ಹಿಂದಿ, ಪಂಜಾಬಿ ಮತ್ತು ದಕ್ಷಿಣ ಭಾರತೀಯ ಚಲನಚಿತ್ರಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದ ನಟ ಮುಕುಲ್ ದೇವ್ 54 ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಕಳೆದ ಕೆಲ ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ನಟ ಮೇ 23ರಂದು ನಿಧನರಾದರು. ನಟ ಮುಕುಲ್ ದೇವ್ ನಿಧನದ ಸುದ್ದಿ ಚಿತ್ರರಂಗಕ್ಕೆ ಆಘಾತ ತಂದಿದೆ.
ಹೈಲೈಟ್ಸ್:
- ʻಜೈ ಹೋʼ ಸಿನಿಮಾ ಖ್ಯಾತಿಯ ನಟ ಮುಕುಲ್ ದೇವ್ ನಿಧನ!
- 54ನೇ ವಯಸ್ಸಿನಲ್ಲಿ ಹಠಾತ್ ಸಾವನ್ನಪ್ಪಿದ ಬಾಲಿವುಡ್ ನಟ
- ಮುಕುಲ್ ದೇವ್ ನಿಧನದ ಸುದ್ದಿಯಿಂದ ಚಿತ್ರರಂಗಕ್ಕೆ ಆಘಾತ