Karnataka news paper

ಮಾಧ್ಯಮ ಹಕ್ಕು ಹರಾಜು: ಕ್ರೀಡಾ ಬ್ರಾಡ್‌ಕಾಸ್ಟಿಂಗ್‌ಗೆ ಮುಖೇಶ್‌ ಅಂಬಾನಿ ಪ್ರವೇಶ?


ಹೈಲೈಟ್ಸ್‌:

  • ಐಸಿಸಿ ಮಾಧ್ಯಮ ಹಕ್ಕುಗಳ ಹರಾಜು ಪ್ರಕ್ರಿಯೆ ನಡೆಸಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ನಿರ್ಧರಿಸಿದೆ.
  • ಐಪಿಎಲ್‌ ಟೂರ್ನಿಯ ಪ್ರಸಾರದ ಹಕ್ಕುಗಳ ಹರಾಜು ನಡೆದ ಬಳಿಕ ಐಸಿಸಿ ತನ್ನ ಹರಾಜು ಪ್ರಕ್ರಿಯೆ ನಡೆಸಲಿದೆ.
  • ಈ ಬಾರಿ ಐಸಿಸಿ ಮಾಧ್ಯಮ ಹಕ್ಕುಗಳ ಹರಾಜು ಪ್ರಕ್ರಿಯೆಯಲ್ಲಿ ಮುಖೇಶ್‌ ಅಂಬಾನಿ ಭಾಗವಹಿಸಬಹುದು.

ಹೊಸದಿಲ್ಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌(ಐಸಿಸಿ) ಇದೀಗ ಭಾರತ ಉಪಖಂಡದಲ್ಲಿನ ತಮ್ಮ ಪ್ರಾಯೋಜಕತ್ವದ ಕಾರ್ಯಕ್ರಮಗಳಿಗೆ ಪ್ರತ್ಯೇಕ ಮಾಧ್ಯಮ ಹಕ್ಕುಗಳ ಹರಾಜಿಗೆ ನಿರ್ಧರಿಸಿದೆ ಎಂದು ಜಾಗತಿಕ ಕ್ರಿಕೆಟ್‌ ಮಂಡಳಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಶ್ವದಲ್ಲಿಯೇ ಅತಿ ದೊಡ್ಡ ಮಾರುಕಟ್ಟೆಯನ್ನು ಭಾರತ ಹೊಂದಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಹೆಚ್ಚಿನ ಮೌಲ್ಯವನ್ನು ಗಳಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಭಾರತವನ್ನು ಇತರೆ ಭಾಗಗಳೊಂದಿಗೆ ಸಂಯೋಜನೆ ಮಾಡದೆ ಪ್ರತ್ಯೇಕವಾಗಿ ಉಳಿಸಿಕೊಳ್ಳುವುದು ಐಸಿಸಿಯ ಯೋಜನೆಯಾಗಿದೆ ಎಂಬುದನ್ನೂ ಅವರು ಮಾಹಿತಿ ನೀಡಿದ್ದಾರೆ.

ಕ್ರಿಕೆಟ್‌ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ಭಾರತ, ಶ್ರೀಲಂಕಾ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಮುಂತಾದ ರಾಷ್ಟ್ರಗಳಲ್ಲಿ ಜಾಗತಿಕ ಕ್ರೀಡಾ ಪ್ರಸಾರದಿಂದ ಹೆಚ್ಚಿನ ರೆವಿನ್ಯೂ ದೊರಕಲಿದೆ. ಅದರಲ್ಲಿಯೂ ಭಾರತದಿಂದ ಹೆಚ್ಚಿನ ಪ್ರಸಾರದ ಲಾಭವನ್ನು ಪಡೆಯಬಹುದು.

‘ಕೊಹ್ಲಿಯ ಗುಣಮಟ್ಟದ ಬ್ಯಾಟಿಂಗ್‌ ತಂಡಕ್ಕೆ ಅತ್ಯಗತ್ಯ’: ಕ್ಯಾಪ್ಟನ್‌ ರೋಹಿತ್‌!

