ಬೆಂಗಳೂರು: ಚಿಕ್ಕವಳಿದ್ದಾಗ ನನ್ನನ್ನು ನೋಡಿದ ಹಲವರು ನಾನು ತುಂಬಾ ತೆಳ್ಳಗಿದ್ದೇನೆ ಎಂದು ಸದಾ ಹೀಯಾಳಿಸುತ್ತಿದ್ದರು ಎಂದು ತಮಗಾಗಿದ್ದ ಕಹಿ ಅನುಭವವನ್ನು ನಟಿ ಅತಿಯಾ ಶೆಟ್ಟಿ ಬಿಚ್ಚಿಟ್ಟಿದ್ದಾರೆ.
ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಅತಿಯಾ, ಜನರ ಮನಸ್ಥಿತಿ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.
ಒಬ್ಬರು ದಪ್ಪಗಿದ್ದಾರೆ ಅಥವಾ ತೆಳ್ಳಗಿದ್ದಾರೆ ಎಂದ ಮಾತ್ರಕ್ಕೆ ಅವರ ಬಗ್ಗೆ ಮಾತನಾಡಬೇಕಿಲ್ಲ. ಒಬ್ಬರ ದೇಹತೂಕ, ಆಕಾರದ ಬಗ್ಗೆ ಕಾಮೆಂಟ್ ಮಾಡುವುದರಿಂದ ಅವರ ಆತ್ಮವಿಶ್ವಾಸ ಕುಗ್ಗುತ್ತದೆ ಎನ್ನುವುದನ್ನು ಜನರು ಅರಿತುಕೊಳ್ಳಬೇಕು ಎಂದು ಅತಿಯಾ ಹೇಳಿದ್ದಾರೆ.
ಹಸಿರು ಉದ್ಯಾನದಲ್ಲಿ ಹೂವಿನಂತೆ ಕಾಣಿಸಿಕೊಂಡ ಮೌನಿ ರಾಯ್
ಒಬ್ಬರ ಪರಿಸ್ಥಿತಿ ಹೇಗಿರುತ್ತದೆ ಮತ್ತು ಅವರು ಯಾವ ಸಂದರ್ಭವನ್ನು ಎದುರಿಸುತ್ತಿದ್ದಾರೆ ಎನ್ನುವುದು ನಮಗೆ ತಿಳಿದಿರುವುದಿಲ್ಲ. ಎಲ್ಲರಂತೆ ಬದುಕಲು ಅವರು ಬಯಸುತ್ತಾರೆ. ಹಾಗಿರುವಾಗ ಅವರ ಜೀವನ ಕುರಿತು ಯಾವತ್ತೂ ಟೀಕೆ ಮಾಡುವ ಕೆಲಸ ಮಾಡಬಾರದು. ಅವರಿಗೆ ಆತ್ಮವಿಶ್ವಾಸ ತುಂಬುವ ಮಾತುಗಳನ್ನಾಡಬೇಕು ಎಂದು ಅತಿಯಾ ಸುದ್ದಿ ಸಂಸ್ಥೆ ‘ಎಎನ್‌ಐ‘ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಬಾಳೆ ಎಲೆಯಲ್ಲಿ ತಿನ್ನುವಾಗ ನಾನು ದೇವತೆ ಅನ್ನಿಸುತ್ತದೆ: ತಮನ್ನಾ ಭಾಟಿಯಾ