ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುರಿಯಾಳ ಸಮೀಪ ಇರಾಕೋಡಿಯಲ್ಲಿ ಮಂಗಳವಾರ ಸಂಜೆ ಪಿಕಪ್ ಚಾಲಕ ರಹೀಂ ಎಂಬಾತನನ್ನು ಇಬ್ಬರು ಯುವಕರು ತಲವಾರಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಮರಳು ಅನ್‌ಲೋಡ್ ಮಾಡುತ್ತಿದ್ದಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಗಾಯಗೊಂಡಿರುವ ಮತ್ತೊಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಹೈಲೈಟ್ಸ್:
ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಕುರಿಯಾಳ ಸಮೀಪ ಇರಾಕೋಡಿಯಲ್ಲಿ ಮಂಗಳವಾರ ಸಂಜೆ ಪಿಕಪ್ ಚಾಲಕ ರಹೀಂ ಕೊಲೆ
ಇಬ್ಬರು ಯುವಕರು ತಲವಾರಿನಿಂದ ಹಲ್ಲೆ ಮಾಡಿ ಕೊಲೆ, ಕೊಳತ್ತಮಜಲು ನಿವಾಸಿ ರಹೀಂ ಸಾವು
ಮರಳು ಅನ್‌ಲೋಡ್ ಮಾಡುತ್ತಿದ್ದಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ ಕೃತ್ಯ
ಗಾಯಗೊಂಡಿರುವ ಮತ್ತೊಬ್ಬ ವ್ಯಕ್ತಿ ಆಸ್ಪತ್ರೆಗೆ ದಾಖಲು, ತನಿಖೆ ಆರಂಭಿಸಿದ ಪೊಲೀಸರು