Karnataka news paper

ರಾಮ್ ಗೋಪಾಲ್‌ ವರ್ಮ ಶಿಷ್ಯನ ಸಿನಿಮಾದಲ್ಲಿ ಎಟಿಎಸ್ ಅಧಿಕಾರಿಯಾದ ಸುಮನ್ ನಗರ್ಕರ್‌!


ಹೈಲೈಟ್ಸ್‌:

  • ಸ್ಟಾಕರ್ ಸಿನಿಮಾದಲ್ಲಿ ಸುಮನ್ ನಗರ್ಕರ್‌
  • ಇದೇ ಮೊದಲ ಬಾರಿಗೆ ಎಟಿಎಸ್ ಅಧಿಕಾರಿಯಾಗಿ ಸುಮನ್
  • ರಾಮ್ ಗೋಪಾಲ್ ವರ್ಮ ಶಿಷ್ಯ ಕಿಶೋರ್ ಭಾರ್ಗವ್‌ ಸಿನಿಮಾ ಇದು

‘ಬೆಳದಿಂಗಳ ಬಾಲೆ’ ಖ್ಯಾತಿಯ ನಟಿ ಸುಮನ್ ನಗರ್ಕರ್ ಪುನಃ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಈಚೆಗೆ ‘ಬಬ್ರು’, ‘ಜೀರ್ಜಿಂಬೆ’ ಮುಂತಾದ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ಅವರು, ಈಗೊಂದು ಪವರ್‌ಫುಲ್ ಪಾತ್ರಕ್ಕೆ ಜೀವ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ‘ಸ್ಟಾಕರ್‘ (Stalker) ಅಂತ ಹೆಸರಿಡಲಾಗಿದೆ. ವಿಶೇಷವೆಂದರೆ, ಸುಮನ್ ಇಲ್ಲಿ ಉಗ್ರರನ್ನು ಸದೆಬಡಿಯುವ ಎಟಿಎಸ್ (ಭಯೋತ್ಪಾದನೆ ನಿಗ್ರಹ ದಳ) ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಅಂದಹಾಗೆ, ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವುದು ಕಿಶೋರ್ ಭಾರ್ಗವ್. ಟಾಲಿವುಡ್, ಬಾಲಿವುಡ್‌ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಬಳಿ ಹಲವು ವರ್ಷಗಳ ಕಾಲ ಕೆಲಸ ಮಾಡಿರುವ ಕಿಶೋರ್‌ಗೆ ‘ಸ್ಟಾಕರ್’ ಮೊದಲ ಕನ್ನಡ ಸಿನಿಮಾ. ಈ ಹಿಂದೆ ಅವರು ‘ಸೈಕೋ’ ಎಂಬ ತೆಲುಗು ಸಿನಿಮಾವನ್ನು ಮಾಡಿದ್ದಾರೆ. ಇದೀಗ ಕನ್ನಡದಲ್ಲಿ ಒಂದು ಥ್ರಿಲ್ಲರ್ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಐದಾರು ವರ್ಷಗಳ ಕಾಲ ಆರ್‌ಜಿವಿಗೆ ಅಸಿಸ್ಟೆಂಟ್ ಆಗಿದ್ದ ಕಿಶೋರ್‌, ಈಗ ‘ಸ್ಟಾಕರ್’ ಸಿನಿಮಾವನ್ನು ಸಿದ್ಧಪಡಿಸಿ, ತೆರೆಗೆ ತರಲು ಸಜ್ಜಾಗಿದ್ದಾರೆ.

