Karnataka news paper

ಅಘೋಷಿತ ಕೆಪಿಸಿಸಿ ಅಧ್ಯಕ್ಷೆ ಮೆಚ್ಚಿಸಲು ಸಹೋದರನಿಗೆ ಟಿಕೆಟ್‌: ಎಸ್‌.ಆರ್‌. ಪಾಟೀಲರ ಸಾತ್ವಿಕ ಸಿಟ್ಟು ನಿಮ್ಮನ್ನು ಬಿಡುವುದೇ?


Source : Online Desk

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹೋದರನಿಗೆ ಟಿಕೆಟ್ ನೀಡಿರುವ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ಹರಿಹಾಯ್ದಿದೆ.

ಈ  ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಡಿ.ಕೆ. ಶಿವಕುಮಾರ್‌ ಅವರೇ, ಎಸ್‌. ಆರ್‌. ಪಾಟೀಲರ ಸಾತ್ವಿಕ ಸಿಟ್ಟು ನಿಮ್ಮನ್ನು ಬಿಡುವುದೇ?  ಪಾಟೀಲರ ಮೌನ ನಿಮಗೆ ಶಾಪವಾಗಿ ಪರಿಣಮಿಸುವುದರಲ್ಲಿ ಅನುಮಾನವಿದೆಯೇ? ಯಾರನ್ನು ಮೆಚ್ಚಿಸಲು ಒಬ್ಬ ಹಿರಿಯ ನಾಯಕನನ್ನು ರಾಜಕೀಯ ಸಂಧ್ಯಾಕಾಲದಲ್ಲಿ ಅತಂತ್ರವಾಗಿ ಮಾಡಿದಿರಿ? ಎಂದು ಪ್ರಶ್ನಿಸಿದೆ.

ಹಿರಿಯ ನಾಯಕ ಬಿಎಸ್‌ ಯಡಿಯೂರಪ್ಪ ಅವರಿಗೆ ಬಿಜೆಪಿ ಕಣ್ಣೀರು ಬರಿಸಿದೆ ಎಂದು ಸುಳ್ಳು ಆರೋಪ ಮಾಡುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  ಅವರೇ, ಅಘೋಷಿತ ಕೆಪಿಸಿಸಿ ಅಧ್ಯಕ್ಷೆಯನ್ನು ಮೆಚ್ಚಿಸಲು ಆಕೆಯ ಸಹೋದರನಿಗೆ ಪರಿಷತ್ ಟಿಕೆಟ್‌ ನೀಡಿ ಕಾಂಗ್ರೆಸ್ ನ  ಪಕ್ಷದ ಹಿರಿಯ ನಾಯಕ ಎಸ್‌. ಆರ್.‌ ಪಾಟೀಲ್‌ ಅವರಲ್ಲಿ ಮೌನ ಕಣ್ಣೀರು ತರಿಸಿದ್ದು ಯಾರು? ಎಂದು ಬಿಜೆಪಿ ಲೇವಡಿ ಮಾಡಿದೆ.





Read more