Karnataka news paper

ರಣ್‌ವೀರ್ ಸಿಂಗ್ ಅಭಿನಯದ ‘83’ ಸಿನಿಮಾ ದೆಹಲಿಯಲ್ಲಿ ತೆರಿಗೆ ಮುಕ್ತ!


ಹೈಲೈಟ್ಸ್‌:

  • ಡಿಸೆಂಬರ್ 24, 2021 ರಂದು ‘83’ ಸಿನಿಮಾ ಬಿಡುಗಡೆಯಾಗಲಿದೆ
  • ‘83’ ಚಿತ್ರ ದೆಹಲಿಯಲ್ಲಿ ತೆರಿಗೆ ಮುಕ್ತವಾಗಿದೆ
  • ದೆಹಲಿ ಸರ್ಕಾರಕ್ಕೆ ಧನ್ಯವಾದ ತಿಳಿಸಿದ ನಿರ್ಮಾಪಕ

ಕ್ರಿಕೆಟ್‌ನಲ್ಲಿ ಭಾರತ ಮೊದಲ ಬಾರಿಗೆ ವಿಶ್ವಕಪ್ ಎತ್ತಿಹಿಡಿದ ರೋಚಕ ಘಟನೆ ಕುರಿತಾದ ಸಿನಿಮಾ ‘83’ 2020ರಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ, ಕೋವಿಡ್-19 ಭೀತಿ ಹಾಗೂ ಲಾಕ್‌ಡೌನ್‌ನಿಂದಾಗಿ ‘83’ ಸಿನಿಮಾ 2020ರಲ್ಲಿ ರಿಲೀಸ್ ಆಗಲಿಲ್ಲ. 2021ರ ಜುಲೈ ತಿಂಗಳಿನಲ್ಲಿ ‘83’ ಸಿನಿಮಾ ಬಿಡುಗಡೆ ಮಾಡಲು ಯೋಚಿಸಲಾಗಿತ್ತು. ಆದರೆ, ಕೋವಿಡ್ ಎರಡನೇ ಅಲೆಯಿಂದಾಗಿ ಆಗಲೂ ‘83’ ಚಿತ್ರ ತೆರೆಗೆ ಬರಲಿಲ್ಲ. ಇದೀಗ ಡಿಸೆಂಬರ್ 24, 2021 ರಂದು ‘83’ ಸಿನಿಮಾ ವಿಶ್ವದಾದ್ಯಂತ ತೆರೆ ಕಾಣಲಿದೆ.

ವಿವಿಧ ಭಾಷೆಗಳಲ್ಲಿ ‘83’ ಸಿನಿಮಾ ತೆರೆಗೆ ಬರಲಿದ್ದು, ಸದ್ಯ ಚಿತ್ರದ ಪ್ರಚಾರ ಕಾರ್ಯದಲ್ಲಿ ಚಿತ್ರತಂಡ ಬಿಜಿಯಾಗಿದೆ. ಹೀಗಿರುವಾಗಲೇ, ‘83’ ಚಿತ್ರತಂಡಕ್ಕೆ ಒಂದು ಸಂತಸದ ಸುದ್ದಿ ಸಿಕ್ಕಿದೆ. ಅದೇನಪ್ಪಾ ಅಂದ್ರೆ, ‘83’ ಚಿತ್ರ ದೆಹಲಿಯಲ್ಲಿ ತೆರಿಗೆ ಮುಕ್ತವಾಗಿದೆ ಎಂದು ಘೋಷಿಸಲಾಗಿದೆ.

ನನ್ನ ಮಗುವಿನ ಹೆಸರು ಶಾರ್ಟ್‌ಲಿಸ್ಟ್ ಮಾಡ್ತಿದ್ದೇನೆ, ದೀಪಿಕಾ ಪಡುಕೋಣೆ ತರದ ಮಗು ಬೇಕು: ರಣವೀರ್ ಸಿಂಗ್
ಹೌದು, ‘83’ ಸಿನಿಮಾ ತೆರಿಗೆ ಮುಕ್ತ ಎಂದು ದೆಹಲಿ ಸರ್ಕಾರ ಘೋಷಿಸಿದೆ. ಇದರಿಂದ ಖುಷಿ ಪಟ್ಟ ‘83’ ಸಿನಿಮಾ ನಿರ್ಮಾಪಕ ಶಿಬಾಶೀಶ್ ಸರ್ಕಾರ್ ಸೋಷಿಯಲ್ ಮೀಡಿಯಾ ಮೂಲಕ ದೆಹಲಿ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ‘’ದೆಹಲಿಯಲ್ಲಿ ‘83’ ಚಿತ್ರ ತೆರಿಗೆ ಮುಕ್ತ ಚಲನಚಿತ್ರವನ್ನಾಗಿ ಘೋಷಿಸಿದ್ದಕ್ಕಾಗಿ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋದಿಯಾ ಅವರಿಗೆ ಧನ್ಯವಾದಗಳು. ಭಾರತದ ಶ್ರೇಷ್ಠ ವಿಜಯದ ಕಥೆಯನ್ನು ಭಾರತದ ವೀಕ್ಷಕರಿಗೆ ತಲುಪಿಸಲು ಇದು ಸಹಕಾರಿಯಾಗುತ್ತದೆ’’ ಎಂದು ನಿರ್ಮಾಪಕ ಶಿಬಾಶೀಶ್ ಸರ್ಕಾರ್ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

