Karnataka news paper

ಅಮೆರಿಕ: 7.5 ಲಕ್ಷ ಕೋಟಿ ರೂ. ಕೊರೋನಾ ಪರಿಹಾರ ನಿಧಿ ಕಳವು; ಗುಪ್ತಚರ ಸಂಸ್ಥೆಯಿಂದ ಸ್ಫೋಟಕ ಮಾಹಿತಿ ಬಹಿರಂಗ


The New Indian Express

ವಾಷಿಂಗ್ಟನ್: ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ನಷ್ಟ ಅನುಭವಿಸುತ್ತಿರುವ ಉದ್ಯಮಗಳು, ಕೆಲಸ ಕಳೆದುಕೊಂಡ ಉದ್ಯೋಗಿಗಳಿಗೆ ಪರಿಹಾರ ನೀಡುವ ಸಲುವಾಗಿ ಮೀಸಲಿಟ್ಟಿದ್ದ ಕೋಟ್ಯಂತರ ರೂ ನಿಧಿಯಲ್ಲಿ ಕಳವಾಗಿರುವ ಬಗ್ಗೆ ಅಮೆರಿಕ ಗುಪ್ತಚರ ಸಂಸ್ಥೆ ಮಾಹಿತಿ ಬಹಿರಂಗ ಪಡಿಸಿದೆ. 

ಇದನ್ನೂ ಓದಿ: ಮೀನುಗಾರಿಕೆ ಆರೋಪ: 43 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಪಡೆ

ಕಡಿಮೆ ಎಂದರೂ 7.5 ಲಕ್ಷ ಕೋಟಿ ರೂ. ಕಳವಾಗಿರುವುದಾಗಿ ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 3.3 ಟ್ರಿಲಿಯನ್’ಡಾಲರ್ ಪರಿಹಾರ ನಿಧಿಯನ್ನು ಸರ್ಕಾರ ಘೋಷಿಸಿತ್ತು. ನಿರುದ್ಯೋಗ ವಿಮಾ ಕ್ಷೇತ್ರದಲ್ಲೇ ಹೆಚ್ಚಿನ ಗೋಲ್ ಮಾಲ್ ನಡೆದಿರುವುದು ಮೇಲ್ನೋಟಕ್ಕೆ ಪತ್ತೆಯಾಗಿದೆ.

ಇದನ್ನೂ ಓದಿ: ಮಾಸ್ಕ್‌ ಬದಲು ಮುಖಕ್ಕೆ ಅಂಡರ್‌ ವೇರ್‌ ಹಾಕಿದ ಪ್ರಯಾಣಿಕ: ವಿಮಾನದಿಂದ ಕೆಳಗಿಳಿಸಿದ ಸಿಬ್ಬಂದಿ!

ಪರಿಹಾರ ನಿಧಿ ವಿತರಣೆಯಲ್ಲಿ ಭಾರೀ ಹಗರಣ ನಡೆದಿದ್ದು ಈ ಸಂಬಂಧ 900 ಪ್ರಕರಣಗಳನ್ನು ದಾಖಲಿಸಿಕೊಂಡು ಸಂಸ್ಥೆ ತನಿಖೆ ನಡೆಸುತ್ತಿದೆ. ಅಲ್ಲದೆ ಈಗಾಗಲೇ ಇದೇ ವಿಚಾರವಾಗಿ 100 ಮಂದಿ ಆರೋಪಿಗಳನ್ನು ಬಂಧಿಸಿದೆ. 

ಇದನ್ನೂ ಓದಿ: ಭಯೋತ್ಪಾದನೆ ತಡೆಯುವಲ್ಲಿ ಪಾಕಿಸ್ತಾನ ವಿಫಲ: ಅಮೆರಿಕ ಛೀಮಾರಿ

ಹಗರಣವನ್ನು ತಡೆಯುವುದು ಕಷ್ಟ ಎಂದಿರುವ ಅಧಿಕಾರಿಗಳು, ಆದರೆ ಹಗರಣದಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಿ ಅವರಿಂದ ಹಣವನ್ನು ವಶಪಡಿಸಿಕೊಳ್ಳುವತ್ತ ತಾವು ಕಾರ್ಯಪ್ರವೃತ್ತರಾಗಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ:  ಉತ್ತರಪ್ರದೇಶದ ಹಳ್ಳಿಯಿಂದ ಕಳವಾಗಿದ್ದ ದೇವರ ವಿಗ್ರಹ ಲಂಡನ್ ನಲ್ಲಿ ಪತ್ತೆ: ಭಾರತ ಹೈಕಮಿಷನ್ ಮಾಹಿತಿ



Read more