ಚುನಾವಣೆಯಲ್ಲಿ ಹಣ ಹಂಚಿಕೆಗೆ ತಡೆ
ಈ ಚುನಾವಣೆಯಲ್ಲಿ ಹಣ, ಮದ್ಯ ಹಂಚಿಕೆ ಸಂಪೂರ್ಣವಾಗಿ ತಡೆಯಲಾಗಿದ್ದು, ಪ್ರಾಮಾಣಿಕ ಚುನಾವಣೆ ನಡೆಸಿದ್ದೇವೆ. ನಮ್ಮ ಸಿಂಡಿಕೇಟ್‌ನ ಡಾ.ಡಿ.ಕೆ.ರಮೇಶ್‌ಗೆ 40 ಸಾವಿರಕ್ಕೂ ಅಧಿಕ ಮತಗಳು, ನನಗೆ 32 ಸಾವಿರಕ್ಕೂ ಹೆಚ್ಚು ಮತಗಳು ಬಂದಿವೆ. ಪ್ರಕಾಶ್ ಅವರು ತಡವಾಗಿ ಕಣಕ್ಕೆ ಬಂದ ಹಿನ್ನೆಲೆಯಲ್ಲಿ ಪರಾಜಿತರಾಗಿದ್ದಾರೆ. 5 ವರ್ಷಗಳ ಅವಧಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಉತ್ತಮ ಸೇವೆ ಸಲ್ಲಿಸುತ್ತೇವೆ ಎಂದು ಭರವಸೆ ನೀಡಿದರು.
ಮತ್ತೋರ್ವ ನಿರ್ದೇಶಕ ಡಾ.ರಮೇಶ್ ಮಾತನಾಡಿ, ಕೋಲಾರ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಮೂವರು ನಿರ್ದೇಶಕರ ಆಯ್ಕೆಗೆ ಚುನಾವಣೆಯಲ್ಲಿ ನಮ್ಮ ಸಿಂಡಿಕೇಟ್‌ನ ಇಬ್ಬರು ಗೆದ್ದಿದ್ದೇವೆ. ಒಕ್ಕಲಿಗರ ಸಂಘವು ಮಾದರಿಯಾಗಿದ್ದು, ನಾನಾ ಕಾರಣಗಳಿಂದಾಗಿ ಸರಕಾರದ ವಶಕ್ಕೆ ಹೋಗಿ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿತ್ತು. ಸಂಘದ ಆಸ್ತಿ ಪಾಸ್ತಿ ಅವ್ಯವಹಾರ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣಗಳು ಈಗಾಗಲೇ ಸುಪ್ರೀಂಕೋರ್ಟ್ ಮೆಟ್ಟಿಲೇರಿವೆ. ಹೀಗಾಗಿ ಒಳ್ಳೆಯ ಸಮಿತಿ ತರಬೇಕೆನ್ನುವ ನಿಟ್ಟಿನಲ್ಲಿಉತ್ತಮವಾಗಿ ಚುನಾವಣೆಯನ್ನು ನಡೆಸಿದ್ದೇವೆ. ಚುನಾವಣೆಗಳಲ್ಲಿಆಮಿಷಗಳು ಆಶ್ವಾಸನೆಗಳು ಸಹಜ. ಆದರೆ ಈ ಬಾರಿ ಯಾವುದೇ ಬಿಡಿಗಾಸು ಹಣ ಮದ್ಯ ಹಂಚದೆ, ಗೌರವಯುತವಾಗಿ ಮಾದರಿಯಾಗಿ ಚುನಾವಣೆ ನಡೆಸಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದ ಅವರು, ಒಂದು ಶತಮಾನದ ಕಾಲದಿಂದಲೂ ಯಾರೊಬ್ಬರೂ ನಮ್ಮ ಭಾಗದಿಂದ ಅಧ್ಯಕ್ಷರಾಗಿಲ್ಲ. ಈಗ ಕೋನಪ್ಪರೆಡ್ಡಿ ಅವರನ್ನು ಆಯ್ಕೆ ಮಾಡಬೇಕಿದೆ ಎಂದು ಕೋರಿದರು.
ಕೋಲಾರ: ಕತ್ತಲೆಯ ಕೂಪವಾದ ಪ್ರಮುಖ ರಸ್ತೆಗಳು, ರಾತ್ರಿ ವೇಳೆ ಸಂಚರಿಸುವುದೇ ದುಸ್ತರ
ಪರಾಜಿತ ಅಭ್ಯರ್ಥಿ ಪ್ರಕಾಶ್ ಮಾತನಾಡಿ, ಚುನಾವಣೆಯಲ್ಲಿ ತಂತ್ರಗಳು, ಕುತಂತ್ರಗಳು ನಡೆದಿವೆ. ಈಗ ಅದರ ಬಗ್ಗೆ ಮಾತನಾಡುವ ಅವಶ್ಯಕತೆಯಿಲ್ಲ. ಸಂಘದ ಪದಾಧಿಕಾರಿಗಳ ಆಯ್ಕೆ ವೇಳೆ ನಿರ್ಮಲಾನಂದ ಸ್ವಾಮೀಜಿಯವರು ನಮ್ಮ ಸಿಂಡಿಕೇಟ್ ನ ನಿರ್ದೇಶಕರಿಗೆ ಅವಕಾಶ ನೀಡಬೇಕು. ಅಲ್ಲದೆ ಯಲುವಳ್ಳಿ ಪ್ರಭಾಕರ್ ಅವರೂ ನಮ್ಮ ಇಬ್ಬರು ನಿರ್ದೇಶಕರಿಗೆ ಎಲ್ಲ ರೀತಿಯ ಸಹಕಾರ ನೀಡಬೇಕೆಂದು ಸಲಹೆ ನೀಡಿದರು.
ಡಾ.ರಮೇಶ್ ಅವರಿಗೆ ಈ ಚುನಾವಣೆಯಲ್ಲಿಅತ್ಯಧಿಕ ಮತಗಳು ಬಂದಿದ್ದು ಇತಿಹಾಸದಲ್ಲಿ ದಾಖಲಾಗಬೇಕಿದೆ. ಈ ಬಾರಿ 35 ನಿರ್ದೇಶಕರ ಪೈಕಿ 30 ಮಂದಿ ಹೊಸಬರಾಗಿದ್ದಾರೆ. ಕೋನಪ್ಪರೆಡ್ಡಿ ಪೊಲೀಸ್ ಇಲಾಖೆಯಲ್ಲಿ ಉತ್ತಮ ಆಡಳಿತ ನಡೆಸಿದ ಅನುಭವ ಇದೆ. ಹೀಗಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೆ ರಾಜ್ಯ ಹಾಗೂ ಇಡೀ ಸಮುದಾಯಕ್ಕೆ ಅವರ ಆಡಳಿತದ ವೈಖರಿ ಪರಿಚಯವಾಗಲಿದೆ ಎಂದರು.