ಹೈಲೈಟ್ಸ್:
- ಬಹುಕೋಟಿ ರೂ. ವಂಚನೆ ಪ್ರಕರಣದಲ್ಲಿ ಸುಖೇಶ್ ಚಂದ್ರಶೇಖರ್
- ಸುಖೇಶ್‌ಗೆ ಬಾಲಿವುಡ್ ನಟಿಯರ ಸಂಪರ್ಕ ಇತ್ತು
- ಜಾಕ್ವೆಲಿನ್‌ಗಾಗಿ ಸಿನಿಮಾ ಮಾಡುವ ಆಶಯದಲ್ಲಿ ಸುಖೇಶ್ ಇದ್ದರು
ಬಾಲಿವುಡ್ ನಟಿಯರ ಜೊತೆ ಸುಕೇಶ್ ಸಂಪರ್ಕ ಇತ್ತು
ಬಾಲಿವುಡ್‌ನ ಅನೇಕ ನಟಿಯರ ಜತೆಗೆ ಸುಕೇಶ್ ಸಂಪರ್ಕ ಇಟ್ಟುಕೊಂಡಿದ್ದ. ಸದಾ ಅವರೊಂದಿಗೆ ಒಂದಿಲ್ಲೊಂದು ವ್ಯವಹಾರ ಇಟ್ಟುಕೊಂಡು ಮಾತುಕತೆ ನಡೆಸಲು ಆತ ಹಂಬಲಿಸುತ್ತಿದ್ದ. ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ನೋರಾ ಫತೇಹಿ ಅವರೆಂದರೆ ಈತನಿಗೆ ಅಚ್ಚುಮೆಚ್ಚು. ಅವರಿಗಾಗಿ ಕೋಟ್ಯಂತರ ರೂ. ಬೆಲೆ ಬಾಳುವ ಉಡುಗೊರೆಗಳನ್ನು ಖರೀದಿಸಿ ತರುತ್ತಿದ್ದ ಎನ್ನುವುದು ಜಾರಿ ನಿರ್ದೇಶನಾಲಯದ ತನಿಖೆಯಿಂದ ಬಯಲಾಗಿದೆ.
ಜಾಕ್ವೆಲಿನ್ ಸಿನಿಮಾಕ್ಕೆ 500 ಕೋಟಿ ರೂ ಹಣ ಹಾಕಲು ಸುಕೇಶ್ ನಿರ್ಧಾರ ಮಾಡಿದ್ದರು
ಸುಕೇಶ್ ಜತೆಗೆ ಸಂಪರ್ಕ ಇಟ್ಟುಕೊಂಡಿದ್ದ ಈ ಇಬ್ಬರು ನಟಿಯರ ವಿರುದ್ಧ ಹಣ ಅಕ್ರಮ ಪರಭಾರೆ ಪ್ರಕರಣ ದಾಖಲಾಗಿದ್ದು, ಹಲವು ಸುತ್ತಿನ ವಿಚಾರಣೆ ಕೂಡ ಎದುರಿಸಿದ್ದಾರೆ. ಜಾಕ್ವೆಲಿನ್‌ಗಾಗಿ ಮೂರು ಭಾಗಗಳಲ್ಲಿ ಹೊಸ ಚಿತ್ರ ಸರಣಿಯೊಂದನ್ನು ನಿರ್ಮಾಣ ಮಾಡಲು ಸುಕೇಶ್ ಒಪ್ಪಿಗೆ ಸೂಚಿಸಿದ್ದ. ಅದಕ್ಕೆ ವ್ಯಯವಾಗುವ 500 ಕೋಟಿ ರೂ. ಭರಿಸುವುದಾಗಿ ಭರವಸೆ ನೀಡಿದ್ದ. ಆದರೆ ನಿರ್ಮಾಪಕರ ಪಟ್ಟಿಯಲ್ಲಿ ತನ್ನ ಹೆಸರು ಪ್ರಕಟಿಸದಿರುವಂತೆ ಚಿತ್ರ ನಿರ್ದೇಶಕರಿಗೆ ತಿಳಿಸಿದ್ದ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಅಮಿತ್ ಶಾ ನಂಬರ್ ನಕಲು ಮಾಡಿ ಜಾಕ್ವೆಲಿನ್ ಫರ್ನಾಂಡಿಸ್ ಸ್ನೇಹ ಸಂಪಾದಿಸಿದ್ದ ವಂಚಕ ಸುಕೇಶ್