83 Movie: ರಣ್‌ವೀರ್ & ದೀಪಿಕಾ ಪಡುಕೋಣೆ ಸಿನಿಮಾಕ್ಕೆ ಸಾಥ್ ನೀಡಿದ ‘ಕಿಚ್ಚ’ ಸುದೀಪ್!
ದೊಡ್ಡ ತಾರಾಬಳಗ
‘83’ ಸಿನಿಮಾದಲ್ಲಿ ಅಂದಿನ ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ಕಪಿಲ್ ದೇವ್ (Kapil Dev) ಆಗಿ ರಣ್‌ವೀರ್ ಸಿಂಗ್ (Ranveer Singh), ಕಪಿಲ್ ದೇವ್ ಪತ್ನಿ ರೋಮಿ ಭಾಟಿಯಾ ಆಗಿ ದೀಪಿಕಾ ಪಡುಕೋಣೆ, ಮ್ಯಾನೇಜರ್ ಪಿಆರ್ ಮಾನ್ ಸಿಂಗ್ ಆಗಿ ಪಂಕಜ್ ತ್ರಿಪಾಠಿ, ಸುನೀಲ್ ಗವಾಸ್ಕರ್ ಆಗಿ ತಾಹಿರ್ ರಾಜ್ ಬಸಿನ್, ಮೊಹಿಂದರ್ ಅಮರ್‌ನಾಥ್ ಆಗಿ ಸಾಕಿಬ್ ಸಲೀಂ, ಕಪಿಲ್ ದೇವ್ ತಾಯಿಯಾಗಿ ನೀನಾ ಗುಪ್ತಾ ಮುಂತಾದವರ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ.

ಕಬೀರ್ ಖಾನ್, ದೀಪಿಕಾ ಪಡುಕೋಣೆ, ವಿಷ್ಣುವರ್ಧನ್ ಇಂದುರಿ, ಸಾಜಿದ್ ನಾದಿಯಾಡ್‌ವಾಲಾ, ರಿಲಯನ್ಸ್ ಎಂಟರ್‌ಟೇನ್ಮೆಂಟ್, ಫಾಂಥೋಮ್ ಫಿಲ್ಮ್ಸ್, 83 ಫಿಲ್ಮ್ ಲಿಮಿಟೆಡ್ ಜಂಟಿಯಾಗಿ 83 ಚಿತ್ರವನ್ನು ನಿರ್ಮಾಣ ಮಾಡಿದೆ. ‘83’ ಚಿತ್ರಕ್ಕೆ ಕಬೀರ್ ಖಾನ್ ಆಕ್ಷನ್ ಕಟ್ ಹೇಳಿದ್ದಾರೆ.

ಕಪಿಲ್ ದೇವ್ ಬಯೋಪಿಕ್ ’83’ ಸಿನಿಮಾ ಹೇಗಿದೆ? ಚಿತ್ರದಲ್ಲಿ ರಣವೀರ್ ಸಿಂಗ್ ಕಾಣಲಿಲ್ಲ ಎಂದಿದ್ದೇಕೆ ಪ್ರೇಕ್ಷಕರು
‘83’ ಚಿತ್ರದ ವೀಕ್ಷಿಸಿ ಮೆಚ್ಚುಗೆ
ಇತ್ತೀಚೆಗಷ್ಟೇ ‘83’ ಸಿನಿಮಾದ ವಿಶೇಷ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ‘83’ ಚಿತ್ರವನ್ನು ವೀಕ್ಷಿಸಿದ ತಾರೆಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ‘’83’ ಸಿನಿಮಾದಲ್ಲಿ ನನಗೆ ರಣ್‌ವೀರ್ ಸಿಂಗ್ ಕಾಣಲೇ ಇಲ್ಲ. ತೆರೆ ಮೇಲೆ ನನಗೆ ಕಾಣಿಸಿದ್ದು ಕಪಿಲ್ ದೇವ್ ಮಾತ್ರ. ರಣ್‌ವೀರ್ ಸಿಂಗ್ ಅವರ ಟ್ರಾನ್ಸ್‌ಫಾರ್ಮೇಷನ್ ಕಂಡು ನಾನು ಮೂಕವಿಸ್ಮಿತನಾದೆ’’ ಎಂದು ಸುನೀಲ್ ಶೆಟ್ಟಿ ಟ್ವೀಟ್ ಮಾಡಿದ್ದರು.



Read more