Karnataka news paper

ಐಪಿಎಲ್-2022 ಸೀಜನ್‌ ನಿಂದಲೂ ಇಂಗ್ಲೆಂಡ್ ಸ್ಟಾರ್ ಬೌಲರ್ ಜೋಫ್ರೆ ಆರ್ಚರ್ ದೂರ


Online Desk

ಲಂಡನ್‌: ಐಪಿಎಲ್‌ – 2022 ಸೀಜನ್‌ ಮೆಗಾ ಹರಾಜು ಫೆಬ್ರವರಿಯಲ್ಲಿ ನಡೆಯಲಿದೆ. ಆದರೆ ಇಂಗ್ಲೆಂಡ್ ಸ್ಟಾರ್ ವೇಗಿ ಜೋಫ್ರೆ ಆರ್ಚರ್ ಮೆಗಾ ಹರಾಜಿನಿಂದ ದೂರ ಉಳಿಯಲಿದ್ದಾರೆ.

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆರ್ಚರ್, ಐಪಿಎಲ್-2021ರ ಋತುವಿನಿಂದಲೂ ಹೊರಗುಳಿದಿದ್ದಾರೆ. ಆದರೆ, ಐಪಿಎಲ್‌ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಕಳೆದ ಕೆಲವು ವರ್ಷಗಳಿಂದ ಪ್ರತಿನಿಧಿಸುತ್ತಿದ್ದಾರೆ.

ಇದನ್ನು ಓದಿ: ಐಪಿಎಲ್ 2022: ಲಖನೌ ಸಾರಥಿಯಾಗಿ ಕೆಎಲ್ ರಾಹುಲ್; ಅಹಮದಾಬಾದ್ ಗೆ ಶ್ರೇಯಸ್ ನಾಯಕ – ವರದಿ

IPL-2022 ಋತುವಿನ ಮೆಗಾ ಹರಾಜಿನ ಮೊದಲು ರಾಜಸ್ಥಾನ ತಂಡ ಆರ್ಚರ್ ರನ್ನು ಉಳಿಸಿಕೊಂಡಿಲ್ಲ. ಇದರೊಂದಿಗೆ ಮೆಗಾ ಹರಾಜಿನಲ್ಲಿ ಅವರಿಗಾಗಿ ಹಲವು ತಂಡಗಳು ಪೈಪೋಟಿ ನಡೆಸಲಿವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಆರ್ಚರ್ ಇತ್ತೀಚೆಗೆ ಎರಡನೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅವರಿಗೆ 15 ತಿಂಗಳು ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಇದನ್ನು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಖಚಿತಪಡಿಸಿದೆ.

ಆರ್ಚರ್‌ ಅವರ ಬಲಗೈಗೆ ಎರಡನೇ ಅಪರೇಷನ್‌ “ಡಿಸೆಂಬರ್ 11 ರಂದು ಲಂಡನ್‌ನಲ್ಲಿ ನಡೆಯಿತು. ಅವರ ಅಪರೇಷನ್‌ ಯಶಸ್ವಿಯಾಗಿ ಪೂರ್ಣಗೊಂಡಿದೆ. ಆದರೆ ಅವರು ಕ್ರಿಕೆಟ್ ಮೈದಾನಕ್ಕೆ ಮರಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಮುಂಬರಲಿರುವ ಎಲ್ಲ ಸರಣಿಗಳಿಗಳಿಗೆ ಆರ್ಚರ್ ಲಭ್ಯವಾಗುವುದಿಲ್ಲ ಎಂದು ಇಂಗ್ಲೇಡ್‌ ಅಂಡ್‌ ವೇಲ್ಸ್‌ ಕ್ರಿಕೆಟ್‌ ಮಂಡಳಿ ಹೇಳಿದೆ.

ಗಾಯದ ಸಮಸ್ಯೆಯಿಂದ ಆರ್ಚರ್‌ ಕಳೆದ 9 ತಿಂಗಳಿಂದ ಇಂಗ್ಲೆಂಡ್ ತಂಡದಿಂದ ಹೊರಗುಳಿದಿದ್ದರು. ಪ್ರತಿಷ್ಠಿತ ಆಶಸ್ ಸರಣಿಯಿಂದಲೂ ಅವರು ದೂರಸರಿದಿದ್ದರು.



Read more…