Karnataka news paper

ಮುಂಬೈನಲ್ಲಿ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಡಿನ್ನರ್ ಡೇಟ್?


ಹೈಲೈಟ್ಸ್‌:

  • ಮತ್ತೆ ಒಟ್ಟಿಗೆ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ
  • ಬಾಂದ್ರಾದಲ್ಲಿ ಕ್ಯಾಮರಾ ಕಣ್ಣುಗಳಿಗೆ ಸೆರೆಸಿಕ್ಕ ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ
  • ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಬಗ್ಗೆ ಗುಸುಗುಸು

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ತೆಲುಗು ನಟ ವಿಜಯ್ ದೇವರಕೊಂಡ (Vijay Devarakonda) ಮಧ್ಯೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ಗುಸುಗುಸು ಇಂದು – ನಿನ್ನೆಯದ್ದಲ್ಲ. 2018 ರಲ್ಲಿ ‘ಗೀತ ಗೋವಿಂದಂ’ ಸಿನಿಮಾ ತೆರೆಕಂಡಾಗಿನಿಂದಲೂ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಮಧ್ಯೆ ‘ಏನೋ ಇದೆ’ ಎಂಬ ಮಾತುಗಳು ತೆಲುಗು ಸಿನಿ ಅಂಗಳದಲ್ಲಿ ಕೇಳಿಬರುತ್ತಲೇ ಇದೆ.

2017ರಲ್ಲಿ ನಟ ರಕ್ಷಿತ್ ಶೆಟ್ಟಿ (Rakshit Shetty) ಹಾಗೂ ನಟಿ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ವರ್ಷ ತುಂಬುವುದರೊಳಗೆ ನಟ ರಕ್ಷಿತ್ ಶೆಟ್ಟಿ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರ ಎಂಗೇಜ್‌ಮೆಂಟ್ ಮುರಿದುಬಿತ್ತು. ನಟ ರಕ್ಷಿತ್ ಶೆಟ್ಟಿ ಅವರಿಂದ ದೂರಾದ ಬಳಿಕ ರಶ್ಮಿಕಾ ಮಂದಣ್ಣ ಹೆಚ್ಚಾಗಿ ಕಾಣಿಸಿಕೊಂಡಿದ್ದು ನಟ ವಿಜಯ್ ದೇವರಕೊಂಡ ಜೊತೆಗೆ.

ಕಿರಿಯನೊಂದಿಗೆ ಡೇಟಿಂಗ್‌ ಮಾಡೋದು ಓಕೆ ಎಂದ ನಟಿ ರಶ್ಮಿಕಾ ಮಂದಣ್ಣ

ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ ಮಂದಣ್ಣ ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲೂ ನಟಿಸಿದ್ದರು. ಇದೀಗ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಯಾವ ಸಿನಿಮಾದಲ್ಲೂ ಒಟ್ಟಿಗೆ ನಟಿಸುತ್ತಿಲ್ಲ. ಆದರೂ, ಆಗಾಗ ಇಬ್ಬರೂ ಭೇಟಿಯಾಗುತ್ತಿರುವುದು ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗುತ್ತಿದೆ. ಮೊನ್ನೆಮೊನ್ನೆಯಷ್ಟೇ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡಿನ್ನರ್ ಡೇಟ್‌ಗೆ ಬಂದಿದ್ದಾಗಲೂ ಕ್ಯಾಮರಾ ಕಣ್ಣುಗಳಿಗೆ ಸಿಕ್ಕಿಬಿದ್ದಿದ್ದಾರೆ.

ಒಟ್ಟಿಗೆ ಜಿಮ್‌ನಲ್ಲಿ ಕಾಣಿಸಿಕೊಂಡ ರಶ್ಮಿಕಾ & ವಿಜಯ್ ದೇವರಕೊಂಡ; ವರ್ಕೌಟ್ ಫೋಟೋ ವೈರಲ್

ಇತ್ತೀಚೆಗಷ್ಟೇ ಮುಂಬೈನ ಬಾಂದ್ರಾದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮೀಟ್ ಆಗಿರುವುದನ್ನು ಕ್ಯಾಮರಾ ಕಣ್ಣುಗಳು ಸೆರೆ ಹಿಡಿದಿವೆ. ಕಪ್ಪು ಬಣ್ಣದ ಸೆಮಿ ಫಾರ್ಮಲ್ ಲುಕ್‌ನಲ್ಲಿ ನಟಿ ರಶ್ಮಿಕಾ ಮಂದಣ್ಣ ಇದ್ದರೆ, ನಟ ವಿಜಯ್ ದೇವರಕೊಂಡ ಟೈಗರ್ ಪ್ರಿಂಟ್ ಶರ್ಟ್ ಧರಿಸಿದ್ದರು.

ತಮ್ಮ ಸಿನಿಮಾದ ಬಗ್ಗೆ ಹಬ್ಬಿದ್ದ ವದಂತಿಗೆ ತಮ್ಮದೇ ಸ್ಟೈಲ್‌ನಲ್ಲಿ ಸ್ಪಷ್ಟನೆ ಕೊಟ್ಟ ವಿಜಯ್ ದೇವರಕೊಂಡ!

ಈ ಹಿಂದೆ ಮುಂಬೈನಲ್ಲೇ ಜಿಮ್‌ವೊಂದರಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈಗ ಮತ್ತೆ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿರುವುದು ಗಾಸಿಪ್‌ಗಳಿಗೆ ಕಾರಣವಾಗಿದೆ. ಆದರೆ, ಅದ್ಯಾವುದರ ಬಗ್ಗೆಯೂ ರಶ್ಮಿಕಾ ಮಂದಣ್ಣ ಆಗಲಿ, ವಿಜಯ್ ದೇವರಕೊಂಡ ಆಗಲಿ ತಲೆ ಕೆಡಿಸಿಕೊಂಡಿಲ್ಲ. ಗಾಸಿಪ್‌ಗಳಿಗೆ ಸ್ಪಷ್ಟನೆ ನೀಡಲು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮುಂದಾಗಿಲ್ಲ.

ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡ್ರು ವಿಜಯ್ ದೇವರಕೊಂಡ & ರಶ್ಮಿಕಾ ಮಂದಣ್ಣ! ಈ ಭೇಟಿಗೆ ಕಾರಣವೇನು?

ಅಂದ್ಹಾಗೆ, ಅಲ್ಲು ಅರ್ಜುನ್ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ- ದಿ ರೈಸ್’ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಬಾಲಿವುಡ್‌ನಲ್ಲಿ ‘ಮಿಷನ್ ಮಜ್ನು’ ಹಾಗೂ ‘ಗುಡ್ ಬೈ’ ಚಿತ್ರಗಳಲ್ಲಿ ನಟಿ ರಶ್ಮಿಕಾ ಮಂದಣ್ಣ ಬಿಜಿಯಾಗಿದ್ದಾರೆ. ಇನ್ನೂ, ನಟ ವಿಜಯ್ ದೇವರಕೊಂಡ ‘ಲೈಗರ್’ ಸಿನಿಮಾದಲ್ಲಿ ತೊಡಗಿದ್ದಾರೆ.



Read more