Karnataka news paper

Matthew Forde – ಏಕದಿನದಲ್ಲಿ ಬಿರುಗಾಳಿ ಅರ್ಧಶತಕ; ಎಬಿಡಿ ವಿಶ್ವದಾಖಲೆ ಸರಿಗಟ್ಟಿದ ವಿಂಡೀಸ್ ಬ್ಯಾಟರ್!


Fastest ODI Fifties – ಅಂತಾರಾಷ್ಟ್ರೀಯ ಏಕದಿನ(ODI) ದಲ್ಲಿ ಅತಿವೇಗದ ಅರ್ಧಶತಕ ಹೊಡೆದ ವಿಶ್ವದಾಖಲೆ ಎಬಿ ಡಿವಿಲಿಯನ್ಸ್ ಹೆಸರಿನಲ್ಲಿದೆ. ಅದಕ್ಕಾಗಿ ಅವರು 16 ಎಸೆತಗಳನ್ನು ಬಳಸಕೊಂಡಿದ್ದರು. ಇದೀಗ ವೆಸ್ಟ್ ಇಂಡೀಸ್ ನ ಮ್ಯಾಥ್ಯೂ ಫೋರ್ಡ್ ಅವರು ಎಬಿಡಿ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ. ಐರ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಕೇವಲ 16 ಎಸೆತಗಳಲ್ಲಿ ಅವರು ಅರ್ಧ ಶತಕ ಸಿಡಿಸಿದ್ದಾರೆ. ಭಾರತದ ಪರ ಅತಿ ವೇಗದ odi ಅರ್ಧಶತಕ ಅಜಿತ್ ಅಗರ್ಕರ್ ಮತ್ತು ಮೊಹಮ್ಮದ್ ಅಜರುದ್ದೀನ್ ಅವರ ಹೆಸರಿನಲ್ಲಿದೆ. ಇಬ್ಬರೂ 21 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಅತಿ ವೇಗದ ಅರ್ಧಶತಕ ಬಾರಿಸಿದ ವೆಸ್ಟ್ ಇಂಡೀಸ್ ನ ಮ್ಯಾಥ್ಯೂ ಫೋರ್ಡ್ (Photo- X/Windies Cricket) (ಗ್ಯಾಲರಿ- Vijaya Karnataka Web)



Source link