Karnataka news paper

ಆನ್‌ಲೈನ್‌ ವಂಚಕನಿಂದ ಒಂದು ಲಕ್ಷ ರೂ. ಕಳೆದುಕೊಂಡ ವಿನೋದ್‌ ಕಾಂಬ್ಳಿ!


ಹೈಲೈಟ್ಸ್‌:

  • ಆನ್‌ಲೈನ್‌ ವಂಚಕರ ಬಲೆಗೆ ಬಿದ್ದು 1 ಲಕ್ಷ ರೂ. ಕಳೆದುಕೊಂಡಿದ್ದ ವಿನೋದ್‌ ಕಾಂಬ್ಳಿ.
  • ಸೈಬರ್‌ ಪೊಲೀಸರ ನೆರವಿನಿಂದ ಪುನಃ ಒಂದು ಲಕ್ಷ ರೂ. ಮರಳಿ ಪಡೆದುಕೊಂಡ ಕಾಂಬ್ಳಿ.
  • ಡಿಸೆಂಬರ್‌ 3 ರಂದು ಆನ್‌ಲೈನ್‌ ವಂಚಕನಿಂದ ಹಣ ಕಳೆದುಕೊಂಡಿದ್ದ ಮಾಜಿ ಕ್ರಿಕೆಟಿಗ.

ಹೊಸದಿಲ್ಲಿ: ಆನ್‌ಲೈನ್‌ ವಂಚಕನ ಬಲೆಗೆ ಬಿದ್ದ ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ವಿನೋದ್‌ ಕಾಂಬ್ಳಿ ಒಂದು ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಂದ್ರಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬ್ಯಾಂಕ್‌ ಸಿಬ್ಬಂದಿ ಎಂದು ಹೇಳಿಕೊಂಡು ವಿನೋದ್‌ ಕಾಂಬ್ಳಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ ಮಾಜಿ ಕ್ರಿಕೆಟಿಗನಿಗೆ ಲಿಂಕ್‌ವೊಂದನ್ನು ಕಳುಹಿಸಿದ್ದಾರೆ. ಆ ಮೂಲಕ ಈ ಲಿಂಕ್‌ನಲ್ಲಿದ್ದ ಪತ್ರವೊಂದನ್ನು ಅವರು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಇದಾದ ಬಳಿಕ ವಿನೋದ್ ಕಾಂಬ್ಳಿ ಅವರ ಅಕೌಂಟ್‌ನಿಂದ ಒಂದು ಲಕ್ಷ ರೂ. ಹಣ ವಿಥ್‌ಡ್ರಾ ಆಗಿದೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ದೂರು ದಾಖಲಾದ ಬಳಿಕ ಮುಂಬೈ ಪೋಲಿಸರು ಹಾಗೂ ಸೈಬರ್‌ ಪೊಲೀಸರು ವಿನೋದ್ ಕಾಂಬ್ಳಿ ಖಾತೆ ಹೊಂದಿದ್ದ ಬ್ಯಾಂಕ್ ಅಧಿಕಾರಿಗಳ ನೆರವಿನಿಂದ ವಂಚಕನಿಂದ ಕಳೆದುಕೊಂಡಿದ್ದ ಒಂದು ಲಕ್ಷ ರೂ. ಹಣವನ್ನು ಮಾಜಿ ಕ್ರಿಕೆಟಿಗನ ಖಾತೆಗೆ ಪುನಃ ಕಳುಹಿಸಿದ್ದಾರೆ.

ಮಾಧ್ಯಮ ಹಕ್ಕು ಹರಾಜು: ಕ್ರೀಡಾ ಬ್ರಾಡ್‌ಕಾಸ್ಟಿಂಗ್‌ಗೆ ಮುಖೇಶ್‌ ಅಂಬಾನಿ ಪ್ರವೇಶ?

“ಡಿಸೆಂಬರ್‌ 3 ರಂದು ಬ್ಯಾಂಕ್‌ ಸಿಬ್ಬಂದಿಯೆಂದು ಒಬ್ಬ ವ್ಯಕ್ತಿ ವಿನೋದ್‌ ಕಾಂಬ್ಳೆಗೆ ಕರೆ ಮಾಡಿದ್ದಾರೆ ಹಾಗೂ ಬ್ಯಾಂಕ್‌ ಸಂಬಂಧ ಕೆವೈಸಿಯನ್ನು ಅಪಡೇಟ್‌ ಮಾಡಲು ಹೇಳಿದ್ದಾರೆ. ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿಕೊಂಡ ಬಳಿಕ ವಂಚಕ ಮಾಜಿ ಕ್ರಿಕೆಟಿಗನ ಫೋನ್‌ ನಿಯಂತ್ರಣವನ್ನು ಪಡೆದುಕೊಂಡಿದ್ದಾನೆ. ನಂತರ ಕಾಂಬ್ಳಿ ಅವರ ಬ್ಯಾಂಕ್‌ ಹಾಗೂ ಓಟಿಪಿ ಪಡೆದುಕೊಂಡು ಒಂದು ಲಕ್ಷಕ್ಕೂ ಅಧಿಕ ಮೊತ್ತವನ್ನು ವಿಥ್‌ಡ್ರಾ ಮಾಡಿಕೊಂಡಿದ್ದಾನೆ,” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

