Arya: ಮುದ್ದು ಮಗಳಿಗೆ ಮುದ್ದಾದ ಹೆಸರನ್ನಿಟ್ಟ ‘ಯುವರತ್ನ’ ನಟಿ ಸಾಯೇಷಾ ಸೈಗಲ್
ಕಳೆದ ಜುಲೈ 25ರಂದು ಸಾಯೇಷಾ ಸೈಗಲ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ತಮ್ಮ ಮನೆಗೆ ಹೊಸ ಸದಸ್ಯೆ ಎಂಟ್ರಿ ನೀಡಿದ್ದರ ಕುರಿತು ಆರ್ಯ ದಂಪತಿ ಮೊದಲು ಮಾಹಿತಿ ಹಂಚಿಕೊಂಡಿರಲಿಲ್ಲ. ಆರ್ಯ ಸ್ನೇಹಿತ ನಟ ವಿಶಾಲ್ ಟ್ವೀಟ್ ಮಾಡಿ ‘ನಾನು ಅಂಕಲ್ ಆಗುತ್ತಿದ್ದೇನೆ ಎಂದು ಹೇಳಲು ತುಂಬ ಖುಷಿಯಾಗುತ್ತಿದೆ. ನನ್ನ ಸಹೋದರ ಆರ್ಯ ಮತ್ತು ಸಾಯೇಷಾಗೆ ಮಗಳು ಹುಟ್ಟಿದ್ದಾಳೆ. ಮಗುವಿಗೆ ದೇವರು ಒಳ್ಳೆಯದನ್ನು ಮಾಡಲಿ’ ಎಂದಿದ್ದರು. ಆದರೆ ಇದುವರೆಗೂ ಮಗಳ ಬಗ್ಗೆ ಈ ದಂಪತಿ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ, ಒಂದು ಫೋಟೋ ಕೂಡ ಹಂಚಿಕೊಂಡಿಲ್ಲ. ಮಗಳಿಗೆ ಅರಿಯಾನಾ ಎಂದು ಹೆಸರಿಟ್ಟಿದ್ದಾರೆ.
2015ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಸಾಯೇಷಾ ಸೈಗಲ್ ಅವರು ಪುನೀತ್ ರಾಜ್‌ಕುಮಾರ್ ಜೊತೆ ‘ಯುವರತ್ನ’ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ನಟ ಆರ್ಯ ಜೊತೆ ‘ಟೆಡ್ಡಿ’, ‘ಗಜನಿಕಾಂತ್’, ‘ಕಾಪ್ಪಾನ್’ ಸಿನಿಮಾಗಳಲ್ಲಿ ಸಾಯೇಷಾ ನಟಿಸಿದ್ದಾರೆ. ಈ ಸಿನಿಮಾದಲ್ಲಿ ನಟಿಸುತ್ತಿರುವಾಗಲೇ ಅವರಿಬ್ಬರ ಮಧ್ಯೆ ಸ್ನೇಹ ಬೆಳೆದಿದೆ. ಆನಂತರ ಸ್ನೇಹ ಪ್ರೀತಿಗೆ ತಿರುಗಿದ್ದು, ಮದುವೆಯಾಗಿದ್ದಾರೆ. ಅನೇಕ ದಿನಗಳಿಂದ ಸಾಯೇಷಾ, ಆರ್ಯ ಪ್ರೀತಿ ಮಾಡುತ್ತಿದ್ದಾರೆಂದು ಗಾಸಿಪ್ ಹರಡಿದ್ದರೂ ಆ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.ಹಿರಿಯ ಆಶೀರ್ವಾದ ಪಡೆದು 2019ರ ಮಾರ್ಚ್‌ನಲ್ಲಿ ಆರ್ಯ ಜೊತೆಗೆ ಸಪ್ತಪದಿ ಅವರು ತುಳಿದಿದ್ದು, ಅವರಿಬ್ಬರ ನಡುವೆ 12 ವರ್ಷಗಳ ವಯಸ್ಸಿನ ಅಂತರವಿದೆ.
‘ಯುವರತ್ನ’ ನಟಿ ಸಾಯೇಷಾ ಪತಿ ಆರ್ಯ ವಿರುದ್ಧ ಮಹಿಳೆಗೆ ವಂಚಿಸಿದ ಆರೋಪ; ಇಬ್ಬರ ಬಂಧನ
ಫಿಟ್‌ನೆಸ್ ಕಡೆಗೆ ಗಮನ ಕೊಡುವ ಆರ್ಯ ಒಂದಾದ ಮೇಲೆ ಒಂದರಂತೆ ವಿಭಿನ್ನ ಪಾತ್ರಗಳನ್ನು ಮಾಡುತ್ತಿದ್ದಾರೆ. ಸಾಯೇಷಾ ಸದ್ಯ ಮಗಳ ಕಡೆಗೆ ಗಮನ ಕೊಡುತ್ತಿದ್ದು, ಶೀಘ್ರದಲ್ಲಿಯೇ ಚಿತ್ರರಂಗಕ್ಕೆ ಎಂಟ್ರಿ ಕೊಡಬಹುದು. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸಾಯೇಷಾ, ಆರ್ಯ ಅವರಿಬ್ಬರೂ ಜೊತೆಗಿರುವ ಫೋಟೋ, ಸಿನಿಮಾ ಕುರಿತಂತೆ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ.