Source : Online Desk
ಕೋಯಿಕ್ಕೋಡ್: ತಿಕ್ಕೋಡಿಯಲ್ಲಿ ನಿನ್ನೆ ಭೀಕರ ಘಟನೆಯೊಂದು ಜರುಗಿತ್ತು. ಅದರಲ್ಲಿ ಯುವತಿಗೆ ಚಾಕು ಚುಚ್ಚಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಬಳಿಕ ಭಗ್ನ ಪ್ರೇಮಿ ತಾನೂ ಸಹ ಚಾಕುವಿನಿಂದ ಚುಚ್ಚಿಕೊಂಡು ಬೆಂಕಿ ಹಚ್ಚಿಕೊಂಡಿದ್ದ. ಆದರೆ ಚಿಕಿತ್ಸೆ ಫಲಿಸದ ಹಿನ್ನೆಲೆ ಶನಿವಾರ ನಂದಕುಮಾರ್(31) ಮೃತಪಟ್ಟಿದ್ದಾರೆ.
ಘಟನೆ ವಿವರ
ತಿಕ್ಕೋಡಿಯ ಪಳ್ಳಿತಾಳಂ ನಿವಾಸಿಯಾದ ನಂದಕುಮಾರ್ ಕೃಷ್ಣಪ್ರಿಯಾ ಎಂಬ ಯುವತಿಯನ್ನು ಪ್ರೀತಿಸುವಂತೆ ಕಾಡುತ್ತಿದ್ದ. ಆದ್ರೆ ಕೃಷ್ಣಪ್ರಿಯಾ ಈತನ ಪ್ರೀತಿ ನಿರಾಕರಿಸಿದ್ದಳು. ಹಾಗೆಯೇ ಈತ ಕೊಡುತ್ತಿದ್ದ ಕಿರುಕುಳದ ಬಗ್ಗೆ ಸಂಬಂಧಿಕರಿಗೆ ತಿಳಿಸಿದ್ದಳು.
ಎಂದಿನಂತೆ ತಿಕ್ಕೋಡಿ ಪಂಚಾಯತ್ ಕಚೇರಿಗೆ ಕೆಲಸಕ್ಕೆ ಹೋಗುವಾಗ ಶುಕ್ರವಾರ 9.50 ಸುಮಾರಿಗೆ ನಂದಕುಮಾರ್ ಪಂಚಾಯತ್ ಕಚೇರಿಗೆ ತೆರಳಿದ್ದಾನೆ. ಮತ್ತೆ ಅಲ್ಲಿ ಜಗಳವಾಡಿದ್ದಾನೆ. ಕೋಪಗೊಂಡ ಆತ ಆ ವೇಳೆ ಕೃಷ್ಣಪ್ರಿಯಾಗೆ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಇದಾದ ಕೆಲವೇ ಕ್ಷಣದಲ್ಲಿ ಚಾಕುವಿನಿಂದ ತಾನೂ ಸಹ ಚುಚ್ಚಿಕೊಂಡಿದ್ದಾನೆ. ಹಾಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.
ಅಲ್ಲಿದ್ದ ಸ್ಥಳೀಯರು ಬೆಂಕಿ ನಂದಿಸಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಕೃಷ್ಣಪ್ರಿಯಾ ಚಿಕಿತ್ಸೆ ಫಲಿಸದೇ ನಿನ್ನೆ ಸಂಜೆ 5 ಗಂಟೆ ಸುಮಾರು ಮೃತಪಟ್ಟಿದ್ದರು. ಇಂದು ನಂದಕುಮಾರ್ ಸಹ ಸಾವಿಗೀಡಾಗಿದ್ದಾನೆ.