ಜಾಕ್ವೆಲಿನ್ ಅವರನ್ನು ಹಾಲಿವುಡ್ ನಟಿ ಏಂಜಲೀನಾ ಜೋಲಿಗೆ ಹೋಲಿಕೆ ಮಾಡಿದ್ದ ಸುಕೇಶ್
ನಟಿಯೊಬ್ಬರನ್ನು ‘ಸೂಪರ್‌ಹೀರೊ’ ಆಗಿಸಿ ಸಿದ್ಧಪಡಿಸಿದ ಚಿತ್ರಗಳು ಭಾರತದಲ್ಲಿ ಇದುವೆರೆಗೆ ಬಂದಿಲ್ಲ. ಜಾಕ್ವೆಲಿನ್ ಅವರನ್ನು ಬಳಸಿಕೊಂಡು ಈ ಕೊರತೆ ತುಂಬುವುದು ಸುಕೇಶ್ ಕನಸಾಗಿತ್ತು. ಮೂರು ಭಾಗಗಳಲ್ಲಿ ಬರಲಿದ್ದ ಈ ಚಿತ್ರಕ್ಕೆ ಹಾಲಿವುಡ್‌ನ ವಿಎಫ್‌ಎಕ್ಸ್ ಕಲಾವಿದರನ್ನು ಬಳಸಿಕೊಳ್ಳಲು ತಯಾರಿ ನಡೆದಿತ್ತು. ಜಾಕ್ವೆಲಿನ್ ಅವರನ್ನು ಹಾಲಿವುಡ್ ನಟಿ ಏಂಜಲೀನಾ ಜೋಲಿ ಜತೆ ಹೋಲಿಕೆ ಮಾಡುತ್ತಿದ್ದ ಸುಕೇಶ್, ತನ್ನ ಮೆಚ್ಚುಗೆಯ ಮಾತುಗಳನ್ನು ನೇರವಾಗಿಯೇ ನಟಿಗೆ ತಿಳಿಸುತ್ತಿದ್ದ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಅಮಿತ್ ಶಾ ನಂಬರ್ ನಕಲು ಮಾಡಿ ಜಾಕ್ವೆಲಿನ್ ಫರ್ನಾಂಡಿಸ್ ಸ್ನೇಹ ಸಂಪಾದಿಸಿದ್ದ ವಂಚಕ ಸುಕೇಶ್
2015ರಿಂದ ಜಾಕ್ವೆಲಿನ್ ಫರ್ನಾಂಡೀಸ್‌ಗೂ ಶ್ರದ್ಧಾ ಕಪೂರ್‌ಗೆ ಪರಿಚಯವಿತ್ತಂತೆ. ಡ್ರಗ್ಸ್ ಕೇಸ್‌ನಿಂದ ಹೊರಬರಲು ಶ್ರದ್ಧಾಗೆ ಸುಕೇಶ್ ಸಹಾಯ ಮಾಡಿದ್ದರು. ಹರ್ಮಾನ್ ಬವೇಜ ಪರಿಚಯ ಕೂಡ ಸುಕೇಶ್‌ಗೆ ಇತ್ತು. ಕಾರ್ತಿಕ್ ಆರ್ಯನ್ ಹಾಕಿಕೊಂಡು ‘ಕ್ಯಾಪ್ಟನ್’ ಎಂಬ ಸಿನಿಮಾ ಮಾಡಲು ಸುಕೇಶ್ ಯೋಜನೆ ಹಾಕಿದ್ದರು.
ಅಶ್ಲೀಲ ಸಿನಿಮಾ ನಿರ್ಮಾಣ ದಂಧೆ ಕೇಸ್‌ನಡಿ ರಾಜ್ ಕುಂದ್ರಾ ಅವರು ಜಾಮೀನು ಆಧಾರದ ಮೇಲೆ ಹೊರಬರಲು ಶಿಲ್ಪಾ ಶೆಟ್ಟಿಯನ್ನು ಸುಕೇಶ್ ಸಂಪರ್ಕ ಮಾಡಿದ್ದರಂತೆ. ನೋರಾ ಫತೇಹಿಗೂ ಕೂಡ ಸುಖೇಶ್ ದುಬಾರಿ ಕಾರ್‌ನ್ನು ಉಡುಗೊರೆಯಾಗಿ ನೀಡಿದ್ದಾಗಿ ಜಾರಿ ನಿರ್ದೇಶನಾಲಯ ನಡೆಸಿದ್ದ ವಿಚಾರಣೆಯಲ್ಲಿ ಸುಕೇಶ್ ಬಾಯಿಬಿಟ್ಟಿದ್ದಾರೆ.