
ಟಕ್ಸ್‌ಟ್ಲಾ ಗುಟಿರೆಜ್ (ಮೆಕ್ಸಿಕೊ) (ಎಪಿ): ದಕ್ಷಿಣ ಮೆಕ್ಸಿಕೊದಲ್ಲಿ ಗುರುವಾರ ಹೆದ್ದಾರಿಯೊಂದರ ಪಾದಚಾರಿ ಸೇತುವೆಯೊಂದಕ್ಕೆ ಟ್ರಕ್ ಅಪ್ಪಳಿಸಿ, ಉರುಳಿದ ಪರಿಣಾಮ 53 ವಲಸಿಗರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ದುರಂತದಲ್ಲಿ 58 ಜನರು ಗಾಯ
ಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಚಿಂತಾ
ಜನಕ ಸ್ಥಿತಿಯಲ್ಲಿದ್ದಾರೆ.