Karnataka news paper

ಬೆಂಗಳೂರಿಗೆ ಎಂಟ್ರಿ ಕೊಟ್ಟ ಫಿಪೋಲಾ ಮಾಂಸ ಮಾರಾಟ ಸಂಸ್ಥೆ


News

By Muralidhar V

|

ಬೆಂಗಳೂರು, ಡಿ. 21: ದಕ್ಷಿಣ ಭಾರತದಲ್ಲಿ ಖ್ಯಾತಿ ಪಡೆದಿರುವ ಫಿಪೋಲಾ ಚಿಕನ್- ಮಟನ್ ಮಾರಾಟ ಮಳಿಗೆಗಳು ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿವೆ. ಬೆಂಗಳೂರಿನಲ್ಲಿ ಇದೇ ಪ್ರಥಮ ಬಾರಿಗೆ ಏಕ ಕಾಲಕ್ಕೆ 26 ಮಳಿಗೆ ತೆರೆಯುವುದಾಗಿ ಫಿಪೋಲಾ ಘೋಷಣೆ ಮಾಡಿದೆ.

ಕರ್ನಾಟಕ, ತಮಿಳುನಾಡು ತೆಲಂಗಾಣ ಸೇರಿದಂತೆ ದಕ್ಷಿಣ ರಾಜ್ಯಗಳಲ್ಲಿ ಈವರೆಗೂ 48 ಮಳಿಗೆಗಳನ್ನು ಹೊಂದಿರುವ ಫಿಪೋಲಾ ಇದೀಗ ಬೆಂಗಳೂರಿನಲ್ಲಿ ಏಕ ಕಾಲಕ್ಕೆ 26 ಮಳಿಗೆ ಸ್ಥಾಪಿಸಲು ಮುಂದಾಗಿದೆ. ಇದನ್ನು ಸಂಸ್ಥೆಯ ಮುಖ್ಯಸ್ಥ ಸುಶೀಲ್ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.

ಕುರಿ ಮಾಂಸ, ಕೋಳಿ ಮಾಂಸ ಹಾಗೂ ಮೀನು ಪೂರೈಕೆ ಮಾಡುವ ಫಿಪೋಲಾ 2022 ಮಾರ್ಚ್ ವೇಳೆಗೆ 100 ರಿಟೇಲ್ ಮಳಿಗೆ ಸ್ಥಾಪಿಸುವ ಗುರಿ ಹೊಂದಿದೆ. ಫಿಪೋಲಾ ಅಪ್ಲಿಕೇಷನ್ ಅಥವಾ ವೆಬ್ ತಾಣದ ಮೂಲಕ ಗ್ರಾಹಕರು ಮನೆಗೆ ನೇರವಾಗಿ ಉತ್ಪನ್ನಗಳನ್ನು ಮನೆ ಬಾಗಿಲಿಗೆ ತರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. 2021-22 ರ ವೇಳೆಗೆ 140 ಕೋಟಿ ರೂ. ವಹಿವಾಟು ಗುರಿ ಹೊಂದಿರುವ ಫಿಪೋಲಾ 2023-24 ನೇ ಸಾಲಿನ ವೇಳೆಗೆ 428 ಕೋಟಿ ರೂ. ವಹಿವಾಟು ನಡೆಸುವ ಉದ್ದೇಶ ಹೊಂದಿದೆ ಎಂದು ಇದೇ ವೇಳೆ ಅವರು ತಿಳಿಸಿದರು.

