ಮೆಸ್ಕಾಂ ಅಧಿಕಾರಿಗಳು ರೈತರಿಂದ ಲಂಚ ಪಡೆದರೆ ಸಸ್ಪೆಂಡ್: ಸಚಿವ ಸುನೀಲ್ ಕುಮಾರ್ ಎಚ್ಚರಿಕೆ
”ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕೆ ಹಿಂದೆ ಸ್ಥಳೀಯ ಆಡಳಿತದಿಂದ ನಿರಾಕ್ಷೇಪಣಾ ಪತ್ರ (ಎನ್‌ಸಿ) ಪಡೆಯುವುದು ಕಡ್ಡಾಯವಾಗಿದ್ದು, ಹಲವೆಡೆ ಇದೇ ಸಮಸ್ಯೆಯಾಗಿ ಪರಿಣಮಿಸಿತ್ತು. ಅಗತ್ಯವಿರುವ ಎಲ್ಲ ಮನೆಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಪಡಿತರ ಚೀಟಿ, ಆಧಾರ್, ಮತದಾರರ ಗುರುತಿನ ಚೀಟಿ, ಗ್ರಾಮ ಪಂಚಾಯಿತಿ ಒದಗಿಸುವ ಮಾಹಿತಿ ಪರಿಗಣಿಸಲು ಅವಕಾಶ ಕಲ್ಪಿಸಿದ್ದರಿಂದ ಕಾಲಮಿತಿಯಲ್ಲಿ ಸೇವೆ ಕಲ್ಪಿಸಲು ಸಾಧ್ಯವಾಗಿದೆ” ಎಂದು ಇಲಾಖೆ ತಿಳಿಸಿದೆ.
‘ಬೆಳಕು’ ಯೋಜನೆಯಡಿ ವಿದ್ಯುತ್ ಸಂಪರ್ಕರಹಿತ ಮನೆಗಳ ಸರ್ವೆ ನಡೆಸಿದಾಗ 1,26,787 ಮನೆಗಳಿಗೆ ಸಂಪರ್ಕವಿಲ್ಲದಿರುವುದು ಪತ್ತೆಯಾಗಿತ್ತು. ಬೆಸ್ಕಾಂ ವ್ಯಾಪ್ತಿಯಲ್ಲಿ 14,904, ಸೆಸ್ಕ್- 20,741, ಮೆಸ್ಕಾಂ- 13,135, ಹೆಸ್ಕಾಂ- 37,419, ಜೆಸ್ಕಾಂ- 35,253 ಹಾಗೂ ಎಚ್‌ಆರ್‌ಇಸಿಎಸ್ ವ್ಯಾಪ್ತಿಯಲ್ಲಿ 5335 ಮನೆಗಳಿಗೆ ವಿದ್ಯುತ್ ಸಂಪರ್ಕವಿರಲಿಲ್ಲ. ಒಟ್ಟು 142.44 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಜಾರಿಯಾಗಿದೆ.
ಕನ್ನಡಿಗರಿಗೆ ಉದ್ಯೋಗ ನೀಡಲು ಶೀಘ್ರವೇ ಸರೋಜಿನಿ ಮಹಿಷಿ ವರದಿಯಲ್ಲಿ ಮಾರ್ಪಾಡು: ಸಚಿವ ಸುನೀಲ್ ಕುಮಾರ್
ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಲಕ್ಷಾಂತರ ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲದ ವಿಚಾರ ತೀವ್ರವಾಗಿ ಕಾಡುತ್ತಿತ್ತು. ಆಹಾರ, ಆಶ್ರಯ, ಅಕ್ಷರದಂತೆ ಬೆಳಕು ಕೂಡ ಅನಿವಾರ್ಯ. ಹಾಗಾಗಿ ಎಲ್ಲ ಮನೆಗಳಿಗೂ ಸಂಪರ್ಕ ಕಲ್ಪಿಸಬೇಕೆಂಬ ಸಿಎಂ ಬಸವರಾಜ ಬೊಮ್ಮಾಯಿ ಆಶಯಕ್ಕೆ ಪೂರಕವಾಗಿ ಬೆಳಕು ಯೋಜನೆ ಜಾರಿಗೊಳಿಸಲಾಗಿದೆ. ಆರಂಭದಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಮನೆಗಳೇ ಇಲ್ಲ ಎಂದ ಅಧಿಕಾರಿಗಳು ಪಟ್ಟು ಹಿಡಿದು ಕೇಳಿದ ನಂತರ ಮಾಹಿತಿ ಸಂಗ್ರಹಿಸಿ ನೀಡಿದರು. ವಿದ್ಯುತ್ ಸಂಪರ್ಕವಿಲ್ಲದ ಮನೆಗಳ ಮಾಹಿತಿ ಈಗಲೂ ಬರುತ್ತಿದ್ದು, ಅವುಗಳಿಗೂ ಸಂಪರ್ಕ ಕಲ್ಪಿಸಲಾಗುವುದು ಎಂದು ಸಚಿವ ವಿ. ಸುನೀಲ್ ಕುಮಾರ್ ತಿಳಿಸಿದರು.