Karnataka news paper

ವಿಶ್ವದ ಟಾಪ್ 3 ಕ್ರೀಡಾಪಟುಗಳ ಪಟ್ಟಿಯಲ್ಲಿ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್


Source : The New Indian Express

ಮುಂಬೈ: ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಅವರು ಜಗತ್ತಿನ ಜನಮೆಚ್ಚಿದ ಕ್ರೀಡಾಪಟುಗಳ ಪಟ್ಟಿಯಲ್ಲಿ ಟಾಪ್ 3 ರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಟ್ಟಿಯ ಟಾಪ್ 3ರಲ್ಲಿ ಸ್ಥಾನ ಪಡೆದ ಇತರೆ ಇಬ್ಬರೆಂದರೆ ಜಗತ್ಪ್ರಸಿದ್ಧ ಫುಟ್ಬಾಲಿಗರಾದ ಲಿಯೊನೆಲ್ ಮೆಸ್ಸಿ ಮತ್ತು ಕ್ರಿಶ್ಚಿಯಾನೊ ರೊನಾಲ್ಡೊ.

ಇದನ್ನೂ ಓದಿ: ಇಂಥವರಿಂದಲೇ ಜಗತ್ತು ಸುಂದರವಾಗಿದೆ: ಫ್ರೆಂಡ್ ಜೀವ ಉಳಿಸಿದ ಟ್ರಾಫಿಕ್ ಪೊಲೀಸ್ ಗೆ ಸಚಿನ್ ಭಾವನಾತ್ಮಕ ಸಂದೇಶ

ಇದರ ಜೊತೆಗೆ ವಿಶ್ವದ ಜನಪ್ರಿಯ ಪುರುಷರ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದ್ದಾರೆ ಸಚಿನ್ ತೆಂಡುಲ್ಕರ್. 38 ದೇಶಗಳಲ್ಲಿ ಈ ಕುರಿತು ಸಮೀಕ್ಷೆ ಕೈಗೊಳ್ಳಲಾಗಿತ್ತು. ಸಮೀಕ್ಷೆಯಲ್ಲಿ ಸಚಿನ್ ಅವರು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬಾಲಿವುಡ್ ಸೂಪರ್ ಸ್ಟಾರ್ ಗಳಾದ ಅಮಿತಾಭ್ ಬಚ್ಚನ್, ಶಾರುಖ್ ಖಾನ್ ಅವರನ್ನು ಹಿಂದಿಕ್ಕಿದ್ದಾರೆ.

ಇದನ್ನೂ ಓದಿ: ಸಚಿನ್ ಪುತ್ರಿ ಸಾರಾ ತೆಂಡೊಲ್ಕರ್ ಮಾಡೆಲಿಂಗ್ ಲೋಕಕ್ಕೆ ಪ್ರವೇಶ; ವಿಡಿಯೋ

ಸಚಿನ್ ತೆಂಡುಲ್ಕರ್ ಅವರು ಯೂನಿಸೆಫ್ ಜೊತೆ ಗುರುತಿಸಿಕೊಂಡಿದ್ದು, ದಕ್ಷಿಣ ಏಷ್ಯಾ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದು ವಿಶೇಷ.

ಇದನ್ನೂ ಓದಿ: ಕೊಹ್ಲಿಗೆ ಸಚಿನ್ ಸಹಾಯ ಪಡೆದುಕೊಳ್ಳಿ ಎಂದಿದ್ದೇಕೆ ಸುನಿಲ್ ಗವಾಸ್ಕರ್?



Read more…