Karnataka news paper

ತಾಳೆ ಎಣ್ಣೆ ಆಮದು ತೆರಿಗೆ ಶೇ.12.5ಕ್ಕೆ ಇಳಿಕೆ: ಅಡುಗೆ ಎಣ್ಣೆ ಬೆಲೆ ಮತ್ತಷ್ಟು ಇಳಿಕೆ ಸಾಧ್ಯತೆ


ಹೈಲೈಟ್ಸ್‌:

  • ಸಂಸ್ಕರಿಸಿದ ತಾಳೆ ಎಣ್ಣೆಯ ಮೇಲಿನ ಮೂಲ ಆಮದು ತೆರಿಗೆ ಶೇ.12.5ಕ್ಕೆ ಇಳಿಕೆ
  • ಈ ಮೊದಲ ಶೇ. 17.5ರಷ್ಟಿದ್ದ ತಾಳೆ ಎಣ್ಣೆ ಆಮದು ತೆರಿಗೆ
  • ದೇಶದಲ್ಲಿ ಖಾದ್ಯ ತೈಲಗಳ ಬೆಲೆ ಇಳಿಕೆ ಸಾಧ್ಯತೆ

ಹೊಸದಿಲ್ಲಿ: ಭಾರತವು ಸಂಸ್ಕರಿಸಿದ ತಾಳೆ ಎಣ್ಣೆಯ ಮೇಲಿನ ಮೂಲ ಆಮದು ತೆರಿಗೆಯನ್ನು ಶೇ.12.5ಕ್ಕೆ ಇಳಿಸಲಾಗಿದೆ ಎಂದು ಕೇಂದ್ರ ಸರ್ಕಾರವು ಸೋಮವಾರ ಅಧಿಸೂಚನೆಯಲ್ಲಿ ತಿಳಿಸಿದೆ. ಈ ಮೊದಲ ತಾಳೆ ಎಣ್ಣೆ ಮೇಲಿನ ಆಮದು ತೆರಿಗೆ ಶೇ. 17.5ರಷ್ಟಿತ್ತು. ಭಾರತವು ವಿಶ್ವದ ಅತಿದೊಡ್ಡ ಅಡಿಗೆ ಎಣ್ಣೆ ಖರೀದಿದಾರ ರಾಷ್ಟ್ರ ಎನಿಸಿದ್ದು, ದೇಶದಲ್ಲಿ ಖಾದ್ಯ ತೈಲಗಳ ದಾಖಲೆಯ ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ.

ಆಮದು ತೆರಿಗೆ ಕಡಿತದಿಂದ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ. ಅಲ್ಲದೆ, ಭಾರತೀಯ ಖರೀದಿದಾರರು ಕಚ್ಚಾ ತಾಳೆ ಎಣ್ಣೆಗಿಂತಲೂ, ಸಂಸ್ಕರಿಸಿದ ತಾಳೆ ಎಣ್ಣೆಯತ್ತ ಹೆಚ್ಚು ಆಕರ್ಷಕತರಾಗುವಂತೆ ಮಾಡಲಿದೆ. ಇದರಿಂದ ಮಲೇಷ್ಯಾ ಮತ್ತು ಇಂಡೋನೇಷ್ಯಾದಿಂದ ಸಂಸ್ಕರಿಸಿದ ಖಾದ್ಯ ತೈಲ ಸಾಗಣೆ ಹೆಚ್ಚಲಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಇಳಿಕೆ! ಯಾವ ಎಣ್ಣೆಗೆ ಎಷ್ಟು ಕುಸಿತ?

ತೆರಿಗೆ ಕಡಿತದ ನಂತರ, ಸಂಸ್ಕರಿಸಿದ ತಾಳೆ ಎಣ್ಣೆ ಆಮದುಗಳು ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ (ಎಐಡಿಸಿ) ಮತ್ತು ಇತರ ತೆರಿಗೆಗಳನ್ನು ಒಳಗೊಂಡಂತೆ ಒಟ್ಟಾರೆ ಶೇ.13.75ರ ತೆರಿಗೆಗೆ ಒಳಪಟ್ಟಿರುತ್ತವೆ. ಇದು ಹಿಂದಿನ ಶೇ.19.25ರ ತೆರಿಗೆಗೆ ಹೋಲಿಸಿದರೆ ಭಾರೀ ಇಳಿಕೆಯಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಖಾದ್ಯ ತೈಲ ದರದಲ್ಲಿ ಮುಂಬರುವ ದಿನಗಳಲ್ಲಿ 3-4 ರೂಪಾಯಿ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಉದ್ಯಮ ವಲಯದ ಮಂಡಳಿ ಎಸ್‌ಇಎ ಇತ್ತೀಚೆಗೆ ತಿಳಿಸಿತ್ತು. ಕಳೆದ 1 ತಿಂಗಳಲ್ಲಿ ಖಾದ್ಯ ತೈಲ ದರದಲ್ಲಿ ಪ್ರತಿ.ಕೆ.ಜಿಗೆ 8-10 ರೂ. ಇಳಿಕೆಯಾಗಿತ್ತು. ಮುಂಬರುವ ದಿನಗಳಲ್ಲಿ ಸ್ಥಳೀಯ ಮತ್ತು ಜಾಗತಿಕ ಮಟ್ಟದಲ್ಲಿ ತೈಲಬೀಜಗಳ ಉತ್ಪಾದನೆ ಹೆಚ್ಚಳವಾಗಲಿದ್ದು, ತೈಲ ದರ ಕೂಡ ತಗ್ಗಲಿದೆ ಎಂದಿದೆ.

ಅಡುಗೆ ಎಣ್ಣೆ ಬೆಲೆಯಲ್ಲಿ ಮತ್ತೆ ₹4 ಇಳಿಕೆ? ಕಳೆದ ತಿಂಗಳಲ್ಲಿ ₹10 ಇಳಿಕೆಯಾಗಿದ್ದ ದರ!

120 ಲಕ್ಷ ಟನ್‌ ಸೋಯಾಬೀನ್‌ ಬೆಳೆ ನಿರೀಕ್ಷಿಸ ಲಾಗಿದೆ. 80 ಲಕ್ಷ ಟನ್ನಿಗಿಂತಲೂ ಅಧಿಕ ನೆಲಗಡಲೆ ಬೆಳೆ ಉತ್ಪತ್ತಿಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಪ್ರಮುಖವಾಗಿ ಕಡಿಮೆ ಆಮದು ಸುಂಕದ ಹಿನ್ನೆಲೆಯಲ್ಲಿ ಕಳೆದ ತಿಂಗಳಲ್ಲಿ ಖಾದ್ಯ ತೈಲ ಬೆಲೆಗಳು ಪ್ರತಿ ಕೆಜಿಗೆ 8-10 ರೂ.ನಷ್ಟು ಕಡಿಮೆಯಾಗಿದೆ.

ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ ‘ಎಕನಾಮಿಕ್ ಟೈಮ್ಸ್’ ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.



Read more…