Karnataka news paper

ಆಕಾಶದಲ್ಲಿ ಕಂಡ ಚಲಿಸುವ ಬೆಳಕಿನ ಸರಮಾಲೆಗೆ ಅಚ್ಚರಿಯ ಕಾರಣ ಏನು ಗೊತ್ತಾ?


|

ನೆನ್ನೆ ಸಂಜೆ 7 ರ ಸುಮಾರಿಗೆ ರಾಜ್ಯದ ಕೆಲವು ಪ್ರದೇಶಗಳಲ್ಲಿ ಆಗಸದಲ್ಲಿ ಅಚ್ಚರಿಯ ಮೂಡಿಸುವಂತಹ ಸನ್ನಿವೇಶ ಕಂಡು ಬಂದಿದೆ. ಆಕಾಶದಲ್ಲಿ ಸಾಗುತ್ತಿರುವ ಬೆಳಕಿನ ಸರಮಾಲೆ ಕಂಡು ಬಂದಿದ್ದು, ಇದನ್ನು ಕಂಡ ಜನರು ಆಶ್ಚರ್ಯಗೊಂಡಿದ್ದರು. ನೋಡಲು ಅವು ನಕ್ಷತ್ರಗಳಂತೆ ಕಂಡು ಬಂದಿದ್ದು, ರೈಲಿನಂತೆ ಚಲಿಸಿದ್ದು ಜನರಲ್ಲಿ ಅಚ್ಚರಿ ಮೂಡಿಸಿದ್ದವು. ಆದರೆ ಅದರ ಅಸಲಿ ಕಾರಣ ಏನು ಎನ್ನುವುದು ಈಗ ಬಹಿರಂಗ ಆಗಿದೆ.

ಆಕಾಶದಲ್ಲಿ ಕಂಡ ಚಲಿಸುವ ಬೆಳಕಿನ ಸರಮಾಲೆಗೆ ಅಚ್ಚರಿಯ ಕಾರಣ ಏನು ಗೊತ್ತಾ?

ಆಗಸದಲ್ಲಿ ಕಂಡ ಬೆಳಕಿನ ಸರಮಾಲೆಗೆ ಕಾರಣ ವಿಶ್ವದ ಶ್ರೀಮಂತ ಉದ್ಯಮಿ ಆಗಿ ಗುರುತಿಸಿಕೊಂಡಿರುವ ಎಲಾನ್ ಮಸ್ಕ್ (Elon Musk). ಹೌದು, ಸ್ಯಾಟ್‌ಲೈಟ್‌ಗಳ ಮೂಲಕ ವಿಶ್ವದ ಮೂಲೆ ಮೂಲೆಗೂ ಅಂತರ್ಜಾಲ / ಇಂಟರ್ನೆಟ್ ಸೇವೆಯನ್ನು ಒದಗಿಸುವ ಗುರಿಯನ್ನು ಹಾಕಿಕೊಂಡಿರುವ ಎಲಾನ್ ಮಸ್ಕ್ ಮಾಲೀಕತ್ವದ ಸ್ಪೇಸ್ ಎಕ್ಸ್ (SpaceX) ಸಂಸ್ಥೆಯು ಉಡಾವಣೆ ಮಾಡಿರುವ ಸರಣಿ ಉಪಗ್ರಹಗಳ ಸರಮಾಲೆಯೇ ಆಕಾಶದಲ್ಲಿ ಆ ರೀತಿ ಕಂಡು ಬಂದಿವೆ.

ಅಮೆರಿಕಾದ ಸ್ಪೇಸ್ ಎಕ್ಸ್ (SpaceX) ಕ್ಯಾಲಿಫೋರ್ನಿಯಾ ಸನಿಹದ ಉಡಾವಣೆ ಕೇಂದ್ರದಿಂದ 52 ಸ್ಟಾರ್‌ಲಿಂಕ್ (Starlink) ಸ್ಯಾಟ್‌ಲೈಟ್‌ಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಸಂಸ್ಥೆಯು ಈಗಾಗಲೇ ಸುಮಾರು 1,800ಕ್ಕೂ ಅಧಿಕ ಉಪಗ್ರಹಗಳನ್ನು ಉಡಾವಣೆ ಮಾಡಿದ್ದು, ಆ ಪೈಕಿ 1,732 ಉಪಗ್ರಹಗಳು ತಮ್ಮ ನಿಗದಿತ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುತ್ತಿವೆ ಎನ್ನಲಾಗಿದೆ. ಸಂಸ್ಥೆಯು ತನ್ನ ಸ್ಟಾರ್‌ಲಿಂಕ್ ಯೋಜನೆಯಲ್ಲಿ ವಿವಿಧ ಹಂತಗಳಲ್ಲಿ ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತಿದೆ. ಆ ಪೈಕಿ ಒಂದು ಗುಂಪಿನ ಉಪಗ್ರಹಗಳು ಸಾಗುತ್ತಿರುವುದು ಆಕಾಶದಲ್ಲಿ ಗೋಚರಿಸಿದೆ.

Best Mobiles in India

  • 54,535

  • 1,19,900

  • 54,999

  • 86,999

  • 49,975

  • 49,990

  • 20,999

  • 1,04,999

  • 44,999

  • 64,999

  • 20,699

  • 49,999

  • 11,499

  • 54,999

  • 7,999

  • 8,980

  • 17,091

  • 10,999

  • 34,999

  • 39,600


  • 25,750


  • 33,590


  • 27,760


  • 44,425


  • 13,780


  • 1,25,000


  • 45,990


  • 1,35,000


  • 82,999


  • 17,999

English summary

Mysterious Moving Starlight Appeared In The Sky: It is Elon Musk’s Starlink Satellite.

Story first published: Tuesday, December 21, 2021, 11:22 [IST]



Read more…