ಈ ಹಿಂದೆ ಭಾರತೀಯ ಉಪಖಂಡದಲ್ಲಿ ಕ್ರಿಕೆಟ್‌ ಪ್ರಸಾರದ ಹಕ್ಕುಗಳ ಹರಾಜಿನಲ್ಲಿ ಸ್ಟಾರ್‌ ಎನ್‌ಎಸ್‌ಇ ಮತ್ತು ಡಿಸ್ನಿ ಇಂಡಿಯಾ ಹಾಗೂ ಸೋನಿ ಪಿಕ್ಚರ್ಸ್‌ ನಡುವೆ ತೀವ್ರ ಪೈಪೋಟಿ ಇರುತ್ತಿತ್ತು. ಆದರೆ, ಈ ಬಾರಿ ಏಷ್ಯಾದ ಶ್ರೀಮಂತ ಮುಖೇಶ್‌ ಅಂಬಾನಿ ಕ್ರಿಕೆಟ್‌ ಪ್ರಸಾರದ ಹಕ್ಕುಗಳನ್ನು ಪಡೆಯಲು ಹರಾಜಿಗೆ ಬರುವ ಸಾಧ್ಯತೆ ಇದೆ ಎಂದು ಐಸಿಸಿ ನಿರೀಕ್ಷಿಸುತ್ತಿದೆ.

ಮುಂದಿನ ವರ್ಷದ ಆರಂಭದಲ್ಲಿ ಐಸಿಸಿ ಹರಾಜು ಪ್ರಕ್ರಿಯೆ ಆರಂಭವಾಗಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. “2024 ರಿಂದ ಪ್ರಾರಂಭವಾಗುವ ಮುಂದಿನ ಹಕ್ಕುಗಳ ಋತುವಿಗಾಗಿ ಪ್ರಸಾರ ಮತ್ತು ಡಿಜಿಟಲ್ ಭಾರತದ ಹಕ್ಕುಗಳನ್ನು ರೂಪಿಸಲು ಐಸಿಸಿ ನಿರ್ಧರಿಸಿದೆ. ಭಾರತೀಯ ಕ್ರಿಕೆಟ್ ಮಂಡಳಿಯು(ಬಿಸಿಸಿಐ) ಐಪಿಎಲ್‌ ಎನ್‌ಎಸ್‌ಇ 1.24 % ಮಾಧ್ಯಮ ಹಕ್ಕುಗಳಿಗಾಗಿ ಹರಾಜು ಪೂರ್ಣಗೊಳಿಸಿದ ನಂತರ ಈ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ” ಎಂದು ಐಸಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಓಡಿಐ ನಾಯಕತ್ವದಿಂದ ಕೊಹ್ಲಿಯನ್ನು ಕೆಳಗಿಳಿಸಲು ಕಾರಣ ತಿಳಿಸಿದ ಗಂಗೂಲಿ!

ಐಸಿಸಿ ಎಂಟು ವರ್ಷಗಳ ಬದಲಿಗೆ ನಾಲ್ಕು ವರ್ಷಗಳವರೆಗೆ ಮಾಧ್ಯಮ ಹಕ್ಕುಗಳ ಮಾರಾಟ ಮಾಡುವ ಆಲೋಚನೆಯಲ್ಲಿದೆ ಎಂದು ಕಳೆದ ತಿಂಗಳು ಎಕನಾಮಿಕ್ಸ್‌ ಟೈಮ್ಸ್‌ ಮೊದಲ ಬಾರಿ ವರದಿ ಮಾಡಿತ್ತು. “ಮಾಧ್ಯಮ ಪ್ರಸಾರ ಹಕ್ಕುಗಳ ಹರಾಜು ಪ್ರಕ್ರಿಯೆ ಪಾರದರ್ಶಕವಾಗಿರಲಿದೆ ಮತ್ತು ಈ ನಿಟ್ಟಿನಲ್ಲಿ ಅಂತಿಮ ಹಂತದಲ್ಲಿ ಕೆಲಸ ಮಾಡಲಾಗುತ್ತಿದೆ,”ಎಂದು ಅವರು ಮಾಹಿತಿ ನೀಡಿದ್ದಾರೆ.

ಇದಕ್ಕೂ ಮುನ್ನ ಐಸಿಸಿ ತನ್ನ ಮಾಧ್ಯಮ ಹಕ್ಕುಗಳೊಂದಿಗೆ ನವೆಂಬರ್‌ನಲ್ಲಿ ಮಾರುಕಟ್ಟೆಗೆ ಇಳಿಯಲು ಬಯಸಿತ್ತು, ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯು ತನ್ನ ಅತಿದೊಡ್ಡ ಆಸ್ತಿಯಾದ ಮಾಧ್ಯಮ ಹಕ್ಕುಗಳನ್ನು ಹರಾಜು ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಐಸಿಸಿ ತನ್ನ ಯೋಜನೆಯನ್ನು ಬದಲಾಯಿಸಿಕೊಂಡಿದೆ. ಈ ವರ್ಷಾಂತ್ಯದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಪ್ರಸಾರದ ಹಕ್ಕುಗಳ ಹರಾಜು ಪ್ರಕ್ರಿಯೆ ನಡೆಯಲಿದೆ.

ಭಾರತ ಓಡಿಐ ತಂಡಕ್ಕೆ ರೋಹಿತ್ ನಾಯಕನಾಗಲು 3 ಬಲವಾದ ಕಾರಣಗಳಿವು!

“ನಾವು ಬಿಸಿಸಿಐ ಅಥವಾ ಐಪಿಎಲ್ ಜೊತೆ ಹೋರಾಡುತ್ತಿಲ್ಲ. ಬಿಸಿಸಿಐಗೆ ಐಪಿಎಲ್ ಅತಿದೊಡ್ಡ ಆಸ್ತಿ ಎಂದು ನಮಗೆ ತಿಳಿದಿದೆ. ಒಮ್ಮೆ ಐಪಿಎಲ್‌ ಪ್ರಸಾರದ ಹಕ್ಕುಗಳ ಹರಾಜು ಮುಗಿದ ಬಳಿಕ ಸೋತವರು ಮೂರು ಅಥವಾ ನಾಲ್ಕು ಮಂದಿ ಇದ್ದೇ ಇರುತ್ತಾರೆ. ಅವರು ಐಸಿಸಿ ಪ್ರಸಾರದ ಹಕ್ಕುಗಳಿಗಾಗಿ ಆಕ್ರಮಣಕಾರಿಯಾಗಿ ಬಿಡ್ ಸಲ್ಲಿಸುತ್ತಾರೆ,” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಟಾರ್ ಮತ್ತು ಡಿಸ್ನಿ, ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ವಯಾಕಾಮ್ 18 ನಡುವೆ ಐಸಿಸಿ ಪ್ರಸಾರದ ಹಕ್ಕುಗಳಿಗಾಗಿ ತೀವ್ರ ಪೈಪೋಟಿ ನಡೆಯಲಿದೆ ಎಂದು ಇದೇ ವೇಳೆ ಅವರು ಸುಳಿವು ನೀಡಿದ್ದಾರೆ. ಇದರ ಜೊತೆಗೆ ಅಮೆಜಾನ್‌ ಕೂಡ ಪ್ರಸಾರದ ಹಕ್ಕುಗಳ ಹರಾಜಿನಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

ಹೆಡ್‌ ಕೋಚ್‌ ದ್ರಾವಿಡ್‌ರ ಕಾರ್ಯವೈಖರಿ ಬಗ್ಗೆ ಪ್ರತಿಕ್ರಿಯಿಸಿದ ರೋಹಿತ್‌!



Read more