Karnataka news paper

`ಈ ಬಾರಿ CSK ಬಗ್ಗೆ ನನಗೂ ಬೇಸರವಾಗಿದೆ, ಒಬ್ಬಂಟಿಯಾಗಿ ಕೂತು ಅತ್ತಿದ್ದೇನೆ!’: ಮನಬಿಚ್ಚಿ ಮಾತನಾಡಿದ ರವಿಚಂದ್ರನ್ ಅಶ್ವಿನ್


ಐಪಿಎಲ್ 2025 ಸೀಸನ್ ನಲ್ಲಿ ಚೆನೈ ಸೂಪರ್ ಕಿಂಗ್ಸ್ ಆಟದ ಬಗ್ಗೆ ತಂಡದ ಹಿರಿಯ ಆಟಗಾರ ರವಿಚಂದ್ರನ್ ಅಶ್ವಿನ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ. CSK ತಂಡದ ಅಭಿಮಾನಿಯೊಬ್ಬರು ಅಶ್ವಿನ್ ಆಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಬೇಸರಗೊಂಡು ತಂಡ ತೊರೆಯುವಂತೆ ಹೇಳಿದ್ದರು. ಅದಕ್ಕೆ ಅಶ್ವಿನ್ ಅವರು ತಂಡದ ಪ್ರದರ್ಶದ ಬೇಸರ ವ್ಯಕ್ತಪಡಿಸಿದ್ದಾರೆ. ಇಷ್ಟು ಬೇಸರ ಯಾವ ವರ್ಷವೂ ಆಗಿರಲಿಲ್ಲ. ಎಲ್ಲೆಲ್ಲಿ ಸುಧಾರಿಸಿಕೊಳ್ಳಬೇಕು ಎಂಬ ಬಗ್ಗೆ ನನಗೆ ಸ್ಪಷ್ಟ ಕಲ್ಪನೆ ಇದೆ. ಹಾಗಾಗಿ ಮುಂದಿನ ಬಾರಿ ಉತ್ತಮ ಪ್ರದರ್ಶನ ನೀಡುವ ಭರವಸೆ ನೀಡಿದ್ದಾರೆ.

ಹೈಲೈಟ್ಸ್‌:

  • ಈ ಬಾರಿಯ ಐಪಿಎಲ್ ಸೀಸನ್ ನಲ್ಲಿ ಸಿಎಸ್ ಕೆ ಕಳಪೆ ಪ್ರದರ್ಶನದಿಂದ ದುಃಖಗೊಂಡಿರುವ ಆರ್ ಅಶ್ವಿನ್
  • ಅಶ್ವಿನ್ ಅವರು ತಂಡ ತೊರೆಯುವಂತೆ ಮನವಿ ಮಾಡಿದ ಸಿಎಸ್ ಕೆ ಅಭಿಮಾನಿಗೆ ಅಶ್ವಿನ್ ಪ್ರತಿಕ್ರಿಯೆ
  • ಮುಂದಿನ ಸೀಸನ್ ನಲ್ಲಿ ತಮ್ಮ ಪ್ರದರ್ಶನವನ್ನು ಸುಧಾರಿಸಲು ನಿರ್ಧರಿಸಿರುವುದಾಗಿ ತಿಳಿಸಿದ ಹಿರಿಯ ಸ್ಪಿನ್ನರ್



Source link