Karnataka news paper

ಉತ್ತರ ಪ್ರದೇಶ: ಬೀದಿ ನಾಯಿಗಳ ಜೊತೆ ಹೋರಾಡಿ ತನ್ನ 3 ಮಕ್ಕಳನ್ನು ರಕ್ಷಿಸಿದ ಗರ್ಭಿಣಿ ಮಹಿಳೆ, ಇಬ್ಬರ ಸ್ಥಿತಿ ಗಂಭೀರ!


IANS

ಪಿಲಿಭಿತ್(ಉತ್ತರ ಪ್ರದೇಶ): ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ಬೀದಿ ನಾಯಿಗಳ ದಾಳಿಗೆ ಸಿಲುಕಿ ಗರ್ಭಿಣಿ ಮಹಿಳೆ ಮತ್ತು ಆಕೆಯ 5 ವರ್ಷದ ಮಗಳು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸುಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ಪಿಲಿಭಿತ್ ನಗರದ ಹೊರವಲಯದ ಬರ್ಹಾ ಗ್ರಾಮದಲ್ಲಿ ಮಂಗಳವಾರ ಈ ಘಟನೆ ನಡೆದಿದೆ.

ಸೀಮಾ ಎಂಬ ಮಹಿಳೆ ಅಡುಗೆ ಮಾಡುತ್ತಿದ್ದಾಗ ಹೊರಗೆ ಆಟವಾಡುತ್ತಿದ್ದ ತನ್ನ ಮೂವರು ಮಕ್ಕಳ ಕಿರುಚಾಟ ಕೇಳಿಸಿದೆ. ಹೊರಬಂದಾಗ ಆರು ನಾಯಿಗಳ ಹಿಂಡು ತನ್ನ 5 ವರ್ಷದ ಮಗಳು ಪಲ್ಲವಿಯನ್ನು ಎಳೆದುಕೊಂಡು ಹೋಗುವುದು ಕಾಣಿಸಿದೆ. ಇನ್ನೆರಡು ಎರಡು ನಾಯಿಗಳು ಅವಳ ಇನ್ನಿಬ್ಬರು ಮಕ್ಕಳಾದ 10 ಅನುಜ್ ಮತ್ತು 3 ವರ್ಷದ ಮೋನುರ ಮೇಲೆ ಬೊಗಳುತ್ತಿದ್ದವು.

ಸೀಮಾ ಬೀದಿನಾಯಿಗಳ ಹಿಂಡಿನೊಂದಿಗೆ ಏಕಾಂಗಿಯಾಗಿ ಹೋರಾಡಿದರು. ನಾಯಿಗಳ ಹಿಂಡು ಅವಳನ್ನು ಗಂಭೀರವಾಗಿ ಕಚ್ಚಿದೆ. ಅಲ್ಲದೆ ಅವು ಹಿಂದೆ ಸರಿಯುವವರೆಗೂ ನಾಯಿಗಳೊಂದಿಗೆ ಕಾದಾಡುತ್ತಲೇ ಇದ್ದಳು. ಮೂವರು ಮಕ್ಕಳಿಗೆ ಗಾಯಗಳಾಗಿದ್ದು, ಸೀಮಾ ಮತ್ತು ಪಲ್ಲವಿ ಸ್ಥಿತಿ ಗಂಭೀರವಾಗಿದೆ.

ನಾಯಿಗಳು ಪಲ್ಲವಿಯ ತಲೆ ಮತ್ತು ತೋಳುಗಳ ಮಾಂಸವನ್ನು ಕಸಿದುಕೊಂಡಿದ್ದು, ಸೀಮಾಳನ್ನೂ ನಾಯಿಗಳು ತೀವ್ರವಾಗಿ ಕಚ್ಚಿವೆ. ಸೀಮಾ ಮತ್ತು ಮೂವರು ಮಕ್ಕಳನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು, ಅಲ್ಲಿಂದ ತಾಯಿ ಮತ್ತು ಮಗಳನ್ನು ಜಿಲ್ಲಾ ಆಸ್ಪತ್ರೆಗೆ ಶಿಫಾರಸು ಮಾಡಲಾಗಿದೆ. ಈ ಘಟನೆಯ ವೇಳೆ ಆಕೆಯ ಪತಿ ರೈತ ದನ್ವೀರ್ ಸಿಂಗ್ ಕೆಲಸಕ್ಕೆ ಹೋಗಿದ್ದರು.

ಸುಂಗಡಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಶ್ರೀಕಾಂತ್ ದ್ವಿವೇದಿ ಮಾತನಾಡಿ, ದಾಳಿಯ ಮಾಹಿತಿ ಪಡೆದು ಗ್ರಾಮಕ್ಕೆ ಹೋಗಿದ್ದೆವು. ಬೀದಿ ನಾಯಿಗಳಿಂದ ಮನೆಯವರಿಗೆ ಗಾಯಗಳಾಗಿದ್ದು, ಈ ಬಗ್ಗೆ ದೂರು ನೀಡಲು ಸಾಧ್ಯವಿಲ್ಲ. ನಗರಸಭೆಯ ತಂಡವು ಗ್ರಾಮಕ್ಕೆ ತೆರಳಿ ಸ್ಥಳೀಯ ಜನರಿಗೆ ಈ ಪ್ರದೇಶದಲ್ಲಿ ಬೀದಿ ನಾಯಿಗಳನ್ನು ಹಿಡಿಯಲು ಅಭಿಯಾನವನ್ನು ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.



Read more