“ವಿಥ್‌ಡ್ರಾ ಆಗಿರುವ ಬಗ್ಗೆ ಫೋನ್‌ಗೆ ನೋಟಿಫೀಕೇಷನ್‌ ಬಂದ ಕೂಡಲೇ ಎಚ್ಚೆತ್ತುಕೊಂಡ ವಿನೋದ್‌ ಕಾಂಬ್ಳಿ ಪೊಲೀಸರಿಗೆ ಕರೆ ಮಾಡಿದ್ದಾರೆ ಹಾಗೂ ಬ್ಯಾಂಕ್‌ಗೆ ವಿಷಯ ತಿಳಿಸಿ ತಮ್ಮ ಖಾತೆಯನ್ನು ಬ್ಲ್ಯಾಕ್‌ ಮಾಡಿಸಿಕೊಂಡಿದ್ದಾರೆ. ನಂತರ ತಮ್ಮ ಹಣವನ್ನು ಪುನಃ ಪಡೆದುಕೊಳ್ಳಲು ನೆರವಾದ ಸೈಬರ್‌ ಪೊಲಿಸರಿಗೆ ಮಾಜಿ ಕ್ರಿಕೆಟಿಗ ಧನ್ಯವಾದ ಅರ್ಪಿಸಿದ್ದಾರೆ.

ಅಂಡರ್‌ 19 ಏಷ್ಯಾಕಪ್‌ಗೆ ಯಂಗ್‌ ಇಂಡಿಯಾ ಪ್ರಕಟ, ಯಶ್‌ ನಾಯಕ!

“ವಂಚನೆ ಅಪರಾಧಗಳು ಹೆಚ್ಚುತ್ತಿರುವುದು ದುರದೃಷ್ಟಕರ. ನನ್ನ ಹಣವನ್ನು ನಾನು ಪುನಃ ಪಡೆದುಕೊಂಡಿದ್ದೇನೆ. ಆದರೆ, ಇಂತಹ ಬಹುತೇಕ ಪ್ರಕರಣಗಳಲ್ಲಿ ವಂಚಕರಿಂದ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಸೈಬರ್‌ ಪೊಲೀಸರಿಗೆ ಬೆಂಬಲ ನೀಡುವ ವಿಷಯದಲ್ಲಿ ನನಗೆ ಸಂತೋಷವಿದೆ. ಮುಂದಿನ ದಿನಗಳಲ್ಲಿ ಇಂಥಾ ಪ್ರಕರಣಗಳು ನಡೆಯದಂತೆ ತಡೆಯುವ ಅಗತ್ಯವಿದೆ,” ಎಂದು ವಿನೋದ್‌ ಕಾಂಬ್ಳಿ ತಿಳಿಸಿದ್ದಾರೆ.

ಅಂದಹಾಗೆ ವಿನೋದ್‌ ಕಾಂಬ್ಳಿ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ ಜೊತೆಯಲ್ಲಿಯೇ ಕ್ರಿಕೆಟ್‌ ಆಡಿದ್ದವರು. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಿ ಮರೆಯಾಗಿದ್ದರು. ಅವರು ಆಡಿರುವ 17 ಟೆಸ್ಟ್ ಪಂದ್ಯಗಳಲ್ಲಿ 4 ಶತಕ ಸೇರಿದಂತೆ 1084 ರನ್‌ ಗಳಿಸಿದ್ದಾರೆ ಹಾಗೂ 104 ಓಡಿಐ ಪಂದ್ಯಗಳಿಂದ 2 ಶತಕ ಸೇರಿದಂತೆ 2477 ರನ್‌ ಕಲೆ ಹಾಕಿದ್ದಾರೆ.

ಹೆಡ್‌ ಕೋಚ್‌ ದ್ರಾವಿಡ್‌ರ ಕಾರ್ಯವೈಖರಿ ಬಗ್ಗೆ ಪ್ರತಿಕ್ರಿಯಿಸಿದ ರೋಹಿತ್‌!



Read more