ರಾಜಸ್ಥಾನ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ ಅವರನ್ನು ಇದೀಗ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಹೋಲಿಸುವ ಕಾರ್ಯ ವ್ಯಾಪಕವಾಗಿ ನಡೆಯುತ್ತಿದೆ. ಭಾರತ ತಂಡಕ್ಕೆ 16ರ ಹರೆಯದಲ್ಲಿ ಎಂಟ್ರಿ ಕೊಟ್ಟಿದ್ದ ಸಚಿನ್ ತೆಂಡೂಲ್ಕರ್ ವಿಶ್ವ ಕಂಡ ಅಸಾಮಾನ್ಯ ಬ್ಯಾಟರ್. ಹಲವು ವಿಶ್ವದಾಖಲೆಗಳ ಸರದಾರ. ವಿರಾಟ್ ಕೊಹ್ಲಿ ಅವರೇ ಒಮ್ಮೆ ಸಚಿನ್ ತೆಂಡೂಲ್ಕರ್ ಅವರ ಜೊತೆ ಯಾರನ್ನೂ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದಿದ್ದರು. ಹೀಗಿರುವಾಗ ಈಗ ವೈಭವ್ ಸೂರ್ಯವಂಶಿ ಹೋಲಿಕೆ ಎಷ್ಟರ ಮಟ್ಟಿಗೆ ಸರಿ? ಈ ಬಗ್ಗೆ ಸಚಿನ್ ಕಾಲಘಟ್ಟದ ಮತ್ತೊಬ್ಬ ಕ್ರಿಕೆಟಿಗ ಸ್ಟೀವ್ ವಾ ಅವರು ಹೇಳಿದ್ದೇನು?
ಹೈಲೈಟ್ಸ್:
ಐಪಿಎಲ್ನಲ್ಲಿ 38 ಎಸೆತಗಳಲ್ಲಿ 101 ರನ್ ಗಳಿಸಿ ಗಮನ ಸೆಳೆದಿರುವ ವೈಭವ್ ಸೂರ್ಯವಂಶಿ
ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕಿರಿ ವಯಸ್ಸಿನ ಶತಕ ಬಾರಿಸಿದ 14ರ ಬಾಲಕ
ಸಚಿನ್ ತೆಂಡೂಲ್ಕರ್ ಅವರೊಂದಿಗೆ ಯಾರನ್ನೂ ಹೋಲಿಸುವುದು ಸರಿಯಲ್ಲ ಎಂದ ಸ್ಟೀವ್ ವಾ