
ಈ ಪ್ರಶಸ್ತಿಯು ವೈವಿಧ್ಯಕ್ಕೆ ಸಂದಿರುವ ಗೆಲುವು. ಯಾವ ಕಥೆಯೂ ಎಂದಿಗೂ ಸಣ್ಣದಲ್ಲ ಎಂಬ ನಂಬಿಕೆಯಿಂದ ಕೃತಿಯು ರೂಪುತಳೆದಿದೆ. ಮನುಷ್ಯನ ಅನುಭವವೊಂದು ವಸ್ತ್ರವಿದ್ದಂತೆ. ಅದರ ಪ್ರತಿ ಎಳೆಯೂ ಭಾರವನ್ನು ಹಿಡಿದಿಟ್ಟುಕೊಳ್ಳುತ್ತದೆ
– ಬಾನು ಮುಷ್ತಾಕ್

ಜಗತ್ತಿಗೆ ಭಾರತೀಯ ಸಾಹಿತ್ಯದ– ಅದೂ ಒಂದು ಭಾಷೆಯ ಸಾಹಿತ್ಯದ– ಬಗ್ಗೆ ಅಲ್ಪ ತಿಳಿವಳಿಕೆ ಇತ್ತು. ಇಂದು ವ್ಯತ್ಯಾಸ ಏನೆಂದರೆ, ಜನರು ಭಾಷೆಗಳ ವೈವಿಧ್ಯವನ್ನು ಅರಿತುಕೊಳ್ಳತೊಡಗಿದ್ದಾರೆ. ದೇಶದ ಭಾಷೆಗಳ ಬಹುತ್ವ ಮತ್ತು ಶ್ರೀಮಂತಿಕೆಯನ್ನು ಕಾಣುವುದು ಬಹಳ ಮುಖ್ಯವಾದುದಾಗಿದೆ. ಬಾನು ಮತ್ತು ಭಾಸ್ತಿ ಅವರನ್ನು ನಾನು ಅಭಿನಂದಿಸುತ್ತೇನೆ.
– ಗೀತಾಂಜಲಿ ಶ್ರೀ, ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದಿದ್ದ ಭಾರತದ ಮೊದಲ ಸಾಹಿತಿ