‘ಸ್ಟಾಕರ್’ ಸಿನಿಮಾದ ಕಥೆಯು ಎಟಿಎಸ್ ಅಧಿಕಾರಿ ಪಾತ್ರದ ನಿರೂಪಣೆಯಲ್ಲೇ ಸಾಗಲಿದೆಯಂತೆ. ಹಾಗಾಗಿ, ಸುಮನ್‌ ನಗರ್ಕರ್‌ಗೆ ಇಲ್ಲಿ ಮುಖ್ಯವಾದ ಪಾತ್ರವಿದೆ ಎಂದೇ ಹೇಳಬಹುದು. ಆ ಪಾತ್ರವನ್ನು ಯಾರು ಮಾಡಬಹುದು ಎಂದಾಗ, ಮೊದಲು ಸುಮನ್‌ ಅವರ ಹೆಸರೇ ನಿರ್ದೇಶಕರಿಗೆ ಹೊಳೆಯಿತಂತೆ! ಸ್ಕ್ರಿಪ್ಟ್ ಟೀಸ್ ಮತ್ತು ಎಸ್ಸೆಮ್ಮೆಲ್ ಪ್ರೊಡಕ್ಷನ್ಸ್ ಸಂಸ್ಥೆಗಳ ನಿರ್ಮಾಣದಲ್ಲಿ ಈ ಸಿನಿಮಾ ಸಿದ್ಧಗೊಂಡಿದೆ. ಸಿನಿಮಾದ ಚಿತ್ರಕಥೆಯನ್ನು ಸೋಮಶೇಖರ್, ಭರತ್ ಪ್ರಮೋದ್ ಹಾಗೂ ಕಿಶೋರ್ ಭಾರ್ಗವ್ ಬರೆದಿದ್ದಾರೆ. ಛಾಯಾಗ್ರಹಣದ ಹೊಣೆಯನ್ನು ವಿನೋದ್ ರಾಜ್ ಮಾಡಿದ್ದಾರೆ. ಸ್ಕಂದ ಕಶ್ಯಪ್ ಸಂಗೀತ ಸಂಯೋಜನೆ ‘ಸ್ಟಾಕರ್’ ಸಿನಿಮಾಕ್ಕಿದೆ. ಕಲಾ ನಿರ್ದೇಶನವನ್ನು ಸುಧೀರ್ ಪಿಆರ್ ಮಾಡಿದ್ದು, ವಸ್ತ್ರ ವಿನ್ಯಾಸವನ್ನು ವಂದನಾ ಭಂಡಾರೆ ನಿಭಾಯಿಸಿದ್ದಾರೆ.

ಸುಮನ್ ನಗರ್ಕರ್ ನಟನೆಯ ಹೊಸ ಸಿನಿಮಾಗೆ 192 ಗಂಟೆಯಲ್ಲಿ ಶೂಟಿಂಗ್ ಕಂಪ್ಲೀಟ್!

ಸುಮನ್ ನರ್ಗಕರ್ ಜೊತೆಗೆ ರಾಮ್, ಐಶ್ವರ್ಯಾ ನಂಬಿಯಾರ್, ಉದಯ್ ಆಚಾರ್, ನಮ್ರತಾ ಪಾಟೀಲ್, ಜಿತೆನ್ ಆರೋರಾ, ಭವಾನಿ ಶಂಕರ್ ದೇಸಾಯಿ ಮುಂತಾದವರು ಸ್ಟಾಕರ್ ಸಿನಿಮಾದಲ್ಲಿ ನಟಿಸಿದ್ದು, ಕನ್ನಡದ ಜೊತೆಗೆ ಹಿಂದಿ ಭಾಷೆಯಲ್ಲಿಯೂ ಈ ಸಿನಿಮಾ ತಯಾರಾಗಿದೆ. ಥ್ರಿಲ್ಲರ್ ಜೊತೆಗೆ ಸಸ್ಪೆನ್ಸ್ ಕಥಾಹಂದರ ಹೊಂದಿರುವ ಸ್ಟಾಕರ್ ಸಿನಿಮಾವನ್ನು ಎಸ್ಎಂಎಲ್ ಪ್ರೊಡಕ್ಷನ್ಸ್, ಸ್ಕ್ರಿಪ್ಟ್ ಟೀಸ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಎಂಎನ್‌ವಿ ರಮಣ, ಸಂದೀಪ್ ಗೌಡ ಹಾಗೂ ಸ್ವಾತಿ ಗೋವಾಡ ಅವರು ನಿರ್ಮಾಣ ಮಾಡಿದ್ದಾರೆ.

400 ಕಿಮೀ ಓಡುತ್ತಿರುವ ‘ಬೆಳದಿಂಗಳ ಬಾಲೆ’ ಸುಮನ್‌ ನಗರ್ಕರ್‌! ಇದರ ಹಿಂದಿದೆ ಒಳ್ಳೆಯ ಉದ್ದೇಶ!



Read more