Source : ANI
ನವದೆಹಲಿ: ರಾಜಧಾನಿ ದೆಹಲಿ ಚಳಿಯಿಂದ ನಲುಗಿ ಹೋಗಿದೆ. ಇಂದು ಮಂಗಳವಾರ ಬೆಳಗ್ಗೆ 8.30ಕ್ಕೆ ದೆಹಲಿಯ ಸಫ್ದರ್ಜಂಗ್ ಪ್ರದೇಶದಲ್ಲಿ 4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
No significant change in minimum temperatures very likely over most parts of Northwest India (except Rajasthan), Central & East India and Maharashtra during next 2 days; rise by 3-5°C over Northwest India and by 2-4°C over Central & East India and Maharashtra thereafter.
— India Meteorological Department (@Indiametdept) December 20, 2021
ದೆಹಲಿಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಇದೇ ರೀತಿಯ ಹವಾಮಾನವಿದೆ. ಜನರು ಚಳಿಯಲ್ಲಿ ಗಡಗಡ ನಡುಗುವಂತೆ ಮಾಡಿದೆ. ಇಂದು ನಸುಕಿನ ಜಾವ ದೆಹಲಿಯಲ್ಲಿ ಜನರು ತೀವ್ರ ಚಳಿಗೆ ಬೀದಿಬದಿ ಅಂಗಡಿ ಪಕ್ಕ ಬೆಂಕಿಯನ್ನು ಹೊತ್ತಿಸಿ ಚಳಿ ಕಾಯಿಸಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ತೀವ್ರ ಚಳಿಗೆ ಬಿಸಿಬಿಸಿ ಟೀ ಸೇವಿಸುತ್ತಿರುವುದು ಕಂಡುಬಂತು. ದಪ್ಪ ದಪ್ಪ ರಗ್ಗು ಹೊದ್ದುಕೊಂಡು ಜನರು ಓಡಾಡುತ್ತಿರುವುದು ಸಾಮಾನ್ಯವಾಗಿತ್ತು. ರಾಷ್ಟ್ರ ರಾಜಧಾನಿಗೆ ಹಳದಿ ಅಲರ್ಟ್ ನೀಡಲಾಗಿದೆ.
ತಾಪಮಾನ ಕುಸಿತ ಕಂಡ ಪರಿಣಾಮ ಮಂಜು ಮುಸುಕಿದ ವಾತಾವರಣ ದೆಹಲಿ ಜನರನ್ನು ಕಾಡಿದೆ. ಉತ್ತರ ಭಾರತದಾದ್ಯಂತ ಶೀತಗಾಳಿಯು ತನ್ನ ಹಿಡಿತವನ್ನು ಬಿಗಿಗೊಳಿಸಿದ್ದು, ಈ ಪ್ರದೇಶದ ಹಲವಾರು ಭಾಗಗಳಲ್ಲಿ ತಾಪಮಾನವು ಹಿಮಭರಿತ ಗಾಳಿಯಿಂದಾಗಿ ಕುಸಿದಿದೆ.
हरियाणा, मध्य प्रदेश, झारखंड और ओडिशा में कुछ स्थानों पर और पंजाब, दिल्ली, उत्तर प्रदेश, राजस्थान, छत्तीसगढ़, बिहार, गंगीय पश्चिम बंगाल, सौराष्ट्र और कच्छ, विदर्भ और तेलंगाना में कुछ स्थानों पर शीत लहर की स्थिति देखी गई। pic.twitter.com/Mpn71Cip8S
— डीडी न्यूज़ (@DDNewsHindi) December 21, 2021
ವಾಯುವ್ಯ ಭಾರತವು ಮುಂದಿನ ವಾರದಲ್ಲಿ ಶೀತ ಅಲೆಯಂತಹ ಪರಿಸ್ಥಿತಿಗಳಿಗೆ ಸಾಕ್ಷಿಯಾಗಲಿದೆ.ಇದೇ ರೀತಿಯ ವಾತಾವರಣ ಇನ್ನು ಕೆಲವು ದಿನಗಳವರೆಗೆ ಮುಂದುವರಿಯಬಹುದು ಎಂದು ಹೇಳಲಾಗುತ್ತಿದೆ. ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದ ಹಲವು ಪ್ರದೇಶಗಳಲ್ಲಿ ಹಿಮಪಾತವು ಬಯಲು ಪ್ರದೇಶದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದೆ.
ದೆಹಲಿಯಲ್ಲಿ ಕೆಟ್ಟ ಹವಾಮಾನ: ದೆಹಲಿಯಲ್ಲಿ ಪ್ರಸ್ತುತ ವಾಯು ಗುಣಮಟ್ಟ ಅತಿ ಕಳಪೆ ಮಟ್ಟಕ್ಕೆ ಇಳಿದಿದ್ದು ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ 316ರಲ್ಲಿದೆ ಎಂದು SAFAR-India ತಿಳಿಸಿದೆ. ಮುಂಬೈ ಮತ್ತು ಪುಣೆ ನಗರಗಳ ವಾಯು ಗುಣಮಟ್ಟ ಕಳಪೆ ಮಟ್ಟದಲ್ಲಿದೆ.
ಪಂಜಾಬ್ ರಾಜ್ಯದಲ್ಲಿ ಕೂಡ ತೀವ್ರ ಚಳಿಯಿದ್ದು,ಅಮೃತಸರದಲ್ಲಿ ದಟ್ಟ ಮಂಜು ಕವಿದಿರುವುದು ಮಾತ್ರವಲ್ಲದೆ ಶೀತಗಾಳಿ ಹಬ್ಬಿದೆ.