Karnataka news paper

ಆಸ್ಕರ್‌ ರೇಸ್‌ನಿಂದ ಹೊರಬಿದ್ದ ತಮಿಳು ಚಿತ್ರ ‘ಕೂಳಾಂಗಲ್’


2022ರ ಅಕಾಡೆಮಿ ಅವಾರ್ಡ್ಸ್‌ಗೆ ಭಾರತದಿಂದ ಪ್ರವೇಶ ಪಡೆದಿದ್ದ ತಮಿಳಿನ ‘ಕೂಳಾಂಗಲ್’ ಚಿತ್ರವು ಆಸ್ಕರ್‌ ಸ್ಪರ್ಧೆಯಿಂದ ಹೊರಬಿದ್ದಿದೆ.

ಕೂಳಾಂಗಲ್ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಚೆಲ್ಲಪಾಂಡಿ ಮತ್ತು ಕರುಥಾಡೈಯಾನ್‌ ಅಭಿನಯಿಸಿದ್ದಾರೆ. ನಯನತಾರಾ ಮತ್ತು ವಿಗ್ನೇಶ್‌ ಶಿವನ್‌ ಈ ಚಿತ್ರದ ನಿರ್ಮಾಣ ಮಾಡಿದ್ದಾರೆ.

ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಭಾರತದಿಂದ ಪ್ರವೇಶ ಪಡೆದಿದ್ದ ‘ರೈಟಿಂಗ್ ವಿತ್ ಫೈರ್‘ ಚಿತ್ರವು ಆಸ್ಕರ್‌ ಸ್ಪರ್ಧೆಯ ಮುಂದಿನ ಸುತ್ತನ್ನು ಪ್ರವೇಶಿಸಿದೆ ಎಂದು ಅಕಾಡೆಮಿ ಆಫ್‌ ಮೋಷನ್‌ ಪಿಕ್ಚರ್ ಆರ್ಟ್‌ ಮತ್ತು ಸೈನ್ಸ್‌ (ಎಎಂಪಿಎಎಸ್‌) ಮಂಗಳವಾರ ಪ್ರಕಟಿಸಿದೆ. 

ಮೀರಾ ದೇವಿ ಹಾಗೂ ಸುನೀತಾ ಪ್ರಜಾಪತಿ ಅವರು ‘ರೈಟಿಂಗ್ ವಿತ್ ಫೈರ್‘ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. 



Read More…Source link