Karnataka news paper

RCB Vs SRH- ಜಿತೇಶ್ ಶರ್ಮಾಗೆ ರಾಯಲ್ ಚಾಲೆಂಜರ್ಸ್ ಚುಕ್ಕಾಣಿ! ರಜತ್ ಪಾಟೀದಾರ್ ಸಹ ಇರ್ತಾರೆ ಕಾಣಿ!


Jitesh Sharma Captaincy – ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ತಂಡದಲ್ಲಿ ದೊಡ್ಡ ಬದಲಾವಣೆ. ಗಾಯಾಳು ನಾಯಕ ರಜತ್ ಪಾಟೀದಾರ್ ಅವರ ಬದಲಿಗೆ ತಂಡದ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಅವರು ಮುನ್ನಡೆಸಲಿದ್ದಾರೆ. ಇದೇವೇಳೆ ಕರ್ನಾಟಕದ ದೇವದತ್ ಪಡಿಕ್ಕಲ್ ಬದಲಿಗೆ ಕರ್ನಾಟಕದವರೇ ಆದ ಮಾಯಾಂಕ್ ಅಗರ್ವಾಲ್ ಅವರು ಪ್ಲೇಯಿಂಗ್ ಇಲೆವೆನ್ ನಲ್ಲಿ ಆಡಲಿದ್ದಾರೆ. ಅವರು ಗಾಯಾಳು ದೇವದತ್ ಪಡಿಕ್ಕಲ್ ಅವರ ಬದಲಿಗೆ ತಂಡಕ್ಕೆ ಆಯ್ಕೆಯಾಗಿದ್ದರು.

ಹೈಲೈಟ್ಸ್‌:

  • ಸನ್ ರೈಸರ್ಸ್ ವಿರುದ್ಧ RCB ಮುನ್ನಡೆಸುತ್ತಿರುವ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ,
  • ರಜತ್ ಪಾಟೀದಾರ್ ಅವರ ಬೆರಳಿಗೆ ಗಾಯವಾಗಿರುವ ಹಿನ್ನೆಲೆಯಲ್ಲಿ ತಂಡದ ಚುಕ್ಕಾಣಿ
  • ದೇವದತ್ ಪಡಿಕ್ಕಲ್ ಅವರ ಬದಲಿಗೆ ಮಾಯಾಂಕ್ ಅಗರ್ವಾಲ್ ಗೆ ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ



Source link