ಅವರಂತಹ ಸ್ಟಾರ್‌ ಆಟಗಾರರ ದಂಡೇ ಇದೆ. ಅಂದಹಾಗೆ ಈ ಸ್ಟಾರ್‌ಗಳಲ್ಲಿ 6 ಆಟಗಾರರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಅವಕಾಶ ಹೊಸ ತಂಡಗಳಿಗಿದೆ.

ಅಂದಹಾಗೆ ಲಖನೌ ಫ್ರಾಂಚೈಸಿ ಈಗಾಗಲೇ ಜಿಂಬಾಬ್ವೆ ದಿಗ್ಗಜ ಆಂಡಿ ಫ್ಲವರ್‌ ಅವರನ್ನು ಮುಖ್ಯ ಕೋಚ್‌ ಆಗಿ ತೆಗೆದುಕೊಂಡಿದೆ. ಜೊತೆಗೆ ಕೋಲ್ಕತಾ ನೈಟ್‌ ರೈಡರ್ಸ್‌ (ಕೆಕೆಆರ್‌) ತಂಡಕ್ಕೆ ಎರಡು ಬಾರಿ ಟ್ರೋಫಿ ಗೆದ್ದುಕೊಟ್ಟ ಮಾಜಿ ನಾಯಕ ಗೌತಮ್‌ ಗಂಭೀರ್‌ ಅವರನ್ನು ಮೆಂಟರ್‌ ಆಗಿ ಆಯ್ಕೆ ಮಾಡಿಕೊಂಡಿದೆ. ಈ ನಡುವೆ ಹರಾಜಿಗೂ ಮುನ್ನ ಕೆಎಲ್‌ ರಾಹುಲ್ ಮತ್ತು ರಶೀದ್‌ ಖಾನ್‌ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ ವರದಿಯಾಗಿದೆ.

ಮೆಗಾ ಆಕ್ಷನ್‌ನಲ್ಲಿ ಈ ಆಟಗಾರನ ಖರೀದಿಗೆ ಹಣದ ಹೊಳೆ ಹರಿಯಲಿದೆ: ಲಕ್ಷ್ಮಣ್!

ಲಖನೌ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್‌
1. ಕೆಎಲ್‌ ರಾಹುಲ್‌ (ನಾಯಕ/ಓಪನರ್‌)
2. ಇಶಾನ್‌ ಕಿಶನ್‌ (ವಿಕೆಟ್‌ಕೀಪರ್‌/ಓಪನರ್‌)
3. ಮನೀಶ್ ಪಾಂಡೆ (ಬ್ಯಾಟ್ಸ್‌ಮನ್‌)
4. ಬೆನ್‌ ಸ್ಟೋಕ್ಸ್‌ (ಆಲ್‌ರೌಂಡರ್‌)
5. ಶಾರುಖ್‌ ಖಾನ್‌ (ಆಲ್‌ರೌಂಡರ್‌)
6. ಶಿಮ್ರಾನ್‌ ಹೆಟ್ಮಾಯೆರ್‌ (ಬ್ಯಾಟ್ಸ್‌ಮನ್‌)
7. ಹರ್ಷಲ್‌ ಪಟೇಲ್‌ (ಬಲಗೈ ವೇಗಿ)
8. ರಶೀದ್‌ ಖಾನ್‌ (ಲೆಗ್ ಸ್ಪಿನ್ನರ್‌)
9. ಮೊಹಮ್ಮದ್‌ ಶಮಿ (ಬಲಗೈ ವೇಗಿ)
10. ಕಗಿಸೊ ರಬಾಡ (ಬಲಗೈ ವೇಗಿ)
11. ಯುಜ್ವೇಂದ್ರ ಚಹಲ್‌ (ಲೆಗ್‌ ಸ್ಪಿನ್ನರ್‌)

ಹರಾಜಿಗೂ ಮೊದಲೇ ತಂಡಗಳು ಖರೀದಿಸಲಿರುವ 6 ಆಟಗಾರರನ್ನು ಹೆಸರಿಸಿದ ಚೋಪ್ರಾ!

ಅಹ್ಮದಾಬಾದ್‌ ತಂಡದ ಸಂಭಾವ್ಯ ಇಲೆವೆನ್‌ ಹೀಗಿದೆ
1. ಪೃಥ್ವಿ ಶಾ (ಓಪನರ್‌)
2. ಜಾನಿ ಬೈರ್‌ಸ್ಟೋವ್‌ (ವಿಕೆಟ್‌ಕೀಪರ್‌/ಬ್ಯಾಟ್ಸ್‌ಮನ್‌)
3. ದೇವದತ್‌ ಪಡಿಕ್ಕಲ್‌ (ಬ್ಯಾಟ್ಸ್‌ಮನ್‌)
4. ಶ್ರೇಯಸ್‌ ಅಯ್ಯರ್‌ (ಬ್ಯಾಟ್ಸ್‌ಮನ್‌/ಕ್ಯಾಪ್ಟನ್‌)
5. ಐಯಾನ್‌ ಮಾರ್ಗನ್‌ (ಬ್ಯಾಟ್ಸ್‌ಮನ್‌)
6. ಶಕಿಬ್‌ ಅಲ್‌ ಹಸನ್‌ (ಆಲ್‌ರೌಂಡರ್‌)
7. ಜೇಸನ್‌ ಹೋಲ್ಡರ್‌ (ಆಲ್‌ರೌಂಡರ್‌)
8. ಶಾರ್ದುಲ್‌ ಠಾಕೂರ್‌ (ಆಲ್‌ರೌಂಡರ್‌)
9. ಆರ್‌ ಅಶ್ವಿನ್‌ (ಆಫ್‌ ಸ್ಪಿನ್ನರ್‌)
10. ರವಿ ಬಿಷ್ಣೋಯ್‌ (ಲೆಗ್‌ ಸ್ಪಿನ್ನರ್‌)
11. ಚೇತನ್‌ ಸಾಕರಿಯ (ಎಡಗೈ ವೇಗಿ)



Read more