
ಹೌದು, ಫೇಸ್‌ಬುಕ್ ಪ್ರೊಫೈಲ್ ಅನ್ನು ನೀವು ಲಾಕ್ ಮಾಡಿದಾಗ ಅದನ್ನು ನೋಡಲು ಯಾರಿಗೂ ಸಾಧ್ಯವಾಗುವುದಿಲ್ಲ. ಇದು ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿರಿಸುತ್ತದೆ. ಫೇಸ್‌ಬುಕ್ ಪ್ರೊಫೈಲ್ ಅನ್ನು ಲಾಕ್ ಮಾಡಲು ಎರಡು ಮಾರ್ಗಗಳಿದ್ದು, ಬಳಕೆದಾರರು ಮೊಬೈಲ್ ಅಪ್ಲಿಕೇಶನ್‌ನಿಂದ ಮಾಡಬಹುದು ಅಥವಾ ಬ್ರೌಸರ್ ಮೂಲಕ ಸಹ ಮಾಡಬಹುದು. ಆದಾಗ್ಯೂ, ಫೇಸ್‌ಬುಕ್‌ನ ಡೆಸ್ಕ್‌ಟಾಪ್ ಆವೃತ್ತಿಯು ಪ್ರೊಫೈಲ್ ಅನ್ನು ಲಾಕ್ ಮಾಡುವ ಆಯ್ಕೆಯನ್ನು ಹೊಂದಿಲ್ಲ. ಆದರೆ ಟ್ರಿಪ್ ಮೂಲಕ ಅದು ಸಾಧ್ಯ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಫೋನಿನಲ್ಲಿ ಫೇಸ್‌ಬುಕ್ ಪ್ರೊಫೈಲ್ ಅನ್ನು ಲಾಕ್ ಮಾಡಲು ಹೀಗೆ ಮಾಡಿ:
* ಫೇಸ್‌ಬುಕ್ ಅಪ್ಲಿಕೇಶನ್ ತೆರೆಯಿರಿ
* ಪ್ರೊಫೈಲ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.
* ನಂತರ ‘Add to Story’ ಪಕ್ಕದಲ್ಲಿರುವ ಮೂರು ಡಾಟ್ ಮೆನು ಐಕಾನ್ ಮೇಲೆ ಟ್ಯಾಪ್ ಮಾಡಿ.
* ಬಳಿಕ, ನೀವು ಲಾಕ್ ಪ್ರೊಫೈಲ್ ಆಯ್ಕೆಯನ್ನು ನೋಡುತ್ತೀರಿ. ಅದರ ಮೇಲೆ ಟ್ಯಾಪ್ ಮಾಡಿ.
* ಆ ನಂತರ, ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಸಂಕ್ಷಿಪ್ತ ವಿವರಣೆಯನ್ನು ನೀವು ಕಾಣಬಹುದು ಮತ್ತು ಕೆಳಭಾಗದಲ್ಲಿ, ನಿಮ್ಮ ಪ್ರೊಫೈಲ್ ಅನ್ನು ಲಾಕ್ ಮಾಡುವ ಆಯ್ಕೆ ಇರುತ್ತದೆ. ಅದರ ಮೇಲೆ ಟ್ಯಾಪ್ ಮಾಡಿ.
* ನೀವು ನಿಮ್ಮ ಪ್ರೊಫೈಲ್ ಅನ್ನು ಲಾಕ್ ಮಾಡಿದ್ದೀರಿ ಎಂದು ಹೇಳುವ ಪಾಪ್-ಅಪ್ ಅನ್ನು ನೀವು ನೋಡುತ್ತೀರಿ, ಸರಿ ಕ್ಲಿಕ್ ಮಾಡಿ.

ಡೆಸ್ಕ್‌ಟಾಪ್ ಮೂಲಕ ಫೇಸ್‌ಬುಕ್ ಪ್ರೊಫೈಲ್ ಲಾಕ್ ಮಾಡಲು ಈ ಕ್ರಮ ಅನುಸರಿಸಿ:
* ಬ್ರೌಸರ್‌ನಲ್ಲಿ ಫೇಸ್‌ಬುಕ್ ತೆರೆಯಿರಿ
* ನೋಂದಾಯಿತ ಇ ಮೇಲ್ ಐಡಿಯನ್ನು ನಮೂದಿಸಿ ಮತ್ತು ಲಾಗಿನ್ ಮಾಡಿ
* ಪ್ರೊಫೈಲ್ ಆಯ್ಕೆ ಮೇಲೆ ಕ್ಲಿಕ್ ಮಾಡಿ
* ಬಳಿಕ ಕಥೆಗೆ ಸೇರಿಸಿದ ನಂತರ ಮತ್ತು ಪ್ರೊಫೈಲ್ ಅನ್ನು ಸಂಪಾದಿಸಿದ ನಂತರ ಮೂರು-ಡಾಟ್ ಮೆನು ಐಕಾನ್ ಮೇಲೆ ಟ್ಯಾಪ್ ಮಾಡಿ
* ಲಾಕ್ ಪ್ರೊಫೈಲ್ ಆಯ್ಕೆಯು ಕಾಣಿಸಿಕೊಳ್ಳುತ್ತದೆ ಮತ್ತು ಅದರ ಮೇಲೆ ಟ್ಯಾಪ್ ಮಾಡಿ.

* ಮುಂದಿನ ಪುಟವು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ
* ಅದರ ಕೆಳಗೆ ನಿಮ್ಮ ಪ್ರೊಫೈಲ್ ಅನ್ನು ಲಾಕ್ ಮಾಡುವ ಆಯ್ಕೆಯು ಕಾಣಿಸಿಕೊಳ್ಳುತ್ತದೆ, ಅದರ ಮೇಲೆ ಟ್ಯಾಪ್ ಮಾಡಿ.
* ನಿಮ್ಮ ಪ್ರೊಫೈಲ್ ಅನ್ನು ಲಾಕ್ ಮಾಡಲು ಕೇಳುವ ಪಾಪ್-ಅಪ್ ಅನ್ನು ನೀವು ನೋಡುತ್ತೀರಿ. ಈಗ ಸರಿ/ಓಕೆ ಕ್ಲಿಕ್ ಮಾಡಿ.

ಫೇಸ್‌ಬುಕ್ ಹಿಸ್ಟರಿ ಕ್ಲಿಯರ್ ಮಾಡಲು ಈ ಕ್ರಮ ಅನುಸರಿಸಿ:
* ಫೇಸ್‌ಬುಕ್ ಖಾತೆ ತೆರೆದು, ಬಲ ಭಾಗದಲ್ಲಿ ಕಾಣಿಸುವ ಮೂರು ಗೆರೆಗಳಿರುವ ಮೆನು ಆಯ್ಕೆ ಮಾಡಿರಿ.
* ಸೆಟ್ಟಿಂಗ್ಸ್ ಮತ್ತು ಪ್ರೈವೆಸಿ ಆಯ್ಕೆ ಸೆಲೆಕ್ಟ್ ಮಾಡಿರಿ.
* ನಂತರ ಸೆಟ್ಟಿಂಗ್ಸ್ ಆಯ್ಕೆ ಯನ್ನು ಒತ್ತಿರಿ.
* ನಂತರ ಪೇಜ್ ತೆರೆದುಕೊಳ್ಳುತ್ತದೆ, ಸ್ಕ್ರಾಲ್ ಮಾಡಿ > ಆಫ್ ಫೇಸ್‌ಬುಕ್ ಆಕ್ಟಿವಿಟಿ ಕಾಣಿಸುತ್ತದೆ.
* ಆಗ ಆಫ್ ಫೇಸ್‌ಬುಕ್ ಆಕ್ಟಿವಿಟಿ ಆಯ್ಕೆಯನ್ನು ಕ್ಲಿಕ್ಕಿಸಿ, ಆಗ ನೀವು ಭೇಟಿ ನೀಡಿದ ತಾಣಗಳ ಮಾಹಿತಿ ಕಾಣಿಸುತ್ತದೆ.
* ಹಾಗೆಯೇ ಅಲ್ಲಿಯೇ ಕ್ಲಿಯರ್ ಹಿಸ್ಟರಿ ಆಯ್ಕೆಯು ಸಹ ಕಾಣಿಸುತ್ತದೆ.
* ಆಗ ವಿಂಡೊ ಒಂದು ತೆರೆದು ಕೊಳ್ಳುತ್ತದೆ, ಅಲ್ಲಿ ಕ್ಲಿಯರ್ ಹಿಸ್ಟರಿ ಬಟನ್ ಒತ್ತಿರಿ.