ಹೈದರಾಬಾದ್: ತೆಲುಗಿನ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ನಲ್ಲಿರುವ ದೀಪ್ತಿ ಸುನೈನಾ ಹಾಗೂ ಬಿಗ್‌ಬಾಸ್ ಸ್ಪರ್ಧಿ ಷಣ್ಮುಖ ಅವರು ಶೀಘ್ರದಲ್ಲೇ ಮದುಮೆಯಾಗಲಿದ್ದಾರೆ.
ಹೌದು, ಈ ಜೋಡಿ ಹಕ್ಕಿಗಳು ಸಪ್ತಪದಿ ತುಳಿಯಲಿದ್ದಾರೆ ಎಂದು ಟಾಲಿವುಡ್ ಮಂದಿ ಹೇಳುತ್ತಿದ್ದಾರೆ. ಈ ಹಿಂದೆ ದೀಪ್ತಿ ತೆಲುಗಿನ ಬಿಗ್‌ಬಾಸ್ 2ರಲ್ಲಿ ಭಾಗವಹಿಸಿದ್ದರು.
ಸದ್ಯ ದೀಪ್ತಿ ಫೇಸ್‌ಬುಕ್ ಸೇರಿದಂತೆ ಇನ್‌ಸ್ಟಾಗ್ರಾಂನಲ್ಲಿ ಸದಾ ಸಕ್ರಿಯರಾಗಿದ್ದಾರೆ. ಅಭಿಮಾನಿಗಳಿಗೆ ಹತ್ತಿರ ಇರಲು, ಫೋಟೊಗಳು, ವಿಡಿಯೊಗಳು ಹಾಗೂ ವಿಡಿಯೊ ಸಾಂಗ್‌ಗಳನ್ನು ಅಪ್‌ಲೋಡ್ ಮಾಡುತ್ತಿರುತ್ತಾರೆ.
ಇತ್ತ ಷಣ್ಮುಖ ಕಿರುತೆರೆ, ಸಾಮಾಜಿಕ ಜಾಲತಾಣಗಳು ಹಾಗೂ ನಿರೂಪಣೆ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.
ಟಾಲಿವುಡ್ ಮಾಹಿತಿ ಪ್ರಕಾರ, ಷಣ್ಮುಖ ಅವರ ಕುಟುಂಬದವರು ದೀಪ್ತಿ ಅವರನ್ನು ಒಪ್ಪಿದ್ದಾರೆ ಎನ್ನಲಾಗಿದೆ. ಇವರಿಬ್ಬರು ಮದುವೆಯಾಗುವುದು ಇನ್ನು ತಡವಾಗಲಿದೆಯೆಂತೆ!
ಷಣ್ಮುಖ ಅವರ ಅಣ್ಣನಿಗೆ ಇನ್ನು ಮದುವೆಯಾಗಿಲ್ಲ, ಅವರ ವಿವಾಹದ ಬಳಿಕವೇ ಷಣ್ಮುಖ ಮದುವೆಯಂತೆ ಎಂದು ಅವರ ಕುಟುಂಬದವರು ಹೇಳಿದ್ದಾರೆ ಎಂದು ಟಾಲಿವುಡ್ ಮೂಲಗಳು ತಿಳಿಸಿವೆ