Karnataka news paper

ನಟಿ ಹೇಮಾ ಮಾಲಿನಿ ಕೆನ್ನೆಯನ್ನು ರಸ್ತೆಗೆ ಹೋಲಿಸಿದ ಮಂತ್ರಿ; ಕೋಪ ಹೊರಹಾಕಿದ ‘ಡ್ರೀಮ್ ಗರ್ಲ್’


ಹೈಲೈಟ್ಸ್‌:

  • ಸ್ವಕ್ಷೇತ್ರದ ರಸ್ತೆಗಳನ್ನು ಹೇಮಾ ಮಾಲಿನಿ ಕೆನ್ನೆಗೆ ಹೋಲಿಸಿದ ಮಂತ್ರಿ
  • ಮಂತ್ರಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಹೇಮಾ ಮಾಲಿನಿ
  • ಕೊನೆಗೂ ಹೇಳಿಕೆ ಬಗ್ಗೆ ಕ್ಷಮೆ ಕೇಳಿದ ಗುಲಾಬ್‌ರಾವ್ ಪಾಟೀಲ್

ನಟಿ, ಮಥುರಾ ಕ್ಷೇತ್ರದ ಸಂಸದೆ ಹೇಮಾ ಮಾಲಿನಿ ಅವರ ಕೆನ್ನೆಯನ್ನು ರಸ್ತೆಗೆ ಹೋಲಿಸಲಾಗುತ್ತಿದೆ. ಈ ಮಾತನ್ನು ಜನಸಾಮಾನ್ಯರು ಆಡಿಲ್ಲ, ಬದಲಾಗಿ ಮಹಾರಾಷ್ಟ್ರದ ನೀರು ಸರಬರಾಜು ಮತ್ತು ನೈರ್ಮಲ್ಯ ಖಾತೆ ಸಚಿವ ಗುಲಾಬ್‌ರಾವ್ ಪಾಟಿಲ್‌ ಈ ಮಾತು ಹೇಳಿರೋದು ನಟಿ ಹೇಮಾ ಮಾಲಿನಿಗೆ ಸಿಕ್ಕಾಪಟ್ಟೆ ಕೋಪ ತರಿಸಿದೆ. ಈ ಬಗ್ಗೆ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ಕೂಡ ನೀಡಿದ್ದಾರೆ.

ಗುಲಾಬ್‌ರಾವ್ ಪಾಟೀಲ್ ( gulabrao patil ) ಹೇಳಿದ್ದೇನು?

ಗುಲಾಬ್‌ರಾವ್ ಪಾಟೀಲ್ ಅವರು ‘ನನ್ನ ಸ್ವಕ್ಷೇತ್ರದ ರಸ್ತೆಗಳು ಹೇಮಾ ಮಾಲಿನಿ ಕೆನ್ನೆ ರೀತಿ ನುಣುಪಾಗಿವೆ’ ಎಂದು ರಾಜಕೀಯ ಸಮಾವೇಶದಲ್ಲಿ ಹೇಳಿಕೆ ನೀಡಿದ್ದರು. ಈ ಮಾತು ವಿವಾದದ ರೂಪ ಪಡೆದುಕೊಂಡಿತ್ತು, ಆನಂತರ ಕ್ಷಮೆಯಾಚಿಸಿ ‘ನನಗೆ ಯಾರ ಭಾವನೆಗೂ ಧಕ್ಕೆ ತರುವ ಉದ್ದೇಶವಿಲ್ಲ, ನೋಯಿಸುವ ಉದ್ದೇಶವೂ ಇರಲಿಲ್ಲ, ನನ್ನ ಹೇಳಿಕೆಗೆ ಕ್ಷಮೆ ಕೇಳುವೆ. ನಾನು ಛತ್ರಪತಿ ಶಿವಾಜಿ ಮಹಾರಾಜರನ್ನು ಆರಾಧಿಸುವ ಶಿವಸೇನೆಗೆ ಸೇರಿದವನು. ಮಹಿಳೆಯನ್ನು ಗೌರವಿಸಬೇಕು ಎಂದು ಪಕ್ಷದ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ನಮಗೆ ಕಲಿಸಿದ್ದಾರೆ’ ಎಂದಿದ್ದರು.

ಮೊದಲ ಪತ್ನಿ ಬಿಟ್ಟು, ಹೇಮಾ ಮಾಲಿನಿ ಮದುವೆಯಾಗಲು ಇಸ್ಲಾಂಗೆ ಮತಾಂತರ ಆಗಿದ್ರಾ ಧರ್ಮೇಂದ್ರ?

ಹೇಮಾ ಮಾಲಿನಿ ಪ್ರತಿಕ್ರಿಯೆ ಏನು?
“ನನ್ನ ಕೆನ್ನೆಯನ್ನು ನಾನೀಗ ಸರಿಯಾಗಿ ಇಟ್ಟುಕೊಳ್ಳಬೇಕು ಎಂದು ಜೋಕ್ ಮಾಡಿರುವ ಹೇಮಾ ಮಾಲಿನಿ ಅವರು, ಈ ರೀತಿ ಹೇಳಿಕೆಯನ್ನು ವರ್ಷಗಳ ಹಿಂದೆ ಲಾಲೂಜಿ ನೀಡಿದ್ದರು. ಆಮೇಲೆ ಅನೇಕರು ಈ ಟ್ರೆಂಡ್ ಅನುಸರಿಸಿದರು. ಈ ರೀತಿ ಮಾತನಾಡೋದು ಉಚಿತವಲ್ಲ. ಯಾರೂ ಕೂಡ ಈ ರೀತಿ ಹೇಳಬಾರದು. ಸಾಮಾನ್ಯ ಜನರು ಈ ರೀತಿ ಮಾತನಾಡಿದ್ರೆ ಸಹಿಸಲಾಗೋದಿಲ್ಲ. ಹೀಗಿರುವಾಗ ಮಂತ್ರಿಯೊಬ್ಬರು ಅಥವಾ ಯಾರಾದರೂ ಕ್ಷೇತ್ರಕ್ಕೆ ಸಂಪರ್ಕ ಮಾಡಿ ಹೇಳಿದರೆ ಅದು ನಿಜಕ್ಕೂ ಒಳ್ಳೆಯದಲ್ಲ ಎಂದು ಭಾವಿಸುವೆ. ಯಾವುದೇ ಮಹಿಳೆಯನ್ನು ಈ ರೀತಿ ಬಳಸಿಕೊಳ್ಳಬಾರದು” ಎಂದು ಹೇಮಾ ಮಾಲಿನಿ ( dream girl hema malini ) ಅವರು ಕೆನ್ನೆ ವಿಷಯದ ಬಗ್ಗೆ ಮಾತನಾಡಿದ್ದಾರೆ.

‘ಕನಸಿನ ಕನ್ಯೆ’ ಹೇಮಾ ಮಾಲಿನಿಗೆ ಮದುವೆ ಪ್ರಪೋಸಲ್ ಕಳಿಸಿದ್ದ ನಟ ರಾಜ್‌ ಕುಮಾರ್!

ಬಾಲಿವುಡ್‌ನ ಯಶಸ್ವಿ ನಟಿ ಹೇಮಾ ಮಾಲಿನಿ
ಇತ್ತೀಚೆಗಷ್ಟೇ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದ ಹೇಮಾ ಮಾಲಿನಿ, “ನಾನು, ಧರ್ಮೇಂದ್ರ ಇಬ್ಬರೂ ಪರಸ್ಪರ ಬೇರೆಯವರ ಕೆಲಸವನ್ನು ಗೌರವಿಸುತ್ತೇವೆ, ಸಹಕಾರ ನೀಡುತ್ತೇವೆ” ಎಂದು ಹೇಳಿದ್ದರು. ತೆಲುಗು, ತಮಿಳು, ಹಿಂದಿ ಸೇರಿ 100ಕ್ಕೂ ಅಧಿಕ ಸಿನಿಮಾಗಳಲ್ಲಿ ಹೇಮಾ ಮಾಲಿನಿ ಬಣ್ಣ ಹಚ್ಚಿದ್ದಾರೆ. ಬಾಲಿವುಡ್‌ನ ಈ ಯಶಸ್ವಿ ನಟಿಗೆ Dream Girl ಎಂಬ ಬಿರುದು ಇದೆ. 73 ವರ್ಷದ ಹೇಮಾ ಮಾಲಿನಿ ಇಂದು ಕೂಡ ಅದ್ಭುತವಾಗಿ ಡ್ಯಾನ್ಸ್ ಮಾಡೋದನ್ನು ಕಂಡು ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅಂದಹಾಗೆ ಹೇಮಾ ಮಾಲಿನಿ, ಧರ್ಮೇಂದ್ರ ದಂಪತಿಗೆ ಇಬ್ಬರು ಮಕ್ಕಳು. 2003ರಿಂದ ರಾಜಕೀಯದಲ್ಲಿ ಸಕ್ರಿಯವಾಗಿರುವ ಹೇಮಾ ಮಾಲಿನಿ, ಚಿತ್ರರಂಗಕ್ಕೆ ನೀಡಿದ ಕೊಡುಗೆ ದೊಡ್ಡದು. ನಿರ್ಮಾಪಕಿ, ಬರಹಗಾರ್ತಿಯಾಗಿಯೂ ಹೇಮಾ ಗುರುತಿಸಿಕೊಂಡಿದ್ದಾರೆ.



Read more