Karnataka news paper

ಮತಾಂತರ ಆದ ಹೆಣ್ಣು ಮಕ್ಕಳ ಕಷ್ಟ ಡಿಕೆ ಶಿವಕುಮಾರ್ ಗೆ ಗೊತ್ತಿಲ್ಲ : ಕೆ.ಎಸ್ ಈಶ್ವರಪ್ಪ


ಹೈಲೈಟ್ಸ್‌:

  • ಮತಾಂತರ ನಿಷೇಧ ವಿಧೇಯಕ ಮಂಡನೆ ಹಿನ್ನ್ಪೆಲೆ
  • ಡಿಕೆ ಶಿವಕುಮಾರ್ ವಿರುಧ್ಧ ಕೆ.ಎಸ್ ಈಶ್ವರಪ್ಪ ಕಿಡಿ
  • ಹೆಣ್ಣು ಮಕ್ಕಳ ಕಷ್ಟ ಡಿಕೆಶಿಗೆ ಗೊತ್ತಿಲ್ಲ ಎಂದ ಸಚಿವ

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತಾಂತರ ಆದ ಹೆಣ್ಣು ಮಕ್ಕಳ ಕಷ್ಟ ಗೊತ್ತಿಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಬೆಳಗಾವಿ ಸುವರ್ಣ ಸೌಧದಲ್ಲಿ ಮಾತನಾಡಿದ ಅವರು, ಮತಾಂತರ ಕಾಯ್ದೆ ತರುತ್ತಿರುವ ಉದ್ದೇಶ, ಯಾರನ್ನೂ ಬಲವಂತವಾಗಿ ಮತಾಂತರ ಮಾಡಬಾರದು ಎಂದು. ಆಸೆ, ಆಮಿಷ ತೋರಿಸಿ ಮತಾಂತರ ಮಾಡಲಾಗ್ತಿದೆ. ವಿಕಲಾಂಗರಿಗೆ ಆಮಿಷ ತೋರಿಸಿ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾನೂನು ಬದ್ದವಾಗಿ ಯಾವ ಧರ್ಮದವರು, ಯಾರು ಯಾವ ಧರ್ಮಕ್ಕೆ ಬೇಕಾದ್ರೂ ಹೋಗಬಹುದು. ಮತಾಂತರ ಆಗಲು ಡಿಸಿ ಬಳಿ ಅರ್ಜಿ ಹಾಕಬಹುದು. ಒಂದು ವೇಳೆ ಬೇಡ ಅಂದ್ರೆ ಹಿಂದಕ್ಕೆ ಬರಬಹುದು. ಕಾಂಗ್ರೆಸ್, ಜೆಡಿಎಸ್ ಯಾಕೆ ವಿರೋಧಿಸ್ತಿದ್ದಾರೆ ಗೊತ್ತಿಲ್ಲ.
ಡಿಕೆಶಿ ಅವರಿಗೆ ಮತಾಂತರ ಆದ ಹೆಣ್ಣು ಮಕ್ಕಳ ಕಷ್ಟ ಗೊತ್ತಿಲ್ಲ. ಮತಾಂತರ ಮಾಡಿ ಅವರ ದೇಹವನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದರು.

ಡಿಕೆಶಿ ಬಂದ್ರೆ ಅವರನ್ನ ವೈಯಕ್ತಿಕವಾಗಿ ಕರೆದುಕೊಂಡು ಹೋಗಿ ತೋರಿಸ್ತೀನಿ. ಅವರಿಗೆ ಮತಾಂತರ ಆದ ಹೆಣ್ಣು ಮಕ್ಕಳ ಕಷ್ಟ ಗೊತ್ತಾಗಲಿ. ಮತಾಂತರ ಕಾಯ್ದೆ ಬಗ್ಗೆ ಬಂದಾಗ ಡಿಕೆಶಿ, ಸಿದ್ದರಾಮಯ್ಯ, ಜಾರ್ಜ್ ಸದನದಲ್ಲೇ ಚರ್ಚೆ ಮಾಡಿ ಹೊರ ಹೋದರು. ಕಾನೂನು ಬದ್ದವಾಗಿ ಮತಾಂತರ ಕಾಯ್ದೆ ಜಾರಿಗೆ ತರ್ತೀವಿ ಎಂದರು.

ಸಮಸ್ಯೆಯಲ್ಲೇ ಉತ್ತರದ ಯೋಜನೆ ಕಾಲಹರಣ: ಸರಕಾರದ ವಿರುದ್ಧ ಪ್ರತಿಪಕ್ಷಗಳು ಕಟು ವಾಗ್ದಾಳಿ

ವಿಧೇಯಕ ವಿರೋಧಿಸಿ ಕಾಂಗ್ರೆಸ್ ಹೋರಾಟ!
ಮತಾಂತರ ನಿಷೇಧ ವಿಧೇಯಕವನ್ನು ವಿರೋಧಿಸಿ ಬುಧವಾರವೂ ವಿಧಾನಸಭೆಯಲ್ಲಿ ಗದ್ದಲ ಮುಂದುವರಿಯುವ ಸಾಧ್ಯತೆ ಇದೆ. ಮಂಗಳವಾರ ಸದನದಲ್ಲಿ ಮತಾಂತರ ನಿಷೇಧ ವಿಧೇಯಕವನ್ನು ಏಕಾಏಕಿ ಮಂಡಿಸಿದ ಹಿನ್ನೆಲೆಯಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ಸಭಾತ್ಯಾಗ ಮಾಡಿ ಆಕ್ರೋಶ ವ್ಯಕ್ತಪಡಿಸಿತ್ತು.

ಅಷ್ಟೇ ಅಲ್ಲದೆ ಕದ್ದು ಮುಚ್ಚಿ ವಿಧೇಯಕ ತರಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪ‌ ಮಾಡಿದ್ದರು. ಬುಧವಾರವೂ ಕಾಂಗ್ರೆಸ್ ಹೋರಾಟ ನಡೆಸಲಿದೆ.

ತಾಕತ್ ಇದ್ರೆ ಮತಾಂತರ ವಿರೋಧಿ ವಿಧೇಯಕ ತಡೆಯಿರಿ – ಎಂಪಿ ರೇಣುಕಾಚಾರ್ಯ ಸವಾಲು!



Read more