ಮಗಳಿಗೆ ತಾನು ಮಾಡಿಸಿದ ಉಂಗುರ ತೊಡಿಸಿದ ಚೆಲುವ
ಇತ್ತ ವಿದ್ಯಾ ಬಟ್ಟೆಗಳನ್ನು ಪ್ಯಾಕ್ ಮಾಡಿಕೊಳ್ಳುತ್ತಾಳೆ. ನಾಳೆಯಿಂದ ಈ ರೂಮ್‌ನಲ್ಲಿ ಒಬ್ಬಳೇ ಇರಬೇಕು ಅನ್ನೋದನ್ನು ನೆನಪಿಸಿಕೊಂಡರೆ ಬೇಸರವಾಗುತ್ತಿದೆ ಎಂದು ಸರಸ್ವತಿ ಹೇಳುತ್ತಾಳೆ. ನೀನು ಚಿಕ್ಕವಳಾದರೂ ಬಹಳ ಜವಾಬ್ದಾರಿಯಿಂದ ಇದ್ದೆ, ನೀನು ಮನೆಯಲ್ಲಿದ್ದಾಗ ನನಗೆ ಬಹಳ ಧೈರ್ಯ ಇತ್ತು, ನಾಳೆ ನಿನ್ನ ಮದುವೆ. ನೀನು ಹೋದರೆ ಮನೆಯಲ್ಲಾ ಖಾಲಿ ಎನಿಸುತ್ತದೆ ಎಂದು ರತ್ನ ಕೂಡಾ ಬೇಸರಗೊಳ್ಳುತ್ತಾಳೆ. ಹೆಣ್ಣಾಗಿ ಹುಟ್ಟಿದ ನಂತರ ಯಾವತ್ತಿದ್ದರೂ ಗಂಡನ ಮನೆಗೆ ಹೋಗಬೇಕು ತಾನೇ, ಗಂಡನ ಮನೆಯಲ್ಲಿ ಹೇಗಿರಬೇಕು ಅನ್ನೋದನ್ನು ಹೇಳಿಕೊಡು ಎಂದು ಕಾಳವ್ವ ಹೇಳುತ್ತಾಳೆ. ಹೌದು ಪ್ರತಿ ಹೆಣ್ಣು ಕೂಡಾ ಗಂಡ, ಮನೆ, ಸಂಸಾರ ಎಂದು ಬದುಕಿದರೆ ಅವಳ ಬದುಕಿಗೆ ಒಂದು ಅರ್ಥ ಎಂದು ರತ್ನ ಹೇಳುತ್ತಾಳೆ. ಒಂದೆಡೆ ಇಷ್ಟವಿಲ್ಲದ ಮದುವೆ, ಮತ್ತೊಂದೆಡೆ ಮನೆಯವರನ್ನು ಬಿಟ್ಟು ಹೋಗಬೇಕೆಂಬ ನೋವಿನಿಂದ ವಿದ್ಯಾ ಕಣ್ಣೀರಿಡುತ್ತಾಳೆ.