ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾ ಭಾಟಿಯಾ ಅವರು ಇಂದು (ಡಿ.21) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
31ನೇ ವರ್ಷಕ್ಕೆ ಕಾಲಿರಿಸುತ್ತಿರುವ ತಮನ್ನಾಗೆ ಸ್ನೇಹಿತರು, ಆತ್ಮೀಯರು, ಸಿನಿಮಾರಂಗದ ಗಣ್ಯರು, ತಂತ್ರಜ್ಞರು, ಅಭಿಮಾನಿಗಳು ಶುಭ ಹಾರೈಸಿದ್ದಾರೆ.
Happy happy birthday dear @tamannaahspeaks
Hope you find all the happiness and success this year! Wishing you only the best! 🥳♥️ pic.twitter.com/8rvnr1hIvB— Venkatesh Daggubati (@VenkyMama) December 21, 2021
‘ನಿನ್ನ ಭವಿಷ್ಯ ಉಜ್ವಲವಾಗಿರಲಿ’ ಎಂದು ನಟಿ ಸಮಂತ ಶುಭ ಕೋರಿದ್ದಾರೆ. ನಟ ವೆಂಕಟೇಶ್ ಕೂಡ ಶುಭಾಶಯ ಕೋರಿದ್ದು ನಿನಗೆ ಸಂತೋಷ ಮತ್ತು ಯಶಸ್ಸು ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ. ನಟಿ ಕಾಜಲ್, ನಟ ಗೋಪಿಚಂದ್ ಸಹ ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ.
ಓದಿ: ಬಾಳೆ ಎಲೆಯಲ್ಲಿ ತಿನ್ನುವಾಗ ನಾನು ದೇವತೆ ಅನ್ನಿಸುತ್ತದೆ: ತಮನ್ನಾ ಭಾಟಿಯಾ
ತಮನ್ನಾ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಬೇಡಿಕೆ ನಟಿಯಾಗಿದ್ದಾರೆ.