Karnataka news paper

ಮಾಜಿ ಪತ್ನಿಗೆ 730 ಮಿಲಿಯನ್ ಡಾಲರ್ ಪರಿಹಾರ: ಯುಎಇ ಪ್ರಧಾನಿಗೆ ಲಂಡನ್ ಕೋರ್ಟ್ ಆದೇಶ


ಹೈಲೈಟ್ಸ್‌:

  • 2019ರ ಏಪ್ರಿಲ್‌ನಲ್ಲಿ ಪತಿಯನ್ನು ತೊರೆದು ಲಂಡನ್‌ಗೆ ಪರಾರಿಯಾಗಿದ್ದ ರಾಜಕುಮಾರಿ
  • ಲಂಡನ್ ಕೌಟುಂಬಿಕ ನ್ಯಾಯಾಲಯದಲ್ಲಿ ಯುಎಇ ಪ್ರಧಾನಿ ಜತೆ ಕಾನೂನು ಸಮರ
  • 733 ಮಿಲಿಯನ್ ಡಾಲರ್ ಪರಿಹಾರ ನೀಡುವಂತೆ ದುಬೈ ಆಡಳಿತಗಾರನಿಗೆ ಆದೇಶ

ಲಂಡನ್: ಇಬ್ಬರು ಮಕ್ಕಳನ್ನು ವಶದಲ್ಲಿ ಇರಿಸಿಕೊಳ್ಳುವ ತಮ್ಮ ಪತ್ನಿ ಜತೆಗಿನ ಕಾನೂನು ಹೋರಾಟದಲ್ಲಿ ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್-ಮಕ್ತೌಮ್ ಅವರು, ಬ್ರಿಟಿಷ್ ದಾಖಲೆಯ 554 ಮಿಲಿಯನ್ ಪೌಂಡ್ (733 ಮಿಲಿಯನ್ ಡಾಲರ್) ಮೊತ್ತಕ್ಕೂ ಅಧಿಕ ಪರಿಹಾರವನ್ನು ಒದಗಿಸುವಂತೆ ಲಂಡನ್‌ನಲ್ಲಿನ ಹೈಕೋರ್ಟ್ ಆದೇಶ ನೀಡಿದೆ.

ಜೋರ್ಡಾನ್ ರಾಜ ಅಬ್ದುಲ್ಲಾ ಅವರ ಮಲ ಸಹೋದರಿಯಾಗಿರುವ ರಾಜಕುಮಾರಿ ಹಯಾ ಬಿಂಟ್ ಅಲ್-ಹುಸೈನ್ ಹಾಗೂ ದಂಪತಿಯ ಇಬ್ಬರು ಮಕ್ಕಳ ಜೀವಮಾನದ ಭದ್ರತೆಗಾಗಿ ಈ ಬೃಹತ್ ಮೊತ್ತದ ಪರಿಹಾರಕ್ಕೆ ನ್ಯಾಯಾಧೀಶ ಫಿಲಿಪ್ ಮೂರ್ ನಿರ್ದೇಶಿಸಿದ್ದಾರೆ.
ಬ್ಯಾಂಕ್‌ ವಂಚನೆ: ಕನ್ನಡಿಗ ಉದ್ಯಮಿ ಬಿ.ಆರ್‌ ಶೆಟ್ಟಿಯ ಆಸ್ತಿ ಮುಟ್ಟುಗೋಲಿಗೆ ಲಂಡನ್‌ ಕೋರ್ಟ್‌ ಸೂಚನೆ ‘ಆಕೆ ತಮಗಾಗಿ ಮೊತ್ತವನ್ನು ಕೇಳುತ್ತಿಲ್ಲ, ಭದ್ರತೆಗಾಗಿ ಮಾತ್ರ ಕೇಳುತ್ತಿದ್ದಾರೆ. ಮದುವೆ ಒಪ್ಪಂದ ಮುರಿದು ಬಿದ್ದಿರುವುದರಿಂದ ಅವರಿಗೆ ಪರಿಹಾರವನ್ನು ನೀಡಬೇಕಾಗುತ್ತದೆ’ ಎಂದು ಕೋರ್ಟ್ ಹೇಳಿದೆ.

ಹಯಾ ಅವರ ಬ್ರಿಟಿಷ್ ಬಂಗಲೆಯ ದುರಸ್ತಿಯ ವೆಚ್ಚಕ್ಕಾಗಿ ಮೂರು ತಿಂಗಳ ಒಳಗೆ 251.5 ಮಿಲಿಯನ್ ಪೌಂಡ್ ಅನ್ನು ಒಂದು ಕಂತಿನಲ್ಲಿ ನೀಡುವಂತೆ ಮೊಹಮ್ಮದ್ ಅವರಿಗೆ ಸೂಚಿಸಲಾಗಿದೆ. ಈ ದುರಸ್ತಿಯ ಹಣಕ್ಕಾಗಿ ತಾವು ತಮ್ಮ ಆಭರಣಗಳನ್ನು ಮತ್ತು ರೇಸ್ ಕುದುರೆಗಳನ್ನು ಒತ್ತೆ ಇಡಬೇಕಾಗಿದೆ ಎಂದು ಹಯಾ ಕೋರ್ಟ್‌ನಲ್ಲಿ ಹೇಳಿದ್ದರು.

ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ಉಪಾಧ್ಯಕ್ಷ ಹಾಗೂ ಪ್ರಧಾನಿಯಾಗಿರುವ ಶೇಖ್ ಅವರಿಗೆ, ಮಕ್ಕಳಾದ 14 ವರ್ಷದ ಜಲೀಲಾ ಹಾಗೂ 9 ವರ್ಷದ ಜಾಯೆದ್ ಅವರ ಶಿಕ್ಷಣಕ್ಕಾಗಿ 3 ಮಿಲಿಯನ್ ಪೌಂಡ್ ಒದಗಿಸುವಂತೆ ಮತ್ತು 9.6 ಮಿಲಿಯನ್ ಪೌಂಡ್ ಭತ್ಯೆ ರೂಪದಲ್ಲಿ ನೀಡುವಂತೆ ಸೂಚಿಸಲಾಗಿದೆ. ಮಕ್ಕಳ ಒಂದು ವರ್ಷದ ನಿರ್ವಹಣೆಗಾಗಿ, ಅವರು ವಯಸ್ಕರಾದಾಗ ಅವರ ಭದ್ರತೆಗಾಗಿ 11.2 ಮಿಲಿಯನ್ ಪೌಂಡ್ ಪಾವತಿಸಲು ನಿರ್ದೇಶಿಸಲಾಗಿದೆ.
ಯುಎಇಯಲ್ಲಿ ವಾರಕ್ಕೆ ಎರಡೂವರೆ ದಿನ ವೀಕೆಂಡ್‌! ವಾರದಲ್ಲಿ ಅತಿ ಕಡಿಮೆ ಅವಧಿಯ ಕೆಲಸ!
ಈ ಪಾವತಿಗಳನ್ನು ಎಚ್‌ಎಸ್‌ಬಿಸಿ ಬ್ಯಾಂಕ್‌ನ 290 ಮಿಲಿಯನ್ ಪೌಂಡ್ ಭದ್ರತೆಯ ಮೂಲಕ ಖಾತರಿಪಡಿಸಲಾಗುತ್ತದೆ. ಇಂಗ್ಲಿಷ್ ಫ್ಯಾಮಿಲಿ ಕೋರ್ಟ್ ಈವರೆಗೆ ನೀಡಿದ ಅತ್ಯಂತ ದೊಡ್ಡ ಮೊತ್ತದ ಪರಿಹಾರ ಆದೇಶ ಇದಾಗಿದೆ ಎಂದು ಕೆಲವು ವಕೀಲರು ಅಭಿಪ್ರಾಯಪಟ್ಟಿದ್ದಾರೆ. ಹಯಾ ಅವರು ಮೂಲತಃ 1.4 ಬಿಲಿಯನ್ ಪೌಂಡ್ ಮೊತ್ತವನ್ನು ಕೇಳಿದ್ದರು. ಆದರೆ ಅದರ ಅರ್ಧ ಭಾಗವನ್ನು ನೀಡಲು ಕೋರ್ಟ್ ಆದೇಶಿಸಿದೆ.

ಏಳು ಗಂಟೆಗಳ ಕಾಲ ನಡೆದ ವಿಚಾರಣೆ ವೇಳೆ 47 ವರ್ಷದ ಹಯಾ ಅವರು, ಒಂದು ಕಂತಿನ ದೊಡ್ಡ ಪಾವತಿಯು ತಮ್ಮ ಮತ್ತು ಮಕ್ಕಳ ಮೇಲಿನ ಶೇಖ್ ಅವರ ನಿಯಂತ್ರಣವನ್ನು ಕಿತ್ತು ಹಾಕಲು ಅವಕಾಶ ನೀಡಲಿದೆ. ತಾವು ನಿಜಕ್ಕೂ ಸ್ವತಂತ್ರಗೊಳ್ಳಲು ಬಯಸಿದ್ದು, ಮಕ್ಕಳನ್ನೂ ಮುಕ್ತರನ್ನಾಗಿಸಲು ಬಯಸಿರುವುದಾಗಿ ಹೇಳಿದ್ದರು.

2019ರ ಏಪ್ರಿಲ್‌ನಲ್ಲಿ ರಾಜಕುಮಾರಿ ಹಯಾ ಬ್ರಿಟನ್‌ಗೆ ಪರಾರಿಯಾಗುವುದರೊಂದಿಗೆ ಕಾನೂನು ಹೋರಾಟ ಆರಂಭವಾಗಿತ್ತು. ತಮ್ಮ ಅಂಗರಕ್ಷಕರಲ್ಲಿ ಒಬ್ಬನ ಜತೆಗೆ ಅವರು ಸಂಬಂಧ ಹೊಂದಿದ್ದಾರೆ ಎಂಬ ಆರೋಪದ ನಡುವೆ ಅವರು ತಮ್ಮ ಜೀವಕ್ಕೆ ಅಪಾಯ ಇರುವ ಆತಂಕ ವ್ಯಕ್ತಪಡಿಸಿದ್ದರು. ಒಂದು ತಿಂಗಳ ಬಳಿಕ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು.

ಅದೇ ವರ್ಷ ಲಂಡನ್ ಕೋರ್ಟ್, ಮೊಹಮ್ಮದ್ ಅವರು ಹಯಾ ಅವರಿಗೆ ಜೀವ ಬೆದರಿಕೆ ಒಡ್ಡುತ್ತಿದ್ದಾರೆ. ಈ ಹಿಂದೆ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಅಪಹರಣ ಮಾಡಿದ್ದರು. ಮತ್ತೊಂದು ಮದುವೆ ಮೂಲಕ ಅವರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದರು ಎಂದು ಅಭಿಪ್ರಾಯಪಟ್ಟಿತ್ತು.



Read more