News
ಮುಂಬೈ, ಡಿಸೆಂಬರ್, 22: ಭಾರತದ ಪ್ರಮುಖ ದೂರ ಸಂಪರ್ಕ ಬ್ರ‍್ಯಾಂಡ್ ಆಗಿರುವ ವೋಡಾಫೋನ್ ಐಡಿಯಾ (ವಿ) ತನ್ನ ಬಳಕೆದಾರರಿಗೆ ಮನೆ ಬಾಗಿಲಿಗೆ ಉಚಿತವಾಗಿ ವಿತರಣೆಯ ಹೆಚ್ಚುವರಿ ಪ್ರಯೋಜನದೊಂದಿಗೆ ಪ್ರೀಮಿಯಂ, ಫ್ಯಾನ್ಸಿ, ಕಸ್ಟಮೈಸ್ ಮಾಡಿದ ಮೊಬೈಲ್ ಸಂಖ್ಯೆಗಳನ್ನು ಪಡೆಯಲು ಅನುವು ಮಾಡಿಕೊಟ್ಟಿದೆ.
ವಿ ಗ್ರಾಹಕರು ತಮ್ಮ ಅದೃಷ್ಟ ಸಂಖ್ಯೆ, ಹುಟ್ಟಿದ ದಿನಾಂಕ ಅಥವಾ ತಮ್ಮ ಜೀವನದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿರುವ ಯಾವುದೇ ದಿನಾಂಕದ ಆಧಾರದ ಮೇಲೆ ವಿಶೇಷ ಸಂಖ್ಯೆಯನ್ನು ಆಯ್ಕೆ ಮಾಡಬಹುದು. ಪ್ರಿಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ಗ್ರಾಹಕರು ಈ ಪ್ರೀಮಿಯಂ ಸಂಖ್ಯೆಗಳನ್ನು ಈ ಕೆಳಗಿನ ನಗರಗಳಲ್ಲಿ ತಮ್ಮ ಮನೆ ಬಾಗಿಲಿಗೆ ಪಡೆಯಬಹುದು- ದೆಹಲಿ, ಮುಂಬೈ, ಪುಣೆ, ಹೈದರಾಬಾದ್, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಅಹಮದಾಬಾದ್, ಸೂರತ್ ಮತ್ತು ಜೈಪುರ.

ಕಸ್ಟಮೈಸ್ ಮಾಡಿದ ವಿ ಮೊಬೈಲ್ ಸಂಖ್ಯೆಯನ್ನು ಪಡೆದುಕೊಳ್ಳಲು ಸರಳ ಹಂತಗಳನ್ನು ಕೆಳಗೆ ನೀಡಲಾಗಿದೆ:
– ಪ್ರಿಪೇಯ್ಡ್ ಅಥವಾ ಪೋಸ್ಟ್ ಪೆಯ್ಡ್ ಆಯ್ಕೆಯನ್ನು ಆಯ್ಕೆಮಾಡಿ
– ನಿಮ್ಮ ಪ್ರದೇಶದ ಪಿನ್-ಕೋಡ್ ಮತ್ತು ಮೊಬೈಲ್ ಸಂಖ್ಯೆಯಂತಹ ಮೂಲ ವಿವರಗಳನ್ನು ನಮೂದಿಸಿ
– ವಿಐಪಿ ಮೊಬೈಲ್ ಸಂಖ್ಯೆಯನ್ನು ಆಯ್ಕೆಮಾಡಿ*:
* ಪ್ರೀಮಿಯಂ ಮೊಬೈಲ್ ಸಂಖ್ಯೆಗಳ ಪ್ರದರ್ಶಿಸಲಾದ ಪಟ್ಟಿಯಿಂದ
* ಅಥವಾ ವಾರ್ಷಿಕೋತ್ಸವ, ಜನ್ಮದಿನ ಅಥವಾ ಯಾವುದೇ ಅದೃಷ್ಟ ಸಂಖ್ಯೆಯ ಆಯ್ಕೆಯಂತಹ ಆದ್ಯತೆಯ ಸಂಖ್ಯೆಗಳ ಮಾದರಿ ಅಥವಾ ಸ್ಟ್ರಿಂಗ್ ಅನ್ನು ನಮೂದಿಸುವ ಮೂಲಕ
– ಆರ್ಡರ್ ಮಾಡಲು ನಿಮ್ಮ ಹೆಸರು ಮತ್ತು ವಿಳಾಸವನ್ನು ನಮೂದಿಸಿ
– ನಿಮ್ಮ ಹೊಸ ಮೊಬೈಲ್ ಸಂಪರ್ಕ ಪಾವತಿಯನ್ನು ಪೂರ್ಣಗೊಳಿಸಲು ಓಟಿಪಿ ಪಡೆಯಿರಿ
– ಶೂನ್ಯ ವಿತರಣಾ ಶುಲ್ಕದೊಂದಿಗೆ ನಿಮ್ಮ ಮನೆ ಬಾಗಿಲಿಗೆ ಹೊಸ ಸಿಮ್ ಅನ್ನು ವಿತರಿಸಲಾಗುತ್ತದೆ.
English summary
Now avail Vi VIP/Premium Mobile Number at your doorstep with free delivery
Vi, India’s leading telecom brand, now allows Vi users to avail a range of premium / fancy / customized mobile numbers with added benefit of free doorstep delivery.
Story first published: Wednesday, December 22, 2021, 12:40 [IST]