ಬೆಂಗಳೂರಿನಲ್ಲಿ ಏಕ ಕಾಲಕ್ಕೆ 26 ಫಿಪೋಲಾ ಮಾಂಸ ಮಳಿಗೆ ಆರಂಭ

ತಾಜಾ ಉತ್ಪನ್ನ ಪೂರೈಕೆ ಮಾಡುವ ಮೂಲಕ ಹೆಸರುವಾಸಿಯಾಗಿರುವ ಫಿಪೋಲಾ ಈಗಾಗಲೇ ಹಲವು ಮಳಿಗೆಗಳನ್ನು ಬೆಂಗಳೂರಿನಲ್ಲಿ ಹೊಂದಿದೆ. 2021 ಮಾರ್ಚ್ ವೇಳೆಗೆ 26 ಮಳಿಗೆಗಳನ್ನು ಆರಂಭಿಸಲಾಗುತ್ತಿದೆ. ಎಚ್‌ಎಸ್‌ಆರ್ ಲೇಔಟ್, ಎಇಸಿಎಸ್ ಲೇಔಟ್, ಬನಶಂಕರಿ, ವೈಟ್‌ಫೀಲ್ಡ್ ಬಳಿಯ ವರ್ತೂರು ರಸ್ತೆ, ಬಿಟಿಎಂ ಲೇಔಟ್, ಇಂದಿರಾನಗರ, ಕೆ.ಆರ್. ಪುರಂ, ಯಲಹಂಕ, ಎಲೆಕ್ಟ್ರಾನಿಕ್ ಸಿಟಿ, ಜೆ.ಪಿ. ನಗರ, ಯಶವಂತಪುರ, ಆರ್.ಟಿ. ನಗರ, ಫ್ರೇಜರ್ ಟೌನ್, ಕಾಮನಹಳ್ಳಿ, ಹೆಣ್ಣೂರು ಮುಖ್ಯರಸ್ತೆ, ರಾಮಮೂರ್ತಿ ನಗರ, ಕಗ್ಗದಾಸಪುರ, ಜಯನಗರ, ಬನ್ನೇರುಘಟ್ಟ, ಕೋರಮಂಗಲ, ಸರ್ಜಾಪುರ ರಸ್ತೆ, ಚಂದ್ರಾ ಲೇಔಟ್ ಮತ್ತು ಆರ್.ಆರ್. ನಗರದಲ್ಲಿ ಹೊಸ ರೀಟೇಲ್ ವಿತರಣಾ ಮಳಿಗೆ ಅನಾವರಣಗೊಳಿಸಲಾಗಿದೆ ಎಂದು ಇಲ್ಲೆಲ್ಲ ಹೊಸ ರೀಟೇಲ್ ಮತ್ತು ವಿತರಣ ಮಳಿಗೆಗಳನ್ನು ಅನಾವರಣಗೊಳಿಸಿದೆ. ಜನವರಿ ವೇಳೆಗೆ 26 ಮಳಿಗೆ ಆರಂಭಿಸುತ್ತೇವೆ ಎಂದು ಫಿಪೋಲಾ ಸಿಒಒ ಸಂಜಯ್ ದಾಸ್ ಗುಪ್ತಾ ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಏಕ ಕಾಲಕ್ಕೆ 26 ಫಿಪೋಲಾ ಮಾಂಸ ಮಳಿಗೆ ಆರಂಭ

ಮುಕ್ತ ಶ್ರೇಣಿಯ ಕೋಳಿ, ಕುರಿ, ಮೇಕೆ ಮಾಂಸ ಮತ್ತು ಸಮುದ್ರ ಆಹಾರ ಉತ್ಪನ್ನ ಮಾರಾಟ ಮಾಡಲಾಗುತ್ತದೆ. ಆಧುನಿಕ ಹವಾನಿಯಂತ್ರಿತ ಮತ್ತು ದುರ್ವಾಸನೆ ಮುಕ್ತ ಮಾಂಸದ ಶಾಪಿಂಗ್ ಅನುಭವ ನೀಡಲಾಗಿದೆ. ಫಿಪೊಲಾ ಮೊಬೈಲ್ ಆಪ್ ಮೂಲಕವೂ ಮನೆಗೆ ತರಿಸಿಕೊಳ್ಳಬಹುದು. ಇನ್ನೂ ಹೈದರಾಬಾದ್ ಬೆಂಗಳೂರಿನಲ್ಲಿ ಸಂಚಾರಿ ಘಟಕದ ವಾಹನಗಳ ಮೂಲಕ ಕಾರ್ಯ ನಿರ್ವಹಣೆ ಮಾಡುತ್ತಿವೆ. ಮುಂದಿನ ದಿನಗಳಲ್ಲಿ ಭಾರತದಾದ್ಯಂತ ಫಿಪೋಲಾ ಮಳಿಗೆ ವಿಸ್ತರಣೆ ಮಾಡಲಾಗುತ್ತಿದೆ ಎಂದು ಇದೇ ವೇಳೆ ತಿಳಿಸಿದರು.

ಬೆಂಗಳೂರಿನಲ್ಲಿ ಏಕ ಕಾಲಕ್ಕೆ 26 ಫಿಪೋಲಾ ಮಾಂಸ ಮಳಿಗೆ ಆರಂಭ

ಒಂದೇ ಕಡೆ 500 ಮಾದರಿ ಮಾಂಸಾಹಾರಿ ಉತ್ಪನ್ನ ಲಭ್ಯವಾಗಲಿವೆ. ದುರ್ಗಂದ ರಹಿತ ವಿಶಾಲ ಮಳಿಗೆ ಹೊಂದಲಾಗಿದೆ. ಜನರ ಸಮಕ್ಷಮದಲ್ಲಿಯೇ ಮಾಂಸ ಮತ್ತು ಸಮುದ್ರ ಆಹಾರ ವಿತರಣೆ ಮಾಡಲಾಗುತ್ತದೆ. ರಾಸಾಯನಿಕ ಮತ್ತು ಕೀಟನಾಶಕ ಮುಕ್ತವಾಗಿ ನೀಡಲಾಗುತ್ತದೆ. ಉತ್ತಮ ದರ್ಜೆ ಪ್ರಯೋಗಾಲಯದಿಂದ ಪ್ರಮಾಣೀಕರಿಸಿ ಜನರಿಗೆ ಲಭ್ಯವಾಗುವ ದರದಲ್ಲಿ ಮಾಂಸದ ಉತ್ಪನ್ನ ಮಾರಾಟ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

English summary

Fipola Enters Karnataka with 26 stores across Bengaluru

Fipola Enters Karnataka with 26 stores across Bengaluru: Fipola 26 Meat Retail shops opens in Bengaluru

Story first published: Tuesday, December 21, 2021, 13:55 [IST]